ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕಾಗಿ ಐಶ್ವರ್ಯಾ ರೈ ಪಡೆದ ಫೀಸ್ ಬಹಿರಂಗ
First Published | Sep 25, 2022, 4:58 PM ISTನಿರ್ದೇಶಕ ಮಣಿರತ್ನಂ (Mani Ratnam) ಅವರ ಚಿತ್ರ ಪೊನ್ನಿಯಿನ್ ಸೆಲ್ವನ್ (Ponniyin Selvan I) ಇದೇ ತಿಂಗಳ 30 ರಂದು ಥಿಯೇಟರ್‌ಗಳಲ್ಲಿ ಸಂಚಲನ ಮೂಡಿಸಲಿದೆ. ಹಿಂದಿ ಜೊತೆಗೆ ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲೂ ಚಿತ್ರದ ಬಗ್ಗೆ ಭಾರೀ ಸುದ್ದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಸಂಜೆ, ಸ್ಟಾರ್‌ಕಾಸ್ಟ್ ಮುಂಬೈನಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಚಿತ್ರದಲ್ಲಿ ಕೆಲಸ ಮಾಡುವ ತಾರೆಯರ ಶುಲ್ಕವನ್ನು ಬಹಿರಂಗಪಡಿಸಲಾಗಿದೆ. 500 ಕೋಟಿ ಬಜೆಟ್‌ನಲ್ಲಿ ತಯಾರಾದ ಪೊನ್ನಿಯನ್ ಸೆಲ್ವನ್ 1 ಚಿತ್ರಕ್ಕಾಗಿ ಐಶ್ವರ್ಯಾ ರೈ ಬಚ್ಚನ್(Aishwarya Rai Bachchan) ಅವರಿಗೆ 10 ಕೋಟಿ ರೂಪಾಯಿ ಶುಲ್ಕವನ್ನು ನೀಡಲಾಗಿದೆಎಂದು ವರದಿಯಾಗಿದೆ. ಪೊನ್ಯನ್ ಸೆಲ್ವನ್ 1 ನಲ್ಲಿ ಕೆಲಸ ಮಾಡಲು ಯಾವ ಸ್ಟಾರ್ ಎಷ್ಟು ಶುಲ್ಕವನ್ನು ಪಡೆದಿದ್ದಾರೆ ಎಂಬ ವಿವರ ಇಲ್ಲಿದೆ.