Nick Jonas Love Affairs: ಪ್ರಿಯಾಂಕಾ ನಿಕ್‌ ಅವರ ಮೊದಲ ಪ್ರೀತಿ ಅಲ್ಲ!

First Published | Nov 24, 2021, 5:52 PM IST

ಪ್ರಿಯಾಂಕಾ ಚೋಪ್ರಾ (Priyanka Chopra)ಮತ್ತು ನಿಕ್ ಜೋನಾಸ್ (Nick Jonas)ವಿಚ್ಛೇದನದ (Divorce) ಸುದ್ದಿಯಿಂದ ಇತ್ತೀಚೆಗೆ ನ್ಯೂಸ್‌ನಲ್ಲಿದ್ದಾರೆ. ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಿಂದ 'ಜೋನಾಸ್' (Jonas) ಎಂಬ surname ತೆಗೆದುಹಾಕಿದ್ದಾರೆ. ಅಂದಿನಿಂದ ಅವರ ವಿಚ್ಛೇದನದ ಸುದ್ದಿಯು ವೇಗವನ್ನು ಪ್ರಚಾರ ಪಡೆಯಲಾರಂಭಿಸಿತು. ಪ್ರಿಯಾಂಕಾ ಚೋಪ್ರಾ ಅವರ ಅಭಿಮಾನಿಗಳು ನಿಕ್ ಜೋನಾಸ್ ಅವರ ಅಫೇರ್ ಬೇರೆಡೆ ನಡೆಯುತ್ತಿದೆಯೇ ಎಂದು ಅನುಮಾನಿಸಲು ಪ್ರಾರಂಭಿಸಿದ್ದಾರೆ. ಅಂದಹಾಗೆ, ಪ್ರಿಯಾಂಕಾ ಚೋಪ್ರಾ ನಿಕ್ ಜೋನಾಸ್ ಅವರ ಮೊದಲ ಪ್ರೀತಿ ಅಲ್ಲ. ಪ್ರಿಯಾಂಕಾ ಅವರಿಗಿಂತ ಮುಂಚೆಯೇ ನಿಕ್ ಅನೇಕ ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದರು. ಇಲ್ಲಿದೆ ನಿಕ್‌ ಅವರ ಲವ್‌ ಲೈಫ್‌ ವಿವರ.

ನಿಕ್ ಜೋನಾಸ್ ತನ್ನ ಶಾಲಾ ದಿನಗಳಲ್ಲಿ 14 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಪ್ರೀತಿಯಲ್ಲಿ ಸಿಲುಕಿದರು. ಜೂನ್ 2006 ರಿಂದ ಡಿಸೆಂಬರ್ 2007 ರವರೆಗೆ ಅವರು ಆ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದರು. ಆದಾಗ್ಯೂ,ಕೆಲವು ಮಾಧ್ಯಮ ವರದಿಗಳು ನಿಕ್ ಜೋನಾಸ್ ಅವರ ಮೊದಲ ಪ್ರೀತಿ ಗಾಯಕ ಮಿಲೀ ಸೈರಸ್ ಎಂದು ಹೇಳುತ್ತದೆ,

ಮಿಲೀ ಸೈರಸ್ ಒಬ್ಬ ಅಮೇರಿಕನ್ ಗಾಯಕಿ ಮತ್ತು ನಟಿ ನಿಕ್‌ ಅವರ ಎರಡನೇ ಗರ್ಲ್‌ ಫ್ರೆಂಡ್‌ ಎನ್ನಲಾಗಿದೆ. ನಿಕ್ ಸ್ವತಃ ಸಂದರ್ಶನವೊಂದರಲ್ಲಿ ಮಿಲೀ ಅವರು ಚುಂಬಿಸಿದ ಮೊದಲ ಹುಡುಗಿ ಎಂದು ಹೇಳಿದರು. ನಿಕ್ ಜೋನಾಸ್ ಪ್ರಕಾರ, ಅವರು ಹಾಲಿವುಡ್‌ನ ಕ್ಯಾಲಿಫೋರ್ನಿಯಾ ಪಿಜ್ಜಾ ಕಿಚನ್‌ನ ಹೊರಗೆ ಮೊದಲ ಬಾರಿಗೆ ಮಿಲಿಗೆ ಕಿಸ್‌ ಮಾಡಿದ್ದರು.  

Tap to resize

ಇದರ ನಂತರ, 2008 ರಲ್ಲಿ, ನಿಕ್ ಜೋನಾಸ್ ಜೀವನಕ್ಕೆ ಹೊಸ ಹುಡುಗಿ ಪ್ರವೇಶಿಸಿದಳು. ಈ ಬಾರಿ ನಿಕ್ ಜೋನಾಸ್ ಗಾಯಕಿ ಸೆಲೆನಾ ಗೊಮೆಜ್ ಅವರನ್ನು ಪ್ರೀತಿಸುತ್ತಿದ್ದರು. ಸೆಲೆನಾ ನಿಕ್ ಅವರ ಮ್ಯೂಸಿಕ್‌ ವೀಡಿಯೊ 'ಬರ್ನಿನ್ ಅಪ್' ನಲ್ಲಿ ಸಹ ಕಾಣಿಸಿಕೊಂಡಿದ್ದರು. ಆದಾಗ್ಯೂ, ಸೆಲೆನಾ ಗೊಮೆಜ್ ಅವರೊಂದಿಗಿನ ನಿಕ್ ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಇಬ್ಬರೂ ಬೇರೆಯಾದರು.

ನಂತರ, ಮೇ 2011 ರಲ್ಲಿ, ನಿಕ್ ಜೋನಾಸ್ ಆಸ್ಟ್ರೇಲಿಯಾದ ಗಾಯಕಿ ಡೆಲ್ಟಾ ಗುಡ್ರೆಮ್ ಅವರ ಜೊತೆ ಸಂಬಂಧದಲ್ಲಿದ್ದರು. ಕೇವಲ 10 ತಿಂಗಳ ಕಾಲ ನಡೆದ ಈ ಸಂಬಂಧವು ಫೆಬ್ರವರಿ 2012 ರ ಹೊತ್ತಿಗೆ ಕೊನೆಗೊಂಡಿತು. ಡೆಲ್ಟಾ ಗುಡೆರ್ಮ್ ನಿಕ್ ಜೋನಾಸ್‌ಗಿಂತ ಸುಮಾರು 8 ವರ್ಷ ದೊಡ್ಡವಳು.

ನಿಕ್ ಜೋನಾಸ್ ಡೆಲ್ಟಾ ಗುಡೆರ್ಮ್ ತೊರೆದ ನಂತರ 2013 ರಲ್ಲಿ ಫ್ಯಾಶನ್ ಮಾಡೆಲ್ ಒಲಿವಿಯಾ ಕಲ್ಪೋ ಅವರ ಜೊತೆ ಡೇಟ್‌ ಮಾಡುತ್ತಿದ್ದರು. ಆದರೆ, ಇಬ್ಬರ ಈ ಸಂಬಂಧ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಈ ಜೋಡಿ  ಕೂಡ 2015 ರಲ್ಲಿ ಬೇರೆಯಾದರು.

Image courtesy: Priyanka Chopra's instagram account

2015 ರ ಕೊನೆಯಲ್ಲಿ ನಿಕ್ ಜೋನಾಸ್ ಜೀವನದಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಪ್ರವೇಶವಾಯಿತು. ನಿಕ್ ಗ್ರೀಸ್‌ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಪ್ರಪೋಸ್ ಮಾಡಿದರು. ಇವೆಂಟ್‌ವೊಂದರಲ್ಲಿ ಈ ಇಬ್ಬರು ಮೊದಲಿಗೆ ಭೇಟಿಯಾದರು. ಅಲ್ಲಿಂದ ಇಬ್ಬರೂ ನಂಬರ್‌ಗಳನ್ನು ವಿನಿಮಯ ಮಾಡಿಕೊಂಡರು ಮತ್ತು ನಂತರ ಇವರ ನಡುವೆ ಸ್ನೇಹ ಬೆಳೆದು ಪ್ರೀತಿ ಪ್ರಾರಂಭವಾಯಿತು.

ನಿಕ್ ಜೋನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ಅವರ ವಿವಾಹವು 2018 ರ ಅತ್ಯಂತ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಒಂದಾಗಿದೆ. ಪ್ರಿಯಾಂಕಾ-ನಿಕ್ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿಯ ಸ್ವಲ್ಪ ಸಮಯದ ನಂತರ, ಇಬ್ಬರ ನಿಶ್ಚಿತಾರ್ಥದ ಸುದ್ದಿ  ಬೆಳಕಿಗೆ ಬಂದಿತು ಮತ್ತು ಕೆಲವು ತಿಂಗಳ ನಂತರ ಇಬ್ಬರೂ ವಿವಾಹವಾದರು.

ಪ್ರಿಯಾಂಕಾ ಅವರು ನಿಕ್‌ಗಿಂತ ಸುಮಾರು 10 ವರ್ಷ ಹಿರಿಯರು,   ಇಬ್ಬರೂ ತಮ್ಮ ವೈವಾಹಿಕ ಜೀವನವನ್ನು ಅತ್ಯಂತ ಐಷಾರಾಮಿ ರೀತಿಯಲ್ಲಿ ಕಳೆಯುತ್ತಿದ್ದಾರೆ ಮತ್ತು ಎಂಜಾಯ್‌ ಮಾಡುತ್ತಿದ್ದಾರೆ. ಇವರ ರೋಮ್ಯಾಂಟಿಕ್‌ ಫೋಟೋಗಳು ಆಗಾಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿರುತ್ತವೆ.  

Latest Videos

click me!