Kangana Ranaut: ಬೇಗ ಮದ್ವೆಯಾಗ್ಬೇಕು, ಮ್ಯಾರೇಜ್ ಪ್ಲಾನ್ಸ್ ಹೇಳಿದ ಕ್ವೀನ್

First Published Nov 12, 2021, 6:17 PM IST
  • Kangana Ranaut: ಬಾಲಿವುಡ್ ಕ್ವೀನ್ ಮದುವೆ ಯೋಚನೆ
  • ಸಂಗಾತಿ ಯಾರು ಎಂದಾಗ ನಟಿ ಕಂಗನಾ ಹೇಳಿದ್ದಿಷ್ಟು

ತಾನು ಮದುವೆಯಾಗಿ ಮುಂದಿನ ಐದು ವರ್ಷಗಳಲ್ಲಿ ಮಕ್ಕಳನ್ನು ಹೊಂದಲು ಬಯಸುತ್ತೇನೆ ಎಂದು ನಟಿ ಕಂಗನಾ ರಣಾವತ್ ಬುಧವಾರ ಹೇಳಿದ್ದಾರೆ. ಹೊಸ ಸಂದರ್ಶನದಲ್ಲಿ, ಅವರು ವೈಯಕ್ತಿಕವಾಗಿ ಸಂತೋಷದ ಸ್ಥಳದಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಶೀಘ್ರದಲ್ಲೇ ವಿವರಗಳನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.ರೆ.

ಪದ್ಮಶ್ರೀ ಪ್ರಶಸ್ತಿಗೆ(Padma Shri) ಭಾಜನರಾದ ಕೆಲವು ದಿನಗಳ ನಂತರ ಕಂಗನಾ ರಣಾವತ್ ಅವರ ಸಂದರ್ಶನ ಬಂದಿದೆ. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ನಾನು ಖಂಡಿತವಾಗಿಯೂ ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಬಯಸುತ್ತೇನೆ. ನಾನು ಐದು ವರ್ಷಗಳ ಒಳಗೆ ತಾಯಿಯಾಗಿ ಮತ್ತು ಹೆಂಡತಿಯಾಗಿ ಮತ್ತು ಸಹಜವಾಗಿ ನವ ಭಾರತದ ದೃಷ್ಟಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ವ್ಯಕ್ತಿಯಾಗಿ ನನ್ನನ್ನು ನಾನು ಕಾಣುತ್ತೇನೆ ಎಂದು ಅವರು ಹೇಳಿದ್ದಾರೆ.

ಐದು ವರ್ಷಗಳಲ್ಲಿ ತಾಯಿ ಮತ್ತು ಹೆಂಡತಿಯಾಗುವ ವಿಚಾರವಾಗಿ ಕೆಲಸ ಮಾಡುತ್ತಿದ್ದೀರಾ ಎಂದು ಕೇಳಿದಾಗ, ಕಂಗನಾ ಜೋರಾದ ನಗು ಕೊಟ್ಟಿದ್ದಾರೆ. ನಂತರ ಹೌದು ಎಂದು ಪ್ರತಿಕ್ರಿಯಿಸಿದ್ದಾರೆ.

ಸಂಗಾತಿಯ ಬಗ್ಗೆ ಕೇಳಿದಾಗ ನಿಮಗೆ ಶೀಘ್ರದಲ್ಲೇ ತಿಳಿಯುತ್ತದೆ ಎಂದಿದ್ದಾರೆ. ನಟಿ ಪ್ರೀತಿಯಲ್ಲಿ ಸಂತೋಷದ ಸ್ಥಳದಲ್ಲಿ ಇರುವುದಾಗಿ ಹೇಳಿದ್ದಾರೆ. ನಿಮಗೆ ಶೀಘ್ರದಲ್ಲೇ ತಿಳಿಯುತ್ತದೆ ಎಂದಿದ್ದಾರೆ.

ಪದ್ಮಶ್ರೀ ಸ್ವೀಕರಿಸಿದ ನಂತರ ಕಂಗನಾ ಇನ್ಸ್ಟಾಗ್ರಾಮ್‌ನಲ್ಲಿ ರಾಷ್ಟ್ರಪತಿ ಕೋವಿಂದ್ ಅವರೊಂದಿಗೆ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಉಡುಗೊರೆಗಾಗಿ ಭಾರತಕ್ಕೆ ಧನ್ಯವಾದಗಳು ಎಂದಿದ್ದರು ನಟಿ.

ಇತ್ತೀಚೆಗಷ್ಟೇ ನವಾಜುದ್ದೀನ್ ಸಿದ್ದಿಕಿ ಅಭಿನಯದ ಕಂಗನಾ ಅವರ ನಿರ್ಮಾಣ ಸಿನಿಮಾ ಟಿಕು ವೆಡ್ಸ್ ಶೇರು ಚಿತ್ರೀಕರಣ ಪ್ರಾರಂಭವಾಯಿತು. ಇದರಲ್ಲಿ ನಟಿ ಅವನೀತ್ ಕೌರ್ ಕೂಡ ಇದ್ದಾರೆ. ಇದನ್ನು ಸಾಯಿ ಕಬೀರ್ ನಿರ್ದೇಶಿಸಲಿದ್ದಾರೆ.

ಅವರು ತಮ್ಮ ನಿರ್ಮಾಣ ಸಂಸ್ಥೆಯಾದ ಮಣಿಕರ್ಣಿಕಾ ಫಿಲ್ಮ್ಸ್ ಅಡಿಯಲ್ಲಿ ತಮ್ಮ ಮೊದಲ ಡಿಜಿಟಲ್ ಎಂಟ್ರಿ ಸಿನಿಮಾ ನಿರ್ಮಿಸುತ್ತಿದ್ದಾರೆ.

ಟಿಕು ವೆಡ್ಸ್ ಶೇರು ಹೊರತುಪಡಿಸಿ, ಕಂಗನಾ ಇನ್ನೂ ಹಲವಾರು ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ. ಅವರು ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ, ಎಮರ್ಜೆನ್ಸಿ, ಢಾಕಡ್, ತೇಜಸ್, ಅಪರಾಜಿತಾ ಅಯೋಧ್ಯೆ ಮತ್ತು ದಿ ಇನ್ಕಾರ್ನೇಷನ್: ಸೀತಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

click me!