ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ಗರ್ಲ್‌ಫ್ರೆಂಡ್ಸ್‌ ಪಟ್ಟಿ ಕಡಿಮೆಯೇನಿಲ್ಲ!

Published : Dec 01, 2022, 03:37 PM ISTUpdated : Dec 01, 2022, 04:34 PM IST

ಇಂದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್ ಗಾಯಕ ನಿಕ್ ಜೋನಾಸ್ (Priyanka Chopra-Nick Jonas) ಅವರ ವಿವಾಹ ವಾರ್ಷಿಕೋತ್ಸವ. 2018 ರಲ್ಲಿ  ಡಿಸೆಂಬರ್ 1 ರಂದು ಇಬ್ಬರೂ ಏಳು ಸುತ್ತುಗಳನ್ನು ತೆಗೆದುಕೊಂಡಿದ್ದರು.  ಈ ವರ್ಷ ಈ ದಂಪತಿಗಳು ಬಾಡಿಗೆ ತಾಯ್ತನದ ಸಹಾಯದಿಂದ ಇಬ್ಬರೂ ಮಾಲ್ತಿ ಎಂಬ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.  ಪ್ರಿಯಾಂಕಾಗೂ ಮೊದಲು  ನಿಕ್‌ ಅವರು 5 ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದರು.

PREV
18
ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ಗರ್ಲ್‌ಫ್ರೆಂಡ್ಸ್‌ ಪಟ್ಟಿ ಕಡಿಮೆಯೇನಿಲ್ಲ!

ಮದುವೆಗೂ ಮುಂಚಿನ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರ ಲವ್‌ಲೈಫ್‌ ಸಖತ್‌ ಸದ್ದು ಮಾಡಿತ್ತು. ನಿಕ್‌ ಅವರ ಜೊತೆ ಮದುವೆಯಾಗುವ ಮುನ್ನ ಪ್ರಿಯಾಂಕಾ ಕೂಡ ಹಲವು ಗೆಳೆಯರನ್ನು ಹೊಂದಿದ್ದು, ನಿಕ್ ಜೋನಾಸ್ ಗೆಳತಿಯರ ಪಟ್ಟಿಯೂ ಕಡಿಮೆಯೇನಿಲ್ಲ.


 

28

ನಿಕ್ ಜೋನಾಸ್ ಕೇವಲ 14 ನೇ ವಯಸ್ಸಿನಲ್ಲಿ ಪ್ರೀತಿಸುತ್ತಿದ್ದರು. ಶಾಲಾ ದಿನಗಳ ಸಂಬಂಧ ಸುಮಾರು ಒಂದೂವರೆ ವರ್ಷಗಳ ಕಾಲ ನಡೆಯಿತು. ಆದಾಗ್ಯೂ, ಮಾಧ್ಯಮ ವರದಿಗಳ ಪ್ರಕಾರ, ನಿಕ್ ಜೋನಾಸ್ ಮೊದಲ ಬಾರಿಗೆ ಗಾಯಕ ಮಿಲೀ ಸೈರಸ್ ಅವರನ್ನು ಪ್ರೀತಿಸುತ್ತಿದ್ದರು.


 

38

ಅಮೆರಿಕದ ಗಾಯಕಿ ಹಾಗೂ ನಟಿ ಮೈಲಿಗೆ ಮೊದಲು ಕಿಸ್ ಮಾಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ನಿಕ್ ಬಹಿರಂಗಪಡಿಸಿದ್ದರು. ಹಾಲಿವುಡ್‌ನ ಕ್ಯಾಲಿಫೋರ್ನಿಯಾ ಪಿಜ್ಜಾ ಕಿಚನ್‌ನ ಹೊರಗೆ ನಿಕ್ ಜೋನಾಸ್ ಮೊದಲ ಬಾರಿಗೆ ಮೈಲಿಗೆ ಮುತ್ತಿಟ್ಟರು.

48

2008 ರಲ್ಲಿ, ನಿಕ್ ತನ್ನ ಹೃದಯವನ್ನು ಗಾಯಕಿ ಸೆಲೆನಾ ಗೊಮೆಜ್‌ಗೆ ನೀಡಿದ್ದರು. ಆ ಸಮಯದಲ್ಲಿ ಗಾಯಕಿ-ನಟಿ ಸೆಲೆನಾ ಗೊಮೆಜ್ ನಿಕ್ ಜೋನಾಸ್ ಅವರ ಸಂಗೀತ ಆಲ್ಬಂ 'ಬರ್ನಿನ್ ಅಪ್' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಆದರೆ, ಈ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ.

58

2011 ರಲ್ಲಿ, ನಿಕ್ ಜೋನಾಸ್ ಆಸ್ಟ್ರೇಲಿಯನ್ ಗಾಯಕ ಡೆಲ್ಟಾ ಗುಡ್ರೆಮ್ ಮೇಲೆ ಕ್ರಶ್ ಹೊಂದಿದ್ದರು. ಈ ಪ್ರೀತಿ ಒಂದು ವರ್ಷವೂ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಡೆಲ್ಟಾ ಗುಡ್ರೆಮ್ ಮತ್ತು ನಿಕ್ ಜೋನಾಸ್ ಅವರ ವಯಸ್ಸಿನಲ್ಲಿ ಸುಮಾರು 8 ವರ್ಷಗಳ ವ್ಯತ್ಯಾಸವಿತ್ತು.


 

68

ಇದರ ನಂತರ, 2013 ರಲ್ಲಿ, ನಿಕ್ ಜೋನಾಸ್ ಮಾಡೆಲ್ ಒಲಿವಿಯಾ ಕಲ್ಪೋಗೆ ಆಕರ್ಷಿತರಾದರು. 2015 ರ ಹೊತ್ತಿಗೆ, ಜೋನಾಸ್ ಮತ್ತು ಕಲ್ಪೋ ಬೇರೆಯಾದರು.


 

78

ನಂತರ 2016 ಬರುವ ಮುನ್ನವೇ ಪ್ರಿಯಾಂಕಾ ಚೋಪ್ರಾ ಜೋನಾಸ್ ಜೀವನಕ್ಕೆ ಕಾಲಿಟ್ಟರು. ಗ್ರೀಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಭೇಟಿಯಾದರು. ಇಲ್ಲಿಂದ ಇಬ್ಬರ ನಡುವೆ ಪ್ರೀತಿ ಅರಳಲು ಶುರುವಾಯಿತು.


 

88

ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ವರ್ಷಗಳ ಸಂಬಂಧದ ನಂತರ 2018 ರಲ್ಲಿ ವಿವಾಹವಾದರು.  ಪತ್ನಿ ಪ್ರಿಯಾಂಕಾ ಅವರಿಗಿಂತ ನಿಕ್‌ ಸುಮಾರು 10 ವರ್ಷ ಚಿಕ್ಕವರು. ಆದರೂ ಇಬ್ಬರ ನಡುವೆ ಉತ್ತಮ ಬಾಂಧವ್ಯ ಕಂಡುಬಂದಿದೆ.
 

Read more Photos on
click me!

Recommended Stories