ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಹಾಗೂ ಗಾಸಿಪ್ ಕ್ರಿಯೇಟರ್ ಕರಣ್ ಜೋಹಾರ್ ಸಿಕ್ಕಾಪಟ್ಟೆ ಸಣ್ಣಗಾಗಿದ್ದಾರೆ. ಇದ್ದಕ್ಕಿದ್ದಂತೆ ವೇಟ್ ಲಾಸ್ ಮಾಡಲು ಕಾರಣ ಏನು ಎಂದು ನೆಟ್ಟಿಗರು ಪ್ರಶ್ನಿಸಲು ಶುರು ಮಾಡಿದ್ದಾರೆ.
26
ಸುಮಾರು ಮೂರ್ನಾಲ್ಕು ತಿಂಗಳ ಕಾಲ ಕರಣ್ ಜೋಹಾರ್ ಪ್ಯಾಪರಾಜಿ, ಕ್ಯಾಮೆರಾ ಮತ್ತು ಸಿನಿಮಾ ಕೆಲಸಗಳಿಂದ ದೂರ ಉಳಿದುಬಿಟ್ಟಿದ್ದರು. ಏನ್ ಮಾಡ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದ ಫ್ಯಾನ್ಸ್‌ಗೆ ವೇಟ್ ಲಾಸ್ ಲುಕ್ ನೋಡಿ ಬಿಗ್ ಶಾಕ್ ಆಗಿದೆ.
36
ಇದೇ ಮೊದಲ ಸಲ ಕರಣ್ ಜೋಹಾರ್ ಈ ರೀತಿ ಟ್ರಾನ್ಸ್‌ಫಾರ್ಮ್ ಆಗಿರುವುದು. ಈ ಹಿಂದೆ ಪ್ರಶ್ನೆ ಮಾಡಿದಾಗ ಹೆಲ್ತಿ ಲೈಫ್ ಸ್ಟೈಲ್‌ಗೆ ಬದಲಾಗುತ್ತಿರುವುದಾಗಿ ಹೇಳಿದರು. ಆದರೆ ಇಷ್ಟು ಸಣ್ಣಗಾಗಿರುವುದು ಯಾರಿಗೂ ಇಷ್ಟವಾಗುತ್ತಿಲ್ಲ.
46
'ನಾನು ಆರೋಗ್ಯಕ್ಕೆ ಪ್ರಮುಖ್ಯತೆ ನೀಡುತ್ತಿದ್ದೀನಿ. ಸರಿಯಾಗಿ ತಿನ್ನುತ್ತಿದ್ದೀನಿ, ಸರಿಯಾಗಿ ವ್ಯಾಯಾಮ ಮಾಡುತ್ತಿದ್ದೀನಿ ಹೀಗಾಗಿ ಇಷ್ಟು ಚೆನ್ನಾಗಿರುವ ಲುಕ್ ಕೊಟ್ಟಿದೆ. ಇದೇ ನಿಮ್ಮ ಪ್ರಶ್ನೆಗೆ ನನ್ನ ಉತ್ತರ' ಎಂದು ಕರಣ್ ಜೋಹಾರ್ ಹೇಳಿದ್ದರು.
56
'ನನ್ನ ಫಿಟ್ನೆಸ್ ಸೀಕ್ರೆಟ್‌ನ ಶೀಘ್ರದಲ್ಲಿ ರಿವೀಲ್ ಮಾಡುತ್ತೀನಿ. ಈಗ ನನಗೆ ಲೈಟರ್ ಹಾಗೂ ಬೆಟರ್ ಫೀಲ್ ಆಗುತ್ತಿದೆ. ಈ ಟ್ರಾನ್ಸ್‌ಫಾರ್ಮೆಷನ್ ನನಗೆ ತುಂಬಾನೇ ಖುಷಿ ಕೊಟ್ಟಿದೆ' ಎಂದಿದ್ದರು ಕರಣ್.
66
ಇನ್ನು ಕರಣ್ ಜೋಹಾರ್‌ಗೆ ಬಿಪಿ ಹೆಚ್ಚಾಗಿದೆ, ಸಕ್ಕರೆ ಕಾಯಿಲೆ ಬಂದಿದೆ, ಮನಸ್ಥಿತಿ ಹಾಳಾಗಿ ಹಾಗೆ ಹೀಗೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಇಬ್ಬರು ಮಕ್ಕಳು ಈಗ ಕರಣ್ ಜವಾಬ್ದಾರಿ ಆಗಿರುವ ಕಾರಣ ಈಗ ಆರೋಗ್ಯ