ಹುಟ್ಟುಹಬ್ಬದಂದು ಬೋಲ್ಡ್ ಡ್ರೆಸ್‌ನಲ್ಲಿ ದುವಾ ಲಿಪಾ; ಹಾಟ್‌ನೆಟ್‌ ಅಲರ್ಟ್ ಘೋಷಿಸಿದ ಪಡ್ಡೆ ಹುಡುಗ್ರು!

First Published | Aug 24, 2024, 2:44 PM IST

ಪಾಪ್ ಗಾಯಕಿ ದುವಾ ಲಿಪಾ ಹಾಡುಗಳ ಜೊತೆಯಲ್ಲಿ ತಮ್ಮ ಮೈಮಾಟದಿಂದಲೂ ಸುದ್ದಿಯಾಗುತ್ತಿರುತ್ತಾರೆ. ಇದೀಗ ತಮ್ಮ  29ನೇ ಹುಟ್ಟುಹಬ್ಬದಂದು ಮೈಮಾಟ ಕಾಣುವಂತೆ ತುಂಡುಡುಗೆ ಧರಿಸಿರುವ ಫೋಟೋಗಳು ವೈರಲ್ ಆಗುತ್ತಿವೆ.

ದುವಾ ಲಿಪಾ ತಮ್ಮ ಉಡುಗೆ ಆಯ್ಕೆಗಳಿಗೆ ಹೆಸರುವಾಸಿ. 29 ನೇ ಹುಟ್ಟುಹಬ್ಬದ ಆಚರಣೆಯೂ ಇದಕ್ಕೆ ಹೊರತಾಗಿಲ್ಲ. ಲಂಡನ್‌ನಲ್ಲಿ ಜನಿಸಿದ ಈ ಪಾಪ್ ಕಲಾವಿದೆ ಇಬಿಜಾ ವಾತಾವರಣಕ್ಕೆ ಸೂಕ್ತವಾದ ಫ್ಲಮೆಂಕೊ ಥೀಮ್‌ವುಳ್ಳ ಡ್ರೆಸ್ ಧರಿಸಿದ್ದಾರೆ.  (ಫೋಟೋ ಕೃಪೆ: Instagram)

“ಹೌಡಿನಿ” ಗಾಯಕಿ ತನ್ನ ಹುಟ್ಟುಹಬ್ಬ ಆಚರಣೆಯ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. (ಫೋಟೋ ಕೃಪೆ: Instagram)

Tap to resize

ಕಡುಗೆಂಪು ಬಣ್ಣದ ಕಟ್ ಪೀಸ್‌ ರೀತಿಯ ಗೌನ್ ಧರಿಸಿರುವ ದುವಾ ಲಿಪಾ, ಸುಂದರವಾದ ತೋಟದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕಡುಗೆಂಪು ಬಣ್ಣದ ಪರದೆ   ರೀತಿಯ ಗೌನ್‌ನಲ್ಲಿ ದುವಾ ಧರಿಸಿದ್ದ ಬ್ಲಾಕ್ ಬಿಕಿನಿ ಸಹ ಕಾಣಿಸುತ್ತಿದೆ. (ಫೋಟೋ ಕೃಪೆ: Instagram)

ಈ ಡ್ರೆಸ್‌ನಲ್ಲಿ ಪಡ್ಡೆ ಹುಡುಗರ ಮನಗೆದ್ದಿರುವ ದುವಾ ಲಿಪಾ, ಎಣ್ಣೆ ಬಾಟೆಲ್ ಹಿಡಿದು ಪೋಟೋಗಳಿಗೆ ಪೋಸ್ ನೀಡಿದ್ದಾರೆ. ಫೋಟೋಗಳಿಗೆ ಲೈಕ್ಸ್ ಸುರಿಮಳೆಯೇ ಸುರಿಯಲಾರಂಭಿಸಿದೆ. (ಫೋಟೋ ಕೃಪೆ: Instagram)

ಬರ್ತ್ ಡೇ ಪಾರ್ಟಿಯಲ್ಲಿ ಗಾಯಕಿಯ ಆಪ್ತ ಸ್ನೇಹಿಯರು ಮತ್ತು ಬಾಯ್‌ಫ್ರೆಂಡ್ ನಟ ಕ್ಯಾಲಮ್ ಟರ್ನರ್ ಭಾಗಿಯಾಗಿದ್ದರು. ಕೈಯಲ್ಲಿ ಶಾಂಪೇನ್ ಬಾಟೆಲ್ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. (ಫೋಟೋ ಕೃಪೆ: Instagram)

ದುವಾ ಲಿಪಾ ಈ ಹಿಂದೆಯೂ ಇಲ್ಲಿಗೆ ಭೇಟಿ ನೀಡಿದ್ದರು. ಇಲ್ಲಿ ತುಂಬಾ ಸುಂದರವಾದ ಚಿಕ್ಕ ಚಿಕ್ಕ ಬೀಚ್‌ಗಳಿವೆ. ಇಲ್ಲಿ ಎಂಜಾಯ್ ಮಾಡಲು ಬರಬಹುದು ಎಂದು ಹೇಳಿದ್ದರು. ಇದೀಗ ತಮ್ಮ ಬರ್ತ್ ಡೇ ಪಾರ್ಟಿಯನ್ನು ಇಲ್ಲಿಯೇ ಆಚರಿಸಿಕೊಂಡಿದ್ದಾರೆ. (ಫೋಟೋ ಕೃಪೆ: Instagram)

ದುವ ಲಿಪಾ ನವೆಂಬರ್ 30, 2024 ರಂದು ಮುಂಬೈನ ಬಿಕೆಸಿಯ MMRDA ನಲ್ಲಿ ನಡೆಯಲಿರುವ Zomato ಫೀಡಿಂಗ್ ಇಂಡಿಯಾ ಕಾನ್ಸರ್ಟ್ (ZFIC) 2024 ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. (ಫೋಟೋ ಕೃಪೆ: Instagram)

Latest Videos

click me!