Surrogacy Star Kids: ಶಿಲ್ಪಾ ಶೆಟ್ಟಿ To ಶಾರುಖ್, ಬಾಡಿಗೆ ತಾಯ್ತನದ ಮೂಲಕ ಮಕ್ಕಳು ಪಡೆದವರು

Published : Jan 22, 2022, 06:07 PM ISTUpdated : Jan 22, 2022, 06:14 PM IST

ಬಾಡಿಗೆ ತಾಯ್ತನದ ಮೂಲಕ ಪ್ರಿಯಾಂಕಾ ಚೋಪ್ರಾ  (Priyanka Chopra) ಮಗುವಿನ ತಾಯಿಯಾಗಿದ್ದಾರೆ. ಶನಿವಾರದಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ (NickJonas) ಇನ್‌ಸ್ಟಾಗ್ರಾಮ್ ಮೂಲಕ ಈ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 'ನಾವು ಬಾಡಿಗೆ ತಾಯ್ತನದ ಮೂಲಕ ಒಂದು ಮಗುವನ್ನು ಸ್ವಾಗತಿಸಿದ್ದೇವೆ ಎಂದು ಖಚಿತಪಡಿಸಲು ನಮಗೆ ತುಂಬಾ ಸಂತೋಷವಾಗಿದೆ. ಈ ವಿಶೇಷ ಸಮಯದಲ್ಲಿ ನಾವು  ಗೌಪ್ಯತೆಯನ್ನು ಬಯಸುತ್ತೇವೆ. ನಾವು ನಮ್ಮ ಕುಟುಂಬದತ್ತ ಗಮನ ಹರಿಸಬೇಕು. ತುಂಬ ಧನ್ಯವಾದಗಳು' ಎಂದು ಪ್ರಿಯಾಂಕಾ ಮತ್ತು ನಿಕ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಸೆಲೆಬ್ರಿಟಿಯೊಬ್ಬರು ಬಾಡಿಗೆ ತಾಯ್ತನದ ಮೂಲಕ ಪೋಷಕರಾಗುತ್ತಿರುವುದು ಇದೇ ಮೊದಲಲ್ಲ, ಪ್ರಿಯಾಂಕಾ ಅವರಿಗಿಂತ ಮುಂಚೆಯೇ ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳು ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಬಾಲಿವುಡ್ ತಾರೆಯರು ಯಾರು ಪೋಷಕರಾದರು ಮತ್ತು ಅವರ ಮಕ್ಕಳ ವಿವರ ಇಲ್ಲಿದೆ.

PREV
110
Surrogacy Star Kids: ಶಿಲ್ಪಾ ಶೆಟ್ಟಿ To ಶಾರುಖ್, ಬಾಡಿಗೆ ತಾಯ್ತನದ ಮೂಲಕ ಮಕ್ಕಳು ಪಡೆದವರು

ಕೆಲವು ತಿಂಗಳ ಹಿಂದೆ, ಬಾಲಿವುಡ್‌ನ ಡಿಂಪಲ್ ಗರ್ಲ್ ಅಂದರೆ ಪ್ರೀತಿ ಜಿಂಟಾ ಅವಳಿ ಮಕ್ಕಳ ತಾಯಿಯಾದರು. ಆದರೆ, ಅವರು ಇನ್ನೂ ತಮ್ಮ ಮಕ್ಕಳ ಮುಖವನ್ನು ಬಹಿರಂಗಪಡಿಸಿಲ್ಲ. ಪ್ರೀತಿಯ ಹೊರತಾಗಿ, ಶಿಲ್ಪಾ ಶೆಟ್ಟಿ, ಶಾರುಖ್ ಖಾನ್, ಕರಣ್ ಜೋಹರ್, ಅಮೀರ್ ಖಾನ್, ಸೊಹೈಲ್ ಖಾನ್, ಕೃಷ್ಣಾ ಅಭಿಷೇಕ್, ಏಕ್ತಾ ಕಪೂರ್, ತುಷಾರ್ ಕಪೂರ್ (ತುಷಾರ್ ಕಪೂರ್), ಸನ್ನಿ ಲಿಯೋನ್ ಮತ್ತು ಇತರ ಸೆಲೆಬ್ರಿಟಿಗಳು ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದಾರೆ.

210

ಆಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ಮಗು ಪಡೆಯಲು ಬಾಡಿಗೆ ತಾಯ್ತನವನ್ನು ಆಶ್ರಯಿಸಿದ್ದರು. ಬಾಡಿಗೆ ತಾಯಿಯಿಂದ ಡಿಸೆಂಬರ್ 5, 2011 ರಂದು ಜನಿಸಿದ ತಮ್ಮ ಮಗನಿಗೆ ಆಮೀರ್ ಮತ್ತು ಕಿರಣ್ ದಂಪತಿಗಳು ಆಜಾದ್ ಎಂದು ಹೆಸರಿಟ್ಟರು. ಆಜಾದ್‌ನ ಜನನದ ಸಮಯದಲ್ಲಿ, ಈ ಮಗು ತನಗೆ ತುಂಬಾ ವಿಶೇಷವಾಗಿದೆ. ಏಕೆಂದರೆ ಅದರ ಜನನಕ್ಕಾಗಿ ಅವರು ಬಹಳ ಸಮಯ ಕಾಯುತ್ತಿದ್ದರು ಎಂದು ಆಮೀರ್ ಹೇಳಿದ್ದರು.

310

ಶಾರುಖ್ ಖಾನ್ ತಮ್ಮ ಮೂರನೇ ಮಗು ಅಬ್ರಾಮ್‌ನನ್ನು ಸರೋಗೇಟ್‌ ಮದರ್‌ ಮೂಲಕ ಪಡೆದರು. ಶಾರುಖ್ ಮತ್ತು ಗೌರಿ ಖಾನ್ ಇದಕ್ಕೂ ಮೊದಲು ಇಬ್ಬರು ಮಕ್ಕಳನ್ನು ಹೊಂದಿದ್ದರು ಬಾಲಿವುಡ್‌ನಲ್ಲಿ ಸರೋಗೆಸಿ ಆಶ್ರಯಿಸಿದವರಲ್ಲಿ ಈ ಜೋಡಿ ಮೊದಲಿಗರು. ಈಗ ಅವರ ಮಗ ಅಬ್ರಾಮ್‌ಗೆ 5 ವರ್ಷ.

410

ಫೆಬ್ರವರಿ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಶಿಲ್ಪಾ ಶೆಟ್ಟಿ ಮತ್ತೆ ಮಗಳ ತಾಯಿಯಾದರು. ತಮ್ಮ ಮಗಳಿಗೆ ಸಮಿಶಾ ಎಂದು ಹೆಸರಿಟ್ಟಿದ್ದಾರೆ. ಸಮೀಶಾ ಫೆಬ್ರವರಿ 15, 2020 ರಂದು ಜನಿಸಿದರು. ಆದರೆ, ಈ ಶುಭ ಸುದ್ದಿಯನ್ನು ಶಿಲ್ಪಾ ಫೆ.21ರಂದು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಶಿಲ್ಪಾ ಅವರಿಗೆ ಈಗಾಗಲೇ ವಿಯಾನ್ ರಾಜ್ ಕುಂದ್ರಾ ಎಂಬ ಮಗನಿದ್ದ.

510

ಜೀತೇಂದ್ರ ಅವರ ಮಗಳು ಮತ್ತು ಟಿವಿ ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ಅವರ ಸಹೋದರ ತುಷಾರ್ ಕಪೂರ್ ಇಬ್ಬರೂ ಸರೋಗೆಸಿ ಸಹಾಯದಿಂದ ಮಗುವನ್ನು ಪಡೆದು ಪೋಷಕರಾಗಿದ್ದಾರೆ. ಏಕ್ತಾ ಕಪೂರ್ ತನ್ನ ಮಗನಿಗೆ ಜಿತೇಂದ್ರನ ನಿಜವಾದ ಹೆಸರನ್ನು ರವಿ ಕಪೂರ್ ಎಂದು ನಾಮಕರಣ ಮಾಡಿದ್ದಾರೆ. ಏಕ್ತಾ ಕಪೂರ್‌ಗೂ ಮೊದಲು ಸಹೋದರ ತುಷಾರ್ ಕಪೂರ್ ಬಾಡಿಗೆ ತಾಯ್ತನವನ್ನು ಆಶ್ರಯಿಸಿದ್ದರು ಮತ್ತು ಅವರ ಮಗನ ಹೆಸರು ಲಕ್ಷ್ಯ.

610

ಬಾಲಿವುಡ್‌ನ ಫೇಮಸ್‌  ನಿರ್ಮಾಪಕ ಕರಣ್ ಜೋಹರ್ ಇಬ್ಬರು ಮಕ್ಕಳ ತಂದೆ. ಸರೋಗೆಸಿ ಸಹಾಯದಿಂದ ಆಕೆ ಇಬ್ಬರು ಅವಳಿ ಮಕ್ಕಳ ಸಿಂಗಲ್‌ ಪೇರೆಂಟ್‌ ಆಗಿದ್ದಾರೆ. ಅವರ ಮಗನ ಹೆಸರು ಯಶ್ ಜೋಹರ್, ಮಗಳ ಹೆಸರು ರೂಹಿ ಜೋಹರ್. ಕರಣ್ ಮಕ್ಕಳಿಬ್ಬರಿಗೂ ತಾಯಿ ಹಿರು ಮತ್ತು ತಂದೆ ಯಶ್ ಹೆಸರಿಟ್ಟಿದ್ದಾರೆ 

710

ಕಸೂರ್ ಚಿತ್ರದ ನಟಿ ಲೀಸಾ ರೇ 46 ನೇ ವಯಸ್ಸಿನಲ್ಲಿ ಅವಳಿ ಹೆಣ್ಣುಮಕ್ಕಳ ತಾಯಿಯಾದರು. ಬಾಡಿಗೆ ತಾಯ್ತನದ ಮೂಲಕ ತಾಯಿಯಾದ ಮೂರು ತಿಂಗಳ ನಂತರ ಇನ್ಸ್ಟಾಗ್ರಾಮ್ ಮೂಲಕ ಈ ವಿಷಯ ತಿಳಿಸಿದ್ದಾರೆ.ನಟಿ 2012 ರಲ್ಲಿ ಉದ್ಯಮಿ ಜೇಸನ್ ಡೆಹ್ನಿ ಅವರನ್ನು ವಿವಾಹವಾದರು ಮತ್ತು ಜೂನ್ 2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ತಾಯಿಯಾದರು.

810

ಫೇಮಸ್‌ ಕಾಮಿಡಿಯನ್‌  ಕೃಷ್ಣ ಅಭಿಷೇಕ್ ಕೂಡ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ತಂದೆಯಾಗಿದ್ದಾರೆ. ಕೃಷ್ಣ ಅಭಿಷೇಕ್ ಮತ್ತು ಅವರ ಪತ್ನಿ ಕಾಶ್ಮೀರಾ ಶಾ 2013 ರಲ್ಲಿ ವಿವಾಹವಾದರು.  

910

ಅಡಲ್ಟ್ ಇಂಡಸ್ಟ್ರಿಯಿಂದ ಬಾಲಿವುಡ್ ಗೆ ಕಾಲಿಟ್ಟ ನಟಿ ಸನ್ನಿ ಲಿಯೋನ್ ಇಂದು ಮೂರು ಮಕ್ಕಳ ತಾಯಿ. ಅವರು ಮೊದಲು 2017 ರಲ್ಲಿ ನಿಶಾ ಕೌರ್ ಎಂಬ ಹೆಣ್ಣು ಮಗುವನ್ನು ದತ್ತು ಪಡೆದರು. ಇದರ ನಂತರ, ಸರೋಗೆಸಿ ಸಹಾಯದಿಂದ, ಆಶರ್ ಸಿಂಗ್ ವೆಬರ್ ಮತ್ತು ನೋಹ್ ಸಿಂಗ್ ವೆಬರ್ ಎಂಬ ಇಬ್ಬರು ಅವಳಿ ಮಕ್ಕಳ ತಾಯಿಯಾದರು.

1010

ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಸೋಹೈಲ್ ಖಾನ್ ಸರೋಗೇಟ್‌ ಮದರ್‌ ಸಹಾಯದಿಂದ ಮತ್ತೊಂದು ಮಗುವಿನ ತಂದೆಯಾಗಿದ್ದಾರೆ. ಇದಕ್ಕೂ ಮೊದಲು ನಿರ್ವಾಣ ಎಂಬ ಮಗನ ತಂದೆಯಾಗಿದ್ದರು, ಆದರೆ ಮತ್ತೊಂದು ಮಗುವಿಗಾಗಿ ಆಸೆಯಿಂದ  ಸೊಹೈಲ್ ಖಾನ್ ಬಾಡಿಗೆ ತಾಯಿ ಆಶ್ರಯಿಸಿದರು. ಅವರು ತಮ್ಮ ಕಿರಿಯ ಮಗನಿಗೆ ಜೋಹಾನ್ ಎಂದು ಹೆಸರಿಟ್ಟಿದ್ದಾರೆ.

Read more Photos on
click me!

Recommended Stories