Instagram Followers: ಪ್ರಿಯಾಂಕಾ ಮೊದಲು, ಉಳಿದವರ ಪಟ್ಟಿ ಇಲ್ಲಿದೆ!

Suvarna News   | Asianet News
Published : Jan 07, 2022, 06:18 PM IST

ಸಾಮಾಜಿಕ ಮಾಧ್ಯಮಗಳು (Social Media) ಎಲ್ಲರ ನೆಚ್ಚಿನ ಸ್ಥಳ. ಫೇವರೇಟ್‌ ಸೆಲೆಬ್ರೆಟಿ ಮತ್ತು ಸ್ಟಾರ್ಸ್‌ ಜೊತೆ ಸಂಪರ್ಕ ಸಾಧಿಸಲು ಇದು ಅತ್ಯುತ್ತಮ ಮಾರ್ಗ. ಸಾಮಾಜಿಕ ಮಾಧ್ಯಮದಿಂದಾಗಿ, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರ ಪ್ರತಿದಿನದ ಅಪ್ಡೇಟ್‌ ಪಡೆಯುವುದು ಸುಲಭ. ಪ್ರತಿಯೊಬ್ಬ ಸೆಲೆಬ್ರಿಟಿಗಳು ಸೋಶಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ತಮ್ಮ ವೈಯಕ್ತಿಕ ಖಾತೆಯನ್ನು ಹೊಂದಿದ್ದಾರೆ. Instagram ನಲ್ಲಿ ಹೆಚ್ಚು ಫಾಲೋವರ್ಸ್‌ ಹೊಂದಿರುವ  ಟಾಪ್ 10 ಸೆಲೆಬ್ರೆಟಿಗಳು ಇಲ್ಲಿದ್ದಾರೆ.

PREV
110
Instagram Followers: ಪ್ರಿಯಾಂಕಾ ಮೊದಲು, ಉಳಿದವರ ಪಟ್ಟಿ ಇಲ್ಲಿದೆ!

ಪ್ರಿಯಾಂಕಾ ಚೋಪ್ರಾ:
ಗ್ಲೋಬಲ್‌ ಸ್ಟಾರ್ ಪ್ರಿಯಾಂಕಾ ಚೋಪ್ರಾ  (Global Star Priyanka Chopra) ಸಾಮಾಜಿಕ ಮಾಧ್ಯಮದ ಬಗ್ಗೆ ದೃಷ್ಟಿ ಹರಿಸಿದ ಮೊದಲ ನಟರಲ್ಲಿ ಒಬ್ಬರು. ಅವರು ಟ್ವಿಟರ್‌ನಲ್ಲಿ (Twitter) ಖಾತೆಯನ್ನು ಹೊಂದಿದ ಮೊದಲ ನಟಿ. ಅವರು ಅತಿ ಹೆಚ್ಚು ಪಾಲೋವರ್ಸ್‌ಗಳಿಸಿರುವ ಸೆಲೆಬ್ರೆಟಿಗಳಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.


 
 

210

ಶ್ರದ್ಧಾ ಕಪೂರ್:
ಬಾಲಿವುಡ್‌ನ ಯಂಗ್‌ ನಟಿ ಶ್ರದ್ಧಾ ಕಪೂರ್‌ ಅವರ ಜನಪ್ರಿಯತೆ ಕೇವಲ ತಮ್ಮ ಸಿನಿಮಾಗಳಿಗೆ ಮಾತ್ರ ಸಿಮೀತವಾಗದೇ, ಸೋಶಿಯಲ್‌ ಮೀಡಿಯಾಕ್ಕೂ ಸಹ ಹಬ್ಬಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಎರಡನೇ ಸೆಲೆಬ್ರಿಟಿ ಶ್ರದ್ಧಾ ಕಪೂರ್.

 
 

310

ನೇಹಾ ಕಕ್ಕರ್:
ಮೊದಲು ಸಿಂಗಿಂಗ್‌ ರಿಯಾಲಿಟಿ ಶೋನಿಂದ ಗಮನ ಸೆಳೆದ ನೇಹಾ ಕಕ್ಕರ್ ನಿಧಾನವಾಗಿ ಬಾಲಿವುಡ್‌ನಲ್ಲೂ ತಮ್ಮ ಜಾಗ ಗಟ್ಟಿ ಮಾಡಿಕೊಂಡಿದ್ದಾರೆ. ನೇಹಾ ಕಕ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯರಾಗಿರುವ ಗಾಯಕಿ ಮತ್ತು ಈ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಗಳಿಸಿದ್ದಾರೆ

410
Deepika Padukone

ದೀಪಿಕಾ ಪಡುಕೋಣೆ:
ಬಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರಾಗಿರುವ  ದೀಪಿಕಾ ಪಡುಕೋಣೆ ಅವರಿಗಿಂತ ನೇಹಾ ಕಕ್ಕರ್ ಹೆಚ್ಚು ಫಾಲೋವರ್ಸ್ ಇದ್ದಾರೆ ಎಂದರೆ ನಂಬಲು ಕಷ್ಟವಾಗುತ್ತದೆ. ದೀಪಿಕಾ Instagram ನಲ್ಲಿ 64.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು  ಈ ಲಿಸ್ಟ್‌ನಲ್ಲಿ 4ನೇ ಸ್ಥಾನದಲ್ಲಿದ್ದಾರೆ
 

510

ಕತ್ರಿನಾ ಕೈಫ್:
ವಿಕ್ಕಿ ಕೌಶಲ್ ಅವರೊಂದಿಗಿನ ವಿವಾಹದ ನಂತರ ಕತ್ರಿನಾ ಕೈಫ್ ಅವರ ಅನುಯಾಯಿಗಳ ಸಂಖ್ಯೆಯಲ್ಲಿ ಸಿಕ್ಕಾಪಟ್ಟೆ ಏರಿಕೆ ಕಂಡಿದೆ. ಪ್ರಸ್ತುತ ಕತ್ರಿನಾ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಐದನೇ ಸೆಲೆಬ್ರೆಟಿ ಆಗಿದ್ದಾರೆ.

 
 

 

610

ಅಕ್ಷಯ್ ಕುಮಾರ್ (Akshay Kumar) :
ಬಾಲಿವುಡ್‌ನ ಹೆಚ್ಚು ಬ್ಯುಸಿ ನಟರಾಗಿರುವ ಅಕ್ಷಯ್ ಕುಮಾರ್ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಸೆಲೆಬ್ರೆಟಿ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಆದರೆ ಅವರು ಎಲ್ಲರಿಗಿಂತ ಹೆಚ್ಚು ಸಂಭಾವನೆ ಪಡೆಯುವ ನಟ.


 

710

ಆಲಿಯಾ ಭಟ್:
ಬಾಲಿವುಡ್‌ನ ಪ್ರಾಮಿಸ್ಸಿಂಗ್‌ ನಟಿಯರಲ್ಲಿ ಆಲಿಯಾ ಭಟ್‌ ಒಬ್ಬರು. ಅತಿ ಕಡಿಮೆ ಅವಧಿಯಲ್ಲಿ ಆಲಿಯಾ ಭಟ್ ದೊಡ್ಡ ದೊಡ್ಡ ಸ್ಟಾರ್ಸ್‌ ನಡುವೆ ತಮ್ಮ ಸ್ಥಾನವನ್ನು ಗಳಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿಗಳ ಪೈಕಿ ಆಲಿಯಾ  7ನೇ ಸ್ಥಾನದಲ್ಲಿದ್ದಾರೆ

 

810

ಜಾಕ್ವೆಲಿನ್ ಫರ್ನಾಂಡಿಸ್:
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಈ ದಿನಗಳಲ್ಲಿ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಅವರು ಮೋಹಿತ್ ರೈನಾ ಅವರ ಮದುವೆಯಲ್ಲಿ 1 ಕೋಟಿ ಬೆಲೆಯ ಆಡಿ ಕ್ಯೂ8 ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ಈ ಲಿಸ್ಟ್‌ನಲ್ಲಿ 8ನೇ ಸ್ಥಾನದಲ್ಲಿದ್ದಾರೆ
 
 

910
Anushaka Caption

ಅನುಷ್ಕಾ ಶರ್ಮಾ:
ಕಳೆದ ವರ್ಷದ ಆರಂಭದಲ್ಲಿ ಮಗಳನ್ನು ಸ್ವಾಗತಿಸಿದ ನಟಿ ಅನುಷ್ಕಾ ಶರ್ಮಾ ಪ್ರಸ್ತುತ ಪತಿ ವಿರಾಟ್‌ ಕೊಹ್ಲಿ ಜೊತೆ  ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಅನುಷ್ಕಾ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಆದರೂ ಅವರು ಈ ಟಾಪ್ 10 ಪಟ್ಟಿಯಲ್ಲಿದ್ದಾರೆ ಮತ್ತು ಈ ಬಾರಿ  9ನೇ ಸ್ಥಾನ ಗಳಿಸಿದ್ದಾರೆ

1010

ಸಲ್ಮಾನ್ ಖಾನ್ (Salman Khan):
ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸೆಲೆಬ್ರೆಟಿಗಳ  ಪಟ್ಟಿಯಲ್ಲಿ ಬಾಲಿವುಡ್  ಸೂಪರ್ ಸ್ಟಾರ್ ಸಲ್ಮಾನ್ ಖಾನ್ 10ನೇ ಸ್ಥಾನದಲ್ಲಿದ್ದಾರೆ ಎಂಬುದು  ನಂಬಲ ಆಸಾಧ್ಯ. ಆದರೆ ಇದು ನಿಜ. ಆದರೆ ಸಲ್ಲು ಭಾಯ್‌ಗೆ  ಇದರ ಬಗ್ಗೆ ಯಾವುದೇ ಟೆನ್ಷನ್‌ ಇಲ್ಲ. 

Read more Photos on
click me!

Recommended Stories