ಪ್ರಿಯಾಂಕಾ ಚೋಪ್ರಾ (Priyanka chopra) ಈಗ ಬಾಲಿವುಡ್ ಚಿತ್ರಗಳಲ್ಲಿ ಕಡಿಮೆ ಕಾಣಿಸಿಕೊಳ್ಳಬಹುದು. ಆದರೆ ಪ್ರಚಾರದಲ್ಲಿ ಉಳಿಯುವುದು ಹೇಗೆ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಅವರು ಯಾವಾಗಲೂ ಅಭಿಮಾನಿಗಳ ಹೃದಯವನ್ನು ಗೆಲ್ಲಲು ಸಿದ್ಧರಾಗಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ (Social Media) ತನ್ನ ಚಟುವಟಿಕೆಯನ್ನು ಅಪ್ಡೇಟ್ ಮಾಡುತ್ತಲೇ ಇರುತ್ತಾರೆ. ಪ್ರಿಯಾಂಕಾ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ದೇಸಿ ಸ್ಟೈಲ್ ತೋರಿಸಿದ್ದಾರೆ. ಪ್ರಿಯಾಂಕಾರ ದೇಸಿ ಲುಕ್ ಪೋಟೋ ಸಖತ್ ವೈರಲ್ ಆಗಿವೆ.
ಫೋಟೋಗಳಲ್ಲಿ, ಪ್ರಿಯಾಂಕಾ ಚೋಪ್ರಾ ಅವರು ಹಳದಿ ಮತ್ತು ಬಿಳಿ ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಹಂಚಿಕೊಂಡ ಫೋಟೋಗಳಲ್ಲಿ, ಅವರು ವಿಭಿನ್ನ ಭಂಗಿಗಳಲ್ಲಿ ಪೋಸ್ ನೀಡಿದ್ದಾರೆ.
28
ಪ್ರಿಯಾಂಕಾ ಚೋಪ್ರಾ ದೇಸಿ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವುದನ್ನು ಕಾಣಬಹುದು. ತಲೆಗೂದಲು ಕಟ್ಟದೆ ಹಾಗೇ ಬಿಟ್ಟಿದ್ದು , ಕನ್ನಡಕವನ್ನೂ ಹಾಕಿಕೊಂಡಿದ್ದಾರೆ. ಫೋಟೋದಲ್ಲಿ ಆಕೆ ತನ್ನ ತಲೆಯ ಮೇಲೆ ಎರಡು ಕೈ ಇಟ್ಟುಕೊಂಡು ಪೋಸ್ ನೀಡಿದ್ದಾರೆ.
38
ಪ್ರಿಯಾಂಕಾ ಚೋಪ್ರಾ ತುಂಬಾ ಖುಷಿಯಿಂದ ಇರುವುದನ್ನು ಈ ಫೋಟೋದಲ್ಲಿ ಕಾಣಬಹುದು. ಅವರ ತಲೆಗೂದಲು ಗಾಳಿಗೆ ಹಾರುತ್ತಿದೆ ಮತ್ತು ನಟಿ ಮುಖದ ಅರ್ಧದಷ್ಟು ಮುಚ್ಚಿಕೊಂಡಿದ್ದಾರೆ. ಅವರು ಸಮುದ್ರದ ಬಳಿ ಎಂಜಾಯ್ ಮಾಡುತ್ತಿರುವಂತೆ ತೋರುತ್ತಿದೆ.
48
ಪ್ರಿಯಾಂಕಾ ಚೋಪ್ರಾ ಅವರು ದೊಡ್ಡ ಕಿವಿಯೋಲೆಗಳನ್ನು ಧರಿಸಿದ್ದಾರೆ ಮತ್ತು ತುಂಬಾ ಸಾಮಾನ್ಯ ಚಪ್ಪಲಿಯನ್ನು ಧರಿಸಿದ್ದಾರೆ. ದೇಸಿ ಲುಕ್‌ನ ಫೋಟೋಗೆ 'ಸೂರ್ಯ ಈಗಷ್ಟೇ ಹೊರಬಂದಿದ್ದಾನೆ' ಎಂದು ಕ್ಯಾಪ್ಷನ್ ನೀಡಿದ್ದಾರೆ.
58
ಪ್ರಿಯಾಂಕಾರ ದೇಶಿ ಲುಕ್‌ಗೆ ಫ್ಯಾನ್ಸ್ ಫುಲ್ ಫಿದಾ ಆಗಿ ಬ್ಯೂಟಿ, ಕಿಲ್ಲರ್ ಎಂದು ಕಾಮೆಂಟ್ ಮಾಡಿದ್ದಾರೆ ಮತ್ತು ಕೆಲವು ಅಭಿಮಾನಿಗಳು ಕಾಮೆಂಟ್‌ಗಳಲ್ಲಿ ಹೃದಯ ಮತ್ತು ಬೆಂಕಿಯ ಎಮೋಜಿಯನ್ನು ಸಹ ಹಂಚಿಕೊಂಡಿದ್ದಾರೆ.
68
ಫ್ಯಾಷನ್ ನಿಯತಕಾಲಿಕೆಗಳಿಗಾಗಿ ಪ್ರಿಯಾಂಕಾ ಚೋಪ್ರಾ ಆಗಾಗ ಫೋಟೋಶೂಟ್ ಮಾಡುತ್ತಾರೆ. ಇತ್ತೀಚೆಗಷ್ಟೇ ಅವರು ಮ್ಯಾಗಜೀನ್‌ಗಾಗಿ ಕಿಲ್ಲರ್ ಸ್ಟೈಲ್‌ನಲ್ಲಿ ಫೋಟೋಶೂಟ್ ಮಾಡಿದ್ದಾರೆ.
78
ಪ್ರಿಯಾಂಕಾ ಚೋಪ್ರಾ ತನ್ನ ಕೆಲಸದಿಂದ ಸಮಯ ಮಾಡಿಕೊಂಡು ಪತಿ ನಿಕ್ ಜೋನಾಸ್ ಜೊತೆ ಹಾಲಿಡೇ ಎಂಜಾಯ್ ಮಾಡುವುದನ್ನು ಮರೆಯುವುದಿಲ್ಲ. ಅವರು ಆಗಾಗ ಸಮುದ್ರತೀರದಲ್ಲಿ ಕಂಡುಬರುತ್ತಾರೆ
88
ಪ್ರಿಯಾಂಕಾ ಚೋಪ್ರಾ ತಮ್ಮ ಕುಟುಂಬ ಸದಸ್ಯರ ಬಗ್ಗೆ ಕೂಡ ವಿಶೇಷ ಕಾಳಜಿ ವಹಿಸುತ್ತಾರೆ. ಅವರು ತನ್ನ ತಾಯಿ ಮತ್ತು ಅತ್ತೆಯೊಂದಿಗೆ ಸಾಮರಸ್ಯದಿಂದ ಬದುಕುತ್ತಾರೆ ಮತ್ತು ಎಲ್ಲರ ಒಟ್ಟಿಗೆ ಉತ್ತಮ ಬಾಂಡಿಗ್ ಹೊಂದಿದ್ದಾರೆ.