ಬಾಲಿವುಡ್‌ನ ಫಿಟ್ ಆಂಡ್ ಹಾಟ್ ನಟಿ ಮಲೈಕಾ ಆರೋರಾ ಕಳೆದ ದಿನ ಬಾಂದ್ರಾದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ಅವರು ಡಿಸೈನರ್ ಜಾಕೆಟ್ ಮತ್ತು ಅದೇ ರೀತಿಯ ಶಾರ್ಟ್ಸ್ ಧರಿಸಿರುವುದನ್ನು ಕಾಣಬಹುದು.
ಮಲೈಕಾ ತಮ್ಮ ಔಟ್‌ಫಿಟ್ ಜೊತೆ ಬಿಳಿಯ ಬೂಟ್‌ಗಳನ್ನು ಪೇರ್ ಮಾಡಿಕೊಂಡಿದ್ದರು ಮತ್ತು ಕೈಯಲ್ಲಿ ಗೋಲ್ಡನ್ ಕಲರ್ ಹ್ಯಾಂಡ್ ಬ್ಯಾಗ್ ಹಿಡಿದಿದ್ದರು. ಕೂದಲನ್ನು ಕಟ್ಟಿದ್ದ ಮಲೈಕಾ ಮಿನಿಮಮ್ ಮೇಕಪ್‌ನಲ್ಲಿ ಕಾಣಿಸಿಕೊಂಡರು.
ಮಲೈಕಾ ಅರೋರಾ ಇತ್ತೀಚೆಗೆ ಕಾರು ಅಪಘಾತದಲ್ಲಿ ಸಿಲುಕಿದಾಗ ಸ್ವಲ್ಪದರಲ್ಲೇ ಪಾರಾಗಿದ್ದರು. ಮುಂಬೈ-ಪುಣೆ ಹೆದ್ದಾರಿಯಲ್ಲಿ ಅವರ ಕಾರು ಡಿಕ್ಕಿ ಹೊಡೆದು ನಟಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಸಮಯ ಕಳೆದ ನಟಿ ನಂತರ ಮನೆಗೆ ಮರಳಿದರು.
ಈಗ ಕೆಲಸವನ್ನು ಸಹ ಪುನರಾರಂಭಿಸಿದ್ದಾರೆ. ಒಂದು ವಾರದ ಹಿಂದೆ ಮಲೈಕಾ ಕೃತಜ್ಞತೆಯ ಟಿಪ್ಪಣಿಯನ್ನು ಹಂಚಿಕೊಂಡರು ಮತ್ತು ತನ್ನ ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಸಂದರ್ಶನವೊಂದರಲ್ಲಿ, ಮಲೈಕಾ ಅವರು ದೈಹಿಕವಾಗಿ ಗುಣವಾಗಿದ್ದರೂ, ಮಾನಸಿಕವಾಗಿ 'ಆ ಶಾಕ್ ಸಂಪೂರ್ಣವಾಗಿ ಹೋಗುವುದಿಲ್ಲ' ಎಂದು ಒಪ್ಪಿಕೊಂಡರು. ಈ ಘಟನೆಯು ತನಗೆ ಹೇಗೆ ಆಘಾತ ನೀಡಿದೆ ಎಂಬುದರ ಬಗ್ಗೆಯೂ ಮಲೈಕಾ ಮಾತನಾಡಿದ್ದಾರೆ.