ಮುಂಬೈ[ಜು. 12]  ವೆಬ್ ಸೀರಿಸ್ ಒಂದರಲ್ಲಿ ಹಾಟ್ ಆ್ಯಂಡ್ ಬೋಲ್ಡ್ ಆಣಿಸಿಕೊಂಡಿದ್ದ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಇದೀಗ ಹಾಲಿವುಡ್ ನಟನೊಬ್ಬನೊಂದಿಗೆ ಹಸಿ ಬಿಸಿ ದೃಶ್ಯದಲ್ಲಿ ದರ್ಶನ ನೀಡಿದ್ದಾರೆ.

ಇಂಟರ್ ನೆಟ್ ನಲ್ಲಿ ಲೀಕ್ ಆಗಿರುವ ವಿಡಿಯೋ ಸದ್ಯದ ವೈರಲ್ ಮೆಟಿರಿಯಲ್. ಬಾಲಿವುಡ್ ನಟಿ ರಾಧಿಕಾ ಆಪ್ಟೆ ಪರ್ಚೆಡ್ ಚಿತ್ರದಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದು ಹಳೆಯ ಸುದ್ದಿ.

ದಿ ವೆಡ್ಡಿಂಗ್ ಗೆಸ್ಟ್ ಎ ಬ್ರಿಟಿಷ್-ಅಮೆರಿಕನ್ ಚಿತ್ರದಲ್ಲಿ ಹಾಲಿವುಡ್ ನಟ ದೇವ್ ಪಟೇಲ್ ಜತೆ ರಾಧಿಕಾ ಆಪ್ಟೆ ನಟಿಸಿದ್ದು ಈ ಚಿತ್ರದ ಕೆಲ ಹಸಿಬಿಸಿ ದೃಶ್ಯಗಳು ವೈರಲ್ ಆಗಿವೆ.

ಚಿತ್ರವನ್ನು ಮೈಕಲ್ ವಿಂಟರ್ ಬಾಟಮ್ ನಿರ್ದೇಶನ ಮಾಡಿದ್ದಾರೆ. ಇನ್ನು ಸ್ಲಂಡಾಗ್ ಮಿಲೆನಿಯರ್ ಚಿತ್ರದ ಮೂಲಕ ದೇವ್ ಪಟೇಲ್ ಚಿತ್ರರಂಗಕ್ಕೆ  ಪದಾರ್ಪಣೆ ಮಾಡಿದ್ದರು ಎಂಬುದನ್ನು ಸ್ಮರಿಸಬಹುದು.