113 ಕೆ.ಜಿ ಯಿಂದ 57 ಕೆ.ಜಿಗೆ ತೂಕ ಇಳಿಸಿಕೊಂಡ Zareen Khan ಜರ್ನಿ!

Published : Apr 23, 2022, 05:41 PM ISTUpdated : Apr 23, 2022, 07:30 PM IST

ನಟಿ ಜರೀನ್ ಖಾನ್ (Zareen Khan) ಬಾಲಿವುಡ್‌ನಲ್ಲಿ ಯಾವುದೇ ವಿಶೇಷ ಸಾಧನೆ ಮಾಡಿಲ್ಲ. ಆದರೆ ದಕ್ಷಿಣದ ಚಿತ್ರಗಳಲ್ಲಿ ಅವರು ಒಳ್ಳೆಯ ಹೆಸರು ಮಾಡಿದ್ದಾರೆ. ಚಿತ್ರರಂಗಕ್ಕೆ ಸೇರುವ ಮುನ್ನ ಆಕೆ ಗಗನಸಖಿ ಆಗಬೇಕೆಂದು ಬಯಸಿದ್ದರು. ಅದಕ್ಕೂ ತಯಾರಿ ನಡೆಸುತ್ತಿದ್ದರು.  ಆದರೆ ಅವರ ಅದೃಷ್ಟ   ಬೇರೆಯಾಗಿತ್ತು.  ಜರೀನ್ ಖಾನ್ 100 ಕೆಜಿಯಿಂದ 57 ಕೆಜಿಗೆ ತಲುಪಿದ್ದು ಹೇಗೆ ಎಂದು ಅವರೇ ಹೇಳಿದ್ದಾರೆ. 

PREV
19
113 ಕೆ.ಜಿ ಯಿಂದ  57 ಕೆ.ಜಿಗೆ ತೂಕ ಇಳಿಸಿಕೊಂಡ Zareen Khan ಜರ್ನಿ!

ಜರೀನ್ ಖಾನ್ ಅವರನ್ನು ಬಾಲಿವುಡ್ ಗೆ ಕರೆತಂದ ಶ್ರೇಯಸ್ಸು ಸಲ್ಮಾನ್ ಖಾನ್ ಗೆ ಸಲ್ಲುತ್ತದೆ. ‘ವೀರ್’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.  113 ಕೆ.ಜಿ. ತೂಕ ಇದ್ದ ಜರೀನ್‌   ತುಂಬಾ ಕಷ್ಟಪಟ್ಟು ಅದನ್ನು ಕಡಿಮೆ ಮಾಡಿದರು. ಜರೀನ್ ಖಾನ್ ತನ್ನ ತೂಕ ಇಳಿಸುವ ಜರ್ನಿಯ ಬಗ್ಗೆ ನಟಿ ಹಂಚಿ ಕೊಂಡಿದ್ದಾರೆ
 

29

ಪಿಂಕ್ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ, ನಟಿ ತಮ್ಮ ತೂಕ ಇಳಿಸುವ ಪ್ರಯಾಣದ ಬಗ್ಗೆ ಹೇಳಿದ್ದಾರೆ. ತಮ್ಮ ತೂಕವನ್ನು ಹೆಚ್ಚಿಸಿದಾಗ ನನಗೇನು ಅದರಿಂದ ವ್ಯತ್ಯಾಸವಾಗಿಲ್ಲ ಎಂದು ಹೇಳಿದ್ದಾರೆ. ಹೆಚ್ಚಿದ ತೂಕದಲ್ಲಿ ಸಹ  ಅವರು  ತುಂಬಾ ಕಂಫರ್ಟಬಲ್ ಆಗಿದ್ದರು‌.  

39

ತುಂಬಾ ಸುಂದರವಾಗಿರಲು, ಸ್ವಲ್ಪ ತೂಕ ಕಡಿಮೆ ಮಾಡಿಕೊಳ್ಳಿ ಎಂದು ಮನೆಯವರು ಹೇಳುತ್ತಿದ್ದರು. ಆದರೆ ಆ ಸಮಯದಲ್ಲಿ ಅದರ ಅಗತ್ಯವನ್ನು ಅವರು ಅರ್ಥಮಾಡಿಕೊಳ್ಳಲಿಲ್ಲ ಎಂದಿದ್ದಾರೆ. ಗಗನಸಖಿಯಾಗಲು ತೂಕ ಇಳಿಸುವ ಪ್ರಯಾಣ ಆರಂಭಿಸಿದೆ.

49

ಜನರು ಅವಳನ್ನು ದಪ್ಪ ಎಂದು ಕರೆಯುವಾಗ ಅದು ತನಗೆ ತೊಂದರೆಯಾಗಲಿಲ್ಲ ಎಂದು ಜರೀನ್ ಹೇಳಿದರು. ನನ್ನ ಹೆತ್ತವರು ಬೇರ್ಪಡುತ್ತಿರುವಾಗ, ನಾನು ಹಣ ಸಂಪಾದಿಸುವ ಬಗ್ಗೆ ಯೋಚಿಸಬೇಕಾಗಿತ್ತು ಎಂದು ಜರೀನ್ ಖಾನ್ ಹೇಳಿದ್ದಾರೆ. 

59

ನನಗೆ ಪ್ರಯಾಣ ಮಾಡುವುದು ತುಂಬಾ ಇಷ್ಟವಾಗಿತ್ತು. ಏರ್‌ಲೈನ್ಸ್‌ನಲ್ಲಿ ಏನಾದರೂ ಮಾಡಬೇಕು ಎಂದು ಯೋಚಿಸಿದೆ. ನನ್ನ ಕಸಿನ್‌ ಗಗನಸಖಿಯಾಗಿದ್ದರು. ಆದರೆ 100 ಕೆಜಿ ತೂಕದ ಹುಡುಗಿಯನ್ನು ಗಗನಸಖಿ ಮಾಡುವವರು ಯಾರು?

69

ಇದಾದ ನಂತರ ನನ್ನ ತೂಕ ಇಳಿಸುವ ಪಯಣ ಆರಂಭವಾಯಿತು ಎಂದು ಜರೀನ್ ಖಾನ್ ತನ್ನ ತೂಕ ಇಳಿಸುವ ಪ್ರಯಾಣದ ಬಗ್ಗೆ ಪ್ರಾಮಾಣಿಕವಾಗಿ ಹೇಳುತ್ತಾರೆ. ಆ ಸಮಯದಲ್ಲಿ ಡಯೆಟಿಷಿಯನ್ ಅಥವಾ ಜಿಮ್‌ಗೆ ಹೋಗಲು ಸಾಕಷ್ಟು ಹಣವಿರಲಿಲ್ಲ. 

79

ಹಾಗಾಗಿ ನಾನು ಗೂಗಲ್ ಮತ್ತು ಇಂಟರ್ನೆಟ್ ಅನ್ನು ಆಶ್ರಯಿಸಿದೆ. ನಾನು ಎಲ್ಲಾ ಡಯಟ್‌ ಪ್ರಯತ್ನಿಸಿದೆ. ನಾನು ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸಿದಾಗ, ನಾನು ತುಂಬಾ ಹಗುರವಾದ ಮತ್ತು ಸ್ಟ್ರಾಂಗ್‌ ಫೀಲ್‌ ಮಾಡಲು ಪ್ರಾರಂಭಿಸಿದೆ

89

ಆಹಾರ ಮತ್ತು ವ್ಯಾಯಾಮದಿಂದ, ನಾನು ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸಿದೆ. ಜರೀನ್ ಈಗ ಯಾವ ಡಯಟ್ ಅನುಸರಿಸುತ್ತಿದ್ದಾರೆ ಎಂಬುದರ ಕುರಿತು, ಅವರು ಈ ಸಮಯದಲ್ಲಿ ಕೀಟೋ ಡಯಟ್ ಫಾಲೋ ಮಾಡುತ್ತಿದ್ದಾರೆ  ಎಂದು ಹೇಳಿದರು. ಕೆಲವೊಮ್ಮೆ ಪಥ್ಯವನ್ನು ಅನುಸರಿಸದಿದ್ದರೆ ಮತ್ತು ಚಿಟ್ ಮಾಡಿದರೆ,  ಇಂಟರ್‌ಮಿಟೆಂಟ್‌ ಫಾಸ್ಟಿಂಗ್‌  ಮಾಡುತ್ತಾರೆ. ಇದು ಸಮತೋಲನಗೊಳಿಸುತ್ತದೆ.


 


 

99

గతేడాది తెలుగులోకి ఎంట్రీ ఇచ్చి గోపీచంద్‌ హీరోగా రూపొందిన `చాణక్య`లో కీలక పాత్ర పోషించింది. ఇందులో అందంతోపాటు యాక్షన్‌తోనూ అదగొట్టింది. ప్రస్తుతం `హమ్‌ భీ అకెలె తుమ్‌ భీ అకెలే` చిత్రంలో నటిస్తుంది. 

ಇದರೊಂದಿಗೆ ಜರೀನ್ ವರ್ಕೌಟ್ ಮಾಡುತ್ತಾರೆ. ತೂಕ ಇಳಿಸಲು ನೀರು ಬಹಳ ಮುಖ್ಯ ಎನ್ನುವ ಅವರು ತುಂಬಾ ನೀರು ಕುಡಿಯುತ್ತಾರೆ. ಜರೀನ್ ಪ್ರಕಾರ ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಬೇಕು. ಇದು ದೇಹವನ್ನು ಡಿಟಾಕ್ಸ್‌ ಮಾಡುತ್ತದೆ.  

Read more Photos on
click me!

Recommended Stories