ಪೂನಂ ಪಾಂಡೆ ಪ್ರೆಗ್ನೆಂಟ್? ಪೋಸ್ಟ್ ಬೆನ್ನಲ್ಲೇ ನೆಟ್ಟಿಗರ ಕಮೆಂಟ್‌ಗೆ ಸುಸ್ತಾದ ನಟಿ

Published : Mar 31, 2026, 06:54 PM IST

ಪೂನಂ ಪಾಂಡೆ ಪ್ರೆಗ್ನೆಂಟ್? ಪೋಸ್ಟ್ ಬೆನ್ನಲ್ಲೇ ನೆಟ್ಟಿಗರ ಕಮೆಂಟ್‌ಗೆ ಸುಸ್ತಾದ ನಟಿ, ವಿವಾದಗಳಿಂದಲೇ ಸುದ್ದಿಯಾಗೋ ನಟಿ ಪೂನಂ ಪಾಂಡೆ ಬೇಬಿ ಬಂಬ್ ಫೋಟೋ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ನಿಜಕ್ಕೂ ಪೂನಂ ಗರ್ಭಿಣಿಯಾಗಿದ್ದಾರಾ? 

PREV
15
ಪೂನಂ ಪಾಂಡೆ ಬೇಬಿ ಬಂಪ್

ವಿವಾದಗಳಿಂದಲೇ ಸುದ್ದಿಯಾಗುವ ನಟಿ ಪೂನಂ ಪಾಂಡೆ ಇದೀಗ ಪ್ರೆಗ್ನೆಂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಪೂನಂ ಪಾಂಡೆ ಎರಡು ಫೋಟೋ ಹಂಚಿಕೊಂಡಿದ್ದಾರೆ. ಬೇಬಿ ಬಂಬ್ ಫೋಟೋ ಹಂಚಿಕೊಂಡಿರುವ ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಎಬ್ಬಿಸಿದ್ದಾರೆ. ಹಲವರು ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ.

25
ಪೂನಂ ಪಾಂಡೆ ಗರ್ಭಿಣಿ

ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬೇಬಿ ಬಂಪ್ ತೋರಿಸುವ ಎರಡು ಪೋಟೋಗಳು ಇದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪೂನಂ ಪಾಂಡೆ ಈ ಪೋಸ್ಟ್‌ನಲ್ಲಿ ತೂಕ ಹೆಚ್ಚಿದಂತೆ ಕಾಣಿಸುತ್ತಿದೆ. ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡರೂ ಇದು ನಿಜವೇ ಅನ್ನೋ ಪ್ರಶ್ನೆ ಎದುರಾಗಿದೆ.

35
ಏಪ್ರಿಲ್ ಫೂಲ್ ಮಾಡಿದ್ರಾ ಪೂನಂ

ಪೂನಂ ಪಾಂಡೆ ಬೇಬಿ ಬಂಪ್ ಪೋಸ್ಟ್‌ನ್ನು ಹಲವರು ಅನುಮಾನದ ಕಣ್ಣುಗಳಿಂದ ನೋಡಿದ್ದಾರೆ. ಕಾರಣ ಏಪ್ರಿಲ್ 1 ಸಮೀಪಿಸುತ್ತಿದ್ದಂತೆ ಜನರನ್ನು ಮತ್ತೆ ಫೂಲ್ ಮಾಡುತ್ತಿದ್ದಾರ ಎಂದು ಹಲವರು ಪ್ರಶ್ನಿಸಿದ್ದಾರೆ. ಇದು ಎಪ್ರಿಲ್ ಫೂಲ್‍ಗೆ ಮಾಡಿದ ಗಿಮಿಕ್ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

45
ಸಾವಿನ ಪೋಸ್ಟ್ ಹಾಕಿ ಯಾಮಾರಿಸಿದ್ದರು ಪೂನಂ

2024ರಲ್ಲಿ ಪೂನಂ ಪಾಂಡೆ ಗರ್ಭಗಂಠ ಕ್ಯಾನ್ಸರ್ ಕುರಿತ ಪ್ರಚಾರದ ಭಾಗದಲ್ಲಿ ಪೂನಂ ಪಾಂಡೆ ನಿಧನ ಎಂದು ಸುಳ್ಳು ಹೇಳಿ ಭಾರಿ ಕೋಲಾಹಲ ಎಬ್ಬಿಸಿದ್ದರು. ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ನಟಿಯ ಮ್ಯಾನೇಜರ್ ಪೋಸ್ಟ್ ಮಾಡಿದ ರೀತಿಯಲ್ಲಿ ಸುಳ್ಳು ಹೇಳಿ ಭಾರಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಹೀಗಾಗಿ ಪೂನಂ ಪಾಂಡೆ ಎಷ್ಟೇ ಗಂಭೀರ ವಿಚಾರ ಹೇಳಿದರೂ ಜನರು ಫೂಲ್ ಎಂದೇ ಪರಿಗಣಿಸುತ್ತಿದ್ದಾರೆ.

55
ದಾಖಲಾಗಿತ್ತು ಕೇಸ್

ತಮ್ಮ ಸಾವಿನ ಕುರಿತು ಸುಳ್ಳು ಹೇಳಿದ ಪೂನಂ ಪಾಂಡೆ ವಿರುದ್ದ ಪ್ರಕರಣಗಳು ದಾಖಲಾಗಿತ್ತು. ಇದು ಅತೀಯಾದ ಪ್ರಚಾರ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಇದೇ ಕಾರಣದಿಂದ ಇದೀಗ ಗರ್ಭಿಣಿ ಎಂದು ಫೋಟೋ ಪೋಸ್ಟ್ ಮಾಡಿದರೂ ಜನರು ನಂಬಲು ತಯಾರಿಲ್ಲ.

ದಾಖಲಾಗಿತ್ತು ಕೇಸ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories