Radhe Shyam Release: ಪ್ರಭಾಸ್ ಸಿನಿಮಾ 500 ಕೋಟಿ ಒಪ್ಪಂದ, OTTಯಲ್ಲಿ ಬಿಡುಗಡೆಯಾಗುತ್ತಾ?

Published : Jan 27, 2022, 06:57 PM IST

ಕೊರೊನಾದಿಂದಾಗಿ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಮುಚ್ಚಿರುವ ವರದಿಗಳಿವೆ. ಅದೇ ಸಮಯದಲ್ಲಿ, ಅನೇಕ ತಯಾರಕರು ತಮ್ಮ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದಾರೆ. ಈ ನಡುವೆ ಸೌತ್ ಸೂಪರ್ ಸ್ಟಾರ್ ಪ್ರಭಾಸ್ (Prabhas) ಮತ್ತು ಪೂಜಾ ಹೆಗ್ಡೆ (Pooja Hegde) ಅವರ ಮುಂಬರುವ ಚಿತ್ರ ರಾಧೆ ಶ್ಯಾಮ್ (Radhe Shyam) ಬಿಡುಗಡೆಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಈ ಹಿಂದೆ ಬಂದ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಈ ಚಿತ್ರವನ್ನು ನೇರವಾಗಿ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲು ತಯಾರಕರು ಯೋಜಿಸುತ್ತಿದ್ದಾರೆ ಎಂಬ ವರದಿಗಳಿವೆ. ಆದರೆ, ಈಗ ಚಿತ್ರ ನಿರ್ಮಾಪಕ ಕ್ರಿಶ್ ಜಗರ್ಲಮುಡಿ ರಾಧೆ ಶ್ಯಾಮ್ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.   

PREV
17
Radhe Shyam Release: ಪ್ರಭಾಸ್ ಸಿನಿಮಾ 500 ಕೋಟಿ ಒಪ್ಪಂದ, OTTಯಲ್ಲಿ ಬಿಡುಗಡೆಯಾಗುತ್ತಾ?

ಪ್ರಭಾಸ್ ಮತ್ತು ಪೂಜಾ ಅವರ ರೋಮ್ಯಾಂಟಿಕ್ ಥ್ರಿಲ್ಲರ್ ದೊಡ್ಡ ಬಜೆಟ್ ಚಿತ್ರವಾಗಿದೆ. ಈ ಸಿನಿಮಾದ ನಿರ್ದೇಶಕ ರಾಧಾ ಕೃಷ್ಣ ಕುಮಾರ್. 2 ವರ್ಷದಿಂದ ರಾಧೆ ಶ್ಯಾಮ್  ಬಿಡುಗಡೆಗೆ ಆಗದೆ ಉಳಿದಿದೆ.ರಾಧೆ ಶ್ಯಾಮ್ ಬಿಡುಗಡೆಗಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.  

27

ರಾಧೆ ಶ್ಯಾಮ್ ಸುಮಾರು 2 ವರ್ಷಗಳ ಕಾಲ ಬಿಡುಗಡೆ ಆಗದೆ ಸಿಲುಕಿಕೊಂಡಿದೆ. ಈ ಹಿಂದೆ ಚಿತ್ರವನ್ನು 2020 ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಕೊರೊನಾದ  ಕಾರಣ, ಚಿತ್ರವನ್ನು 2021 ರಲ್ಲಿ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಈಗ ಈ ಚಿತ್ರವು ಜನವರಿ 2022 ರಲ್ಲಿ ಬಿಡುಗಡೆಯಾಗುವ ನೀರಿಕ್ಷೆ ಇದೆ.

37

ಚಿತ್ರಕ್ಕೆ OTT ಪ್ಲಾಟ್‌ಫಾರ್ಮ್‌ಗಳಿಂದ ದೊಡ್ಡ ಆಫರ್ ಬಂದಿದೆ ಎಂಬ ಸುದ್ದಿ ಇತ್ತು. OTT ಪ್ಲಾಟ್‌ಫಾರ್ಮ್ ರಾಧೆ ಶ್ಯಾಮ್‌ಗೆ ನೇರ ಡಿಜಿಟಲ್ ಬಿಡುಗಡೆಗಾಗಿ ತಯಾರಕರಿಗೆ ಸುಮಾರು 500 ಕೋಟಿ ರೂಪಾಯಿಗಳ ಪ್ರಸ್ತಾಪವನ್ನು ನೀಡಿತು ಎನ್ನಲಾಗಿದೆ. ಆದರೆ  ಈ ವರದಿಗಳು ದೃಢಪಟ್ಟಿಲ್ಲ. 

47

ಇದು ಪ್ರಭಾಸ್ ಅವರ ಮೂರನೇ ಪ್ಯಾನ್ ಇಂಡಿಯಾ ಬಿಡುಗಡೆಯಾಗಿದೆ. ಇದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಹೇಳಿದರು
.

57

ಚಿತ್ರ ನಿರ್ಮಾಪಕರ ಜೊತೆಗೆ ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಅವರು ಚಿತ್ರಮಂದಿರಗಳಲ್ಲಿ ಮಾತ್ರ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ರಾಧೆ ಶ್ಯಾಮ್ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ

67

ರಾಧೆ ಶ್ಯಾಮ್ ಸಿನಿಮಾವನ್ನು ನೋಡಿದ ಅನುಭವವನ್ನು ಚಿತ್ರಮಂದಿರಗಳಲ್ಲಿ ಮಾತ್ರ ಪಡೆಯಬೇಕು ಎಂದು ಚಿತ್ರದ ಸಂಗೀತ ಸಂಯೋಜಕ ಥಮನ್ ಹೇಳಿದ್ದಾರೆ. ಚಿತ್ರಮಂದಿರಗಳಲ್ಲಿ ಜನ ನೋಡಿದಾಗ ಮಾತ್ರ ದೃಶ್ಯದ ಹಿರಿಮೆ ತಿಳಿಯುತ್ತದೆ ಎಂದರು.


 


 

77

ವರದಿಗಳ ಪ್ರಕಾರ, ರಾಧೆ ಶ್ಯಾಮ್ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಅಕ್ಷಯ್ ಕುಮಾರ್ ಅವರ ಬಚ್ಚನ್ ಪಾಂಡೆ ಮತ್ತು ರಣಬೀರ್ ಕಪೂರ್ ಅವರ ಶಂಶೇರಾ ಫಿಲ್ಮ್‌ಗಳೊಂದಿಗೆ ಘರ್ಷಣೆಯಾಗುತ್ತದೆ. ಎಲ್ಲಾ ಮೂರು ಚಿತ್ರಗಳು ಒಂದೇ ದಿನ ಅಂದರೆ ಮಾರ್ಚ್ 18 ರಂದು ಬಿಡುಗಡೆಯಾಗುತ್ತಿವೆ.

Read more Photos on
click me!

Recommended Stories