ಮುಂಬೈನ ಲೋಖಂಡವಾಲಾದಲ್ಲಿ ಮಂಗಳವಾರ ನಟಿ ಪೂನಂ ಪಾಂಡೆ ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ಫೋಟೋಗಳಿಗೆ ಪೋಸ್ ನೀಡುವಾಗ ನಟಿ ಫುಲ್ ಖುಷಿಯಾಗಿದ್ದರು ಇದಕ್ಕೆ ಕಾರಣವೇನು ಗೊತ್ತಾ? ಆಕೆ ಅಶ್ಲೀಲ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ರಿಲೀಫ್ ಪಡೆದಿದ್ದಾರೆ.
ಅಶ್ಲೀಲ ಪ್ರಕರಣದಲ್ಲಿ ಬಂಧನದ ವಿರುದ್ಧ ಮಧ್ಯಂತರ ರಕ್ಷಣೆಯನ್ನು ಪಡೆದ ಸಂತೋಷವು ಪೂನಂ ಪಾಂಡೆಯ ಮುಖದಲ್ಲಿ ತುಂಬಾ ಗೋಚರಿಸಿತು. ಛಾಯಾಗ್ರಾಹಕರಿಗೆ ಮುಗುಳ್ನಗೆ ಬೀರಿದ ಆಕೆಯ ಕಣ್ಣುಗಳೂ ಖುಷಿಯಿಂದ ಹೊಳೆಯುತ್ತಿದ್ದವು.
ಈ ಸಮಯದ ಫೋಟಗಳಲ್ಲಿ ಪೂನಂ ಪಾಂಡೆ ಸಂಪೂರ್ಣ ಬಿಳಿ ಬಟ್ಟೆಯನ್ನು ಧರಿಸಿದ್ದರು. ಅವಳು ಬಿಳಿಯ ಸಡಿಲವಾದ ಪ್ಯಾಂಟ್ ಜೊತೆಗೆ ಬಾಡಿ ಹಗ್ಗಿಂಗ್ ಫುಲ್ ಸ್ಲೀವ್ಸ್ ಟಾಪ್ ಅನ್ನು ಧರಿಸಿದ್ದರು.
ತನ್ನ ಲುಕ್ ಅನ್ನು ಪೂರ್ಣಗೊಳಿಸಲು, ಪೂನಂ ಪಾಂಡೆ ತನ್ನ ಲೂಯಿಸ್ ವಿಟಾನ್ ಬ್ಯಾಗ್ ಮತ್ತು ದೊಡ್ಡ ಕಪ್ಪು ಸನ್ಗ್ಲಾಸ್ ಅನ್ನು ಪೇರ್ ಮಾಡಿಕೊಂಡಿದ್ದರು. ಅವರು ನ್ಯೂಡ್ ಪಿಂಕ್ ಲಿಪ್‌ಸ್ಟಿಕ್ ಮತ್ತು ಮಸ್ಕರಾ ಧರಿಸಿದ್ದರು. ಮಿನುಗುವ ನೀಲಿ ಐಶ್ಯಾಡೋ ಅವರ ಸಿಂಪಲ್ ಡ್ರೆಸ್‌ಗೆ ಜೊತೆ ಮಾಡಿಕೊಂಡಿದ್ದರು. ಅವಳು ತನ್ನ ಕೂದಲನ್ನು ಬನ್‌ನಲ್ಲಿ ಕಟ್ಟಿದರು.
ಅಶ್ಲೀಲ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೂನಂ ಪಾಂಡೆ ಸಹ ಆರೋಪಿಗಳಲ್ಲಿ ಒಬ್ಬರಾಗಿದ್ದರೆ, ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಪ್ರಮುಖ ಆರೋಪಿಯಾಗಿದ್ದಾರೆ. ಪೂನಂ ಪಾಂಡೆ ಈ ಹಿಂದೆ ಬಾಂಬೆ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಆಕೆಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅದನ್ನು ತಿರಸ್ಕರಿಸಿದರು.
ನಂತರ, ಬಾಂಬೆ ಹೈಕೋರ್ಟ್‌ನ ಆದೇಶದ ವಿರುದ್ಧ ಪೂನಂ ಪಾಂಡೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಡಬಲ್ ಬೆಂಚ್ ಕೋರ್ಟ್ ಆಕೆಯ ಅರ್ಜಿಯನ್ನು ಸ್ವೀಕರಿಸಿ ಮಧ್ಯಂತರ ರಕ್ಷಣೆ ನೀಡಿದೆ.ಆದರೆ, ಕೇವಲ ಅಶ್ಲೀಲ ಪ್ರಕರಣ ಒಂದೇ ಪೂನಂ ಪಾಂಡೆ ಅವರ ವಿವಾದವಲ್ಲ.
ತಮ್ಮ ಪತಿ ಸ್ಯಾಮ್ ಬಾಂಬೆ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದರು ಮತ್ತು ಈ ಕಾರಣದಿಂದ ಆಕೆಯ ಮುಖದ ಮೇಲೆ ಗಾಯಗಳಾಗಿರುವ ಕಾರಣದಿಂದಲೂ ಆಕೆ ಸುದ್ದಿಯಲ್ಲಿದ್ದರು. ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ.
ಸ್ಯಾಮ್ ಬಾಂಬೆಯೊಂದಿಗಿನ ಆಕೆಯ ಮದುವೆಯ ಪರಿಣಾಮವು ಆಕೆ ಕನಿಷ್ಠ ನಾಲ್ಕರಿಂದ ಐದು ವರ್ಷಗಳ ಕಾಲ ಏಕಾಂಗಿಯಾಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ ಈ ವರ್ಷಗಳಲ್ಲಿ ಅವರು ತಮ್ಮ 'ಮಿಸ್ಟರ್ ರೈಟ್' ಅನ್ನು ಕಂಡುಕೊಂಡರೆ, ಅದನ್ನು ಮುಂದುವರಿಸಲು ಅವರು ಸಿದ್ಧಳಾಗಿದ್ದಾರೆ ಎಂದು ಸಹ ಪೂನಂ ಹೇಳಿದ್ದಾರೆ.