ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ ಅವರು ತಮ್ಮ ಮುಂಬರುವ ವೆಬ್ ಸಿರೀಸ್ ಪ್ರಚಾರದ ಸಂದರ್ಭದಲ್ಲಿ ಅವರು ನೀಡಿದ ಹೇಳಿಕೆಯಿಂದ ಈಗ ವಿವಾದವನ್ನು ಉಂಟುಮಾಡಿದ್ದಾರೆ. ಈ ವಿಚಾರವಾಗಿ ನಟಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ.
ವೆಬ್ ಸರಣಿಯ ಬಿಡುಗಡೆ ಸಮಾರಂಭದಲ್ಲಿ ಶ್ವೇತಾ, ಮೇರೆ ಬ್ರಾ ಕಿ ಸೈಜ್ ಭಗವಾನ್ ಲೇ ರಹೇ ಹೈ (ದೇವರು ನನ್ನ ಬ್ರಾವನ್ನು ಅಳೆಯುತ್ತಿದ್ದಾರೆ) ಎಂದು ಹೇಳಿದ್ದರು. ಶ್ವೇತಾ ಹಗುರವಾದ ಧಾಟಿಯಲ್ಲಿ ಹೇಳಿದರೂ ಅದು ಹಲವರಿಗೆ ಹಿಡಿಸಲಿಲ್ಲ ಎನ್ನುವುದು ವಾಸ್ತವ.
ಈ ಹೇಳಿಕೆ ಇದೀಗ ವೈರಲ್ ಆಗಿದ್ದು, ಶ್ವೇತಾ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಭೋಪಾಲ್ ಪೊಲೀಸ್ ಆಯುಕ್ತರಿಂದ ಈ ವಿಚಾರವಾಗಿ ಸಂಪೂರ್ಣ ವರದಿ ಕೇಳಿದ್ದಾರೆ.
ಶ್ವೇತಾ ತಿವಾರಿ ಹೇಳಿಕೆಯನ್ನು ಗೃಹ ಸಚಿವರು ಖಂಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಶ್ವೇತಾ ತಿವಾರಿ ಹೇಳಿಕೆಯನ್ನು ನೋಡಿದ್ದೇನೆ. ಕೇಳಿದ್ದೇನೆ. ನಾನು ಭೋಪಾಲ್ ಪೊಲೀಸ್ ಕಮಿಷನರ್ ಅವರಿಗೆ ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.
ಶ್ವೇತಾ ತಿವಾರಿ ಯಾವ ಆಧಾರದ ಮೇಲೆ ಇಂತಹ ಹೇಳಿಕೆ ನೀಡಿದ್ದಾರೆ ಎಂಬುದನ್ನು ತನಿಖೆ ನಡೆಸಲಾಗುವುದು ಎಂದು ಮಿಶ್ರಾ ಹೇಳಿದ್ದಾರೆ. ಅದರ ಹಿಂದೆ ಅವರ ಉದ್ದೇಶವೇನು? 24 ಗಂಟೆಗಳ ಒಳಗೆ ಭೋಪಾಲ್ ಪೊಲೀಸ್ ಕಮಿಷನರ್ ವಾಸ್ತವಾಂಶವನ್ನು ಪರಿಶೀಲಿಸಿ ವರದಿಯನ್ನು ಅವರಿಗೆ ಸಲ್ಲಿಸಲಿದ್ದಾರೆ ಎಂದು ಗೃಹ ಸಚಿವರು ಸ್ವತಃ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಗ್ಲಾಮರಸ್ ಸ್ಟೈಲ್ ಗೆ ಹೆಸರಾಗಿರುವ ಶ್ವೇತಾ ತಿವಾರಿ ಇದೀಗ ಫ್ಯಾಷನ್ ಇಂಡಸ್ಟ್ರಿ ಆಧಾರಿತ ವೆಬ್ ಶೋನಲ್ಲಿ ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೌರಭ್ ರಾಜ್ ಜೈನ್ ಮತ್ತು ರೋಹಿತ್ ರಾಯ್ ಸಹ ನಟಿಸಿರುವ ಶೋನಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಭೋಪಾಲ್‌ನ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ವರದಿಗಳು ಹೇಳುತ್ತವೆ.