ಹೃತಿಕ್ ರೋಷನ್ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಸಾಕಷ್ಟು ಕಷ್ಟ ಪಟಡಬೇಕಾಯಿತು. ಅವರ ತಂದೆ ರಾಕೇಶ್ ರೋಷನ್ (Rakesh Roshan) ಹೃತಿಕ್‌ಗೆ ಅವರ ಚಲನಚಿತ್ರಗಳ ಸೆಟ್‌ಗಳಲ್ಲಿ ಕೆಲಸ ನೀಡಿದ್ದರು. ಬಾಲ್ಯದಿಂದಲೂ ಅವರು ತಮ್ಮ ತಂದೆ ರಾಕೇಶ್ ಅವರಂತೆ ನಟನಾಗಬೇಕೆಂದು ಕನಸು ಕಂಡಿದ್ದರು.
ಹೃತಿಕ್ ಅವರನ್ನು ರಾಕೇಶ್ ರೋಷನ್ ಅವರ ಸಹಾಯಕ ನಿರ್ದೇಶಕರಾಗಿ ಚಲನಚಿತ್ರಗಳ ಬಗ್ಗೆ ತಿಳಿದುಕೊಳ್ಳಲು ನೇಮಿಸಿಕೊಂಡರು. ಅವರು ತಮ್ಮ ತಂದೆಯ ಚಲನಚಿತ್ರಗಳ ಸೆಟ್‌ಗಳಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದರು. ಅಷ್ಟೇ ಅಲ್ಲ, ನಟ ಸೆಟ್‌ಗಳಲ್ಲಿ ಕಸ ಗುಡಿಸುತ್ತಿದ್ದರು, ಸ್ಟಾರ್ಸ್‌ಗೆ ಟೀ ತೆಗೆದುಕೊಂಡು ಹೋಗುತ್ತಿದ್ದರು.
ಹೃತಿಕ್ ತಮ್ಮ ವೈಯಕ್ತಿಕ ಸ್ಕ್ರಾಪ್‌ಬುಕ್ ಅನ್ನು ನಿರ್ವಹಿಸುತ್ತಾರೆ. ಈ ಸ್ಕ್ರಾಪ್‌ಬುಕ್‌ನಲ್ಲಿ, ಅವರು ತಮ್ಮ ದೈನಂದಿನ ಜೀವನವನ್ನು ಫೋಟೋಗಳ ಮೂಲಕ ಜೋಡಿಸಿದ್ದಾರೆ. ಬೆಸ್ಟ್ ಡ್ಯಾನ್ಸರ್ (Best Dancer) ಆಗಿರುವ ಹೃತಿಕ್ ರೋಷನ್ ಅವರಿಗೆ ತಮ್ಮ 21ನೇ ವಯಸ್ಸಿನವರೆಗೂ ನೃತ್ಯ ಮಾಡುವುದು ಕಷ್ಟಕರವಾಗಿತ್ತು. ಬೆನ್ನು ಹುರಿಗೆ ಚಿಕಿತ್ಸೆ ಪಡೆದು ಇಂದು ನೃತ್ಯದಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ.
ಚಿತ್ರಗಳಲ್ಲಿ ಆಕ್ಷನ್ ಹೀರೋ (Action Hero) ಇಮೇಜ್ ಹೊಂದಿರುವ ಹೃತಿಕ್ ನಿಜ ಜೀವನದಲ್ಲಿ ಸ್ವಲ್ಪ ವಿಭಿನ್ನ. ಒಮ್ಮೆ ತಂದೆ ರಾಕೇಶ್ ರೋಷನ್ ಮೇಲಿನ ಮಾಫಿಯಾ ದಾಳಿ ಹೃತಿಕ್ ರೋಷನ್ ಅವರನ್ನು ಭಯಪಡಿಸಿತ್ತು ಮತ್ತು ಅವರು ಬಾಲಿವುಡ್ ತೊರೆಯಲು ಸಹ ನಿರ್ಧರಿಸಿದರು.
ಇಂದು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಸೂಪರ್ ಸ್ಟಾರ್ (Super Star) ಹೃತಿಕ್ ರೋಷನ್. ಆದರೆ ಸ್ವತಃ ಅವರೇ ಬೇರೆಯವರ ಹುಚ್ಚು ಅಭಿಮಾನಿಯಾಗಿದ್ದಾರೆ. ವಾಸ್ತವವಾಗಿ, ಹೃತಿಕ್ ಅವರು ಆರಂಭಿಕ ಹಂತದಲ್ಲಿಯೇ ಮಧುಬಾಲಾ ಮತ್ತು ನಂತರ ಪರ್ವೀನ್ ಬಾಬಿ ಕಡೆಗೆ ತುಂಬಾ ಆಕರ್ಷಕವಾಗಿದ್ದೆ, ಎಂದು ಹೇಳಿ ಕೊಂಡಿದ್ದಾರೆ.
ಹೃತಿಕ್ ತಮ್ಮ ಮೊದಲ ಪಾತ್ರ ಮಾಡಿದ್ದು ಅವರ ಅಜ್ಜನ ಸಿನಿಮಾದಲ್ಲಿ. ಆಗ ಅವರಿಗೆ ಕೇವಲ 6 ವರ್ಷ. ಆಶಾ ಚಿತ್ರದಲ್ಲಿ ಅವರ ತಾತ ಓಂ ಪ್ರಕಾಶ್ ಹೃತಿಕ್ ರೋಷನ್ ಅವರಿಗೆ ಪಾತ್ರವನ್ನು ನೀಡಿದರು. ಅದಕ್ಕೆ ಪ್ರತಿಯಾಗಿ 100 ರೂ ಸಂಭಾವನೆ ಪಡೆದಿದ್ದರು. ಇದು ಹೃತಿಕ್ ಅವರ ಮೊದಲ ಗಳಿಕೆ.
ಹೃತಿಕ್ ರೋಷನ್ ತಮ್ಮ ವೃತ್ತಿ ಜೀವನದಲ್ಲಿ (Career) ಕಹೋ ನಾ ಪ್ಯಾರ್ ಹೈ, ಧೂಮ್ 2, ಅಗ್ನಿಪಥ್, ಜೋಧಾ ಅಕ್ಬರ್(Jodha Akbhar), ಕ್ರಿಶ್, ಬ್ಯಾಂಗ್ ಬ್ಯಾಂಗ್, ಕಭಿ ಖುಷಿ ಕಭಿ ಗಮ್, ಕೋಯಿ ಮಿಲ್ ಗಯಾ, ಸೂಪರ್ 30, ಕಾಬಿಲ್, ಜಿಂದಗಿ ನಾ ಮಿಲೇಗಿ ದೋಬಾರಾ.ಮುಂತಾದ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಮುಂಬರುವ ಸಿನಿಮಾ ವಿಕ್ರಮ್ ವೇದಾ (Vikram Veda) ಮತ್ತು ಸೈಫ್ ಅಲಿ ಖಾನ್ (Saif Ali Khan) ಕೂಡ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.