ಮುಂಬೈ(ಜ. 09) ಸನ್ನಿ ಲಿಯೋನ್ (Sunny Leone ) ಕಪಿಲ್ ಶರ್ಮಾ (Kapil Sharma) ಶೋ ನಲ್ಲಿ ಕಾಣಿಸಿಕೊಂಡಿದ್ದು ಈ ಇಂಡಸ್ಟ್ರಿಯ 'ಬುದ್ಧು' ಎಂದಿದ್ದಾರೆ. ಅಷ್ಟಕ್ಕೂ ಸನ್ನಿ ಈ ಮಾತು ಹೇಳಲು ಕಾರಣವಿದೆ. ಸನ್ನಿ ಬಾಯಿಂದ ಇಂಥ ಮಾತು ಬರಲು ಕಾರಣವೇನು?
ನಾನು ಸನ್ನಿ ಅವರೊಂದಿಗೆ ವಿಶ್ವದ ಹಲವಾರು ಕಡೆ ಓಡಾಡಿದೆ. ಸನ್ನಿಗೆ ಒಂದು ಚೂರು ಅಹಂಕಾರ ಇಲ್ಲ. ಅವರು ಸಮಯಕ್ಕೆ ಸರಿಯಾಗಿ ಬರುತ್ತಾರೆ ಎಂದು ಮಿಖಾ ಸಿಂಗ್ ಕೊಂಡಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡುವ ಸರದಿ ಸನ್ನಿದಾಗಿತ್ತು.
35
ನಾನು ಈ ಇಂಡಸ್ಟ್ರಿಯ ಅತಿದೊಡ್ಡ ದಡ್ಡ ಎಂದು ಸನ್ನಿ ತಮ್ಮನ್ನು ತಾವೇ ಕರತೆದುಕೊಂಡರು. ಸಮಯಕ್ಕೆ ಸರಿಯಾಗಿ ಬರುವುದೇ ತಪ್ಪು ಎನ್ನುವ ಸ್ಥಿತಿ ಇದೆ ಎಂದರು.
45
ಮಿಖಾ ಸಿಂಗ್ ಯಾವಾಗ ಮದುವೆಯಾಗುತ್ತಾರೆ?ಎಂದು ಕಪಿಲ್ ಶರ್ಮಾ ಕೇಳಿದಾಗ ಸನ್ನಿ ಮುಂದಿನ ವರ್ಷ ಎಂಬ ಉತ್ತರ ಕೊಟ್ಟರು. ಆ ಮುಂದಿನ ವರ್ಷ ಯಾವಾಗ ಬರುತ್ತದೆಯೋ ಗೊತ್ತಿಲ್ಲ!
55
ನೀಲಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಸನ್ನಿ ಲಿಯೋನ್ ಬಾಲಿವುಡ್ ಗೆ ಪದಾರ್ಪಣೆ ಮಾಡಿದರು. ಅನಾಥ ಮಕ್ಕಳ ಪೋಷಕಿಯಾಗಿಯೂ ಸನ್ನಿ ಕೆಲಸ ಮಾಡುತ್ತಿದ್ದಾರೆ.