36 ವರ್ಷ ಗಂಡನಿಂದ ದೂರ, ಸಿಂಗರ್‌ ಕುಮಾರ್ ಸಾನು, ಉದಿತ್ ತಳುಕು ಹಾಕೊಂಡ ಆಲ್ಕಾರ ಪ್ರೇಮ ಜೀವನದ ಕಥೆ!

ಸಂಗೀತಗಾರ್ತಿ ಆಲ್ಕಾ ಯಾಗ್ನಿಕ್ ಅವರಿಗೆ 59 ವರ್ಷ. 16 ಭಾಷೆಗಳಲ್ಲಿ 2000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಈ ಕಲಾವಿದೆಯ ವೈಯಕ್ತಿಕ ಜೀವನ, ಅದರಲ್ಲೂ ಅವರ ವೈವಾಹಿಕ ಜೀವನ ಹಲವು ವರ್ಷಗಳಿಂದ ಚರ್ಚೆಯ ವಿಷಯವಾಗಿದೆ.

playback singer  Alka Yagnik Long Distance Marriage and Relationships Love Life Facts gow

ಆಲ್ಕಾ ಯಾಗ್ನಿಕ್ ಅವರಿಗೆ 59 ವರ್ಷ. ಅವರು ಸಂಗೀತ ಜಗತ್ತಿನ ಪ್ರಕಾಶಮಾನವಾದ ನಕ್ಷತ್ರ. ತನ್ನ ಮಧುರ ಕಂಠದಿಂದ ಲಕ್ಷಾಂತರ ಹೃದಯಗಳನ್ನು ಆಳಿದ ಲೆಜೆಂಡ್‌ ಗಾಯಕಿ ಅಲ್ಕಾ ಯಾಗ್ನಿಕ್ (Alka Yagnik) ಅವರಿಗೆ ಬಾಲ್ಯದಲ್ಲೇ ತಾಯಿಯಿಂದ ಸಂಗೀತ ಕಲಿತು ಚಿಕ್ಕ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು.ಕೇವಲ 10 ನೇ ವಯಸ್ಸಿನಲ್ಲಿ, ಅವರು ತನ್ನ ಅದೃಷ್ಟವನ್ನು ಪರೀಕ್ಷಿಸಲು ತನ್ನ ತಾಯಿಯೊಂದಿಗೆ ಮುಂಬೈಗೆ ಬಂದರು.

ಒಸಾಮಾ ಬಿನ್ ಲಾಡೆನ್ ಲ್ಯಾಪ್‌ಟಾಪ್‌ನಲ್ಲಿ ಬಾಲಿವುಡ್ ಹಾಡುಗಳು!

ಗಾಯಕಿ 16 ಭಾಷೆಗಳಲ್ಲಿ 2000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆಲ್ಕಾ ಕೋಲ್ಕತ್ತಾದಲ್ಲಿ  ಗುಜರಾತಿ ಕುಟುಂಬದಲ್ಲಿ ಜನಿಸಿದ್ದು, ನಂತರ 10 ವರ್ಷಕ್ಕೆ ಮುಂಬೈಗೆ ಹೋದರು. ಈ ಗಾಯಕಿ 16 ಭಾಷೆಗಳಲ್ಲಿ 2000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.  


ಅಲ್ಕಾ ಯಾಗ್ನಿಕ್ ಅವರ ವೃತ್ತಿಪರ ಜೀವನ ಯಶಸ್ಸು ಕಂಡಷ್ಟು ಅವರ ವೈಯಕ್ತಿಕ ಜೀವನ ಯಶಸ್ವಿಯಾಗಲಿಲ್ಲ. ಗಾಯಕಿ 36 ವರ್ಷಗಳಿಂದ ಗಂಡ ನೀರಜ್ ಕಪೂರ್‌ನಿಂದ  ದೂರವಿದ್ದಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ಬಾರಿ ಹಲವು ಮಾತುಗಳು ಕೇಳಿಬಂದಿವೆ. ಕುಮಾರ್ ಶಾನು, ಉದಿತ್ ಜೊತೆ ಹೆಸರು ತಳುಕು ಹಾಕಿಕೊಂಡಿದೆ. 

ಗಾಯಕಿ ಅಲ್ಕಾ ಯಾಗ್ನಿಕ್‌ಗೆ ಹಠಾತ್ ಕಿವುಡುತನ! ಜೋರಾಗಿ ಸಂಗೀತ ಕೇಳಬೇಡಿ ಎಂದು ವಿನಂತಿ

ಆಲ್ಕಾ ಅವರ ಪ್ರೇಮಕಥೆ ಅದ್ಭುತವಾಗಿದೆ. ಅವರು ಶಿಲ್ಲಾಂಗ್‌ನ ಉದ್ಯಮಿ ನೀರಜ್ ಕಪೂರ್ ಅವರನ್ನು ಮದುವೆಯಾದರು.  ಇವರಿಬ್ಬರು ಮೊದಲು ಭೇಟಿಯಾದದ್ದು ದೆಹಲಿಯ ರೈಲು ನಿಲ್ದಾಣದಲ್ಲಿ. ವಾಸ್ತವವಾಗಿ, ಅಲ್ಕಾ ಅವರು ಕೆಲವು ಕೆಲಸದ ನಿಮಿತ್ತ ದೆಹಲಿಗೆ ಬಂದಿದ್ದರು ಮತ್ತು ನೀರಜ್ ಅವರನ್ನು ಸ್ವೀಕರಿಸಲು ನಿಲ್ದಾಣಕ್ಕೆ ಬಂದಿದ್ದರು. ಈ ಮೊದಲ ಭೇಟಿಯ ನಂತರ ಇಬ್ಬರೂ ಸ್ನೇಹಿತರಾದರು. ನೀರಜ್ ಆಗಾಗ್ಗೆ ಮುಂಬೈಗೆ ಹೋಗಿ ಅಲ್ಕಾಳನ್ನು ಭೇಟಿಯಾಗುತ್ತಿದ್ದರು ಮತ್ತು ಇಬ್ಬರೂ ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದರು.

1980ರಲ್ಲಿ ಆಲ್ಕಾ ಮೊದಲ ಬಾರಿಗೆ ಹಿನ್ನೆಲೆ ಗಾಯನ ಮಾಡಿದರು. 'ಪಾಯೆನ್ ಕಿ ಝಂಕಾರ' ಹಾಡನ್ನು ಹಾಡಿದರು. ಮೊದಲ ಹಾಡೇ ದೊಡ್ಡ ಹಿಟ್ ಆಯಿತು. ಆ ನಂತರ ಗಾಯಕಿಗೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಆಶಾ ಭೋಸ್ಲೆ ಅವರಿಗೆ ಪೈಪೋಟಿ ನೀಡಿದರು. ನಂತರ ಕೆಲಸದ ನಿಮಿತ್ತ ಮುಂಬೈಗೆ ಬಂದು ನೆಲೆಸಬೇಕಾಯಿತು.

ಒಂದು ಹಾಡಿಗೆ ಈಕೆ ಚಾರ್ಜ್ ಮಾಡೋದು 12 ಲಕ್ಷ, ಹಾಡಿರೋದು 20,000ಕ್ಕೂ ಹೆಚ್ಚು ಗೀತೆಗಳು.. ಈಕೆಯ ಆಸ್ತಿ ಮೌಲ್ಯ?

ಅಲ್ಕಾ ಯಾಗ್ನಿಕ್ ತಮ್ಮ ವೃತ್ತಿಜೀವನದಲ್ಲಿ  ಸಾಕಷ್ಟು  ಚಿತ್ರಗಳಿಗೆ ಧ್ವನಿ ನೀಡಿದ್ದಾರೆ.  ಅನೋಖಿ ರಿಶ್ತಾ, ಜೀವನ ಧಾರಾ, ಕಾಮಜೋರ್, ವಿಧಾತ, ಅವತಾರ, ಕೂಲಿ, ಘರ್ ಏಕ್ ಮಂದಿರ್, ಲವ್ ಮ್ಯಾರೇಜ್, ಜಾಸ್ಮಿನ್ ಕಿ ಶಾದಿ, ಘರ್ ಘರ್ ಕಿ ಕಹಾನಿ, ಖತ್ರೋನ್ ಕೆ ಖಿಲಾಡಿ, ಖಯಾಮತ್ ಸೆ ಕಯಾಮತ್ ತಕ್, ತ್ರಿದೇವ್, ನರಸಿಂಹ, ಫೂಲ್ ಔರ್ ಕಾಂಟೆ ಮುಂತಾದ ಸಿನಿಮಾ ಸಿನಿಮಾಗಳಿಗೆ ಹಿನ್ನಲೆ ಗಾಯಕಿಯಾಗಿ ಕೆಲಸ ಮಾಡಿದ್ದಾರೆ. 

ಕುಮಾರ್ ಸಾನು ಮತ್ತು ಉದಿತ್ ನಾರಾಯಣ್ ಅವರೊಂದಿಗೆ ಆಲ್ಕಾ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅವರೊಂದಿಗೆ ಸಂಬಂಧದ ಬಗ್ಗೆ ಆಗಾಗ ಸುದ್ದಿ ಬಂದಿದೆ. ಆದರೆ ಸಂದರ್ಶನವೊಂದರಲ್ಲಿ ಅವರು ಹೇಳಿದ್ದು, 'ನಾನು ಬೇರೆ ಯಾವುದೇ ಪುರುಷನಿಗೆ ಆಕರ್ಷಿತನಾಗಿಲ್ಲ ಅಂತಲ್ಲ. ಆದರೆ ನನ್ನ ಶಿಕ್ಷಣ ಮತ್ತು ನೀತಿ ಬೇರೆಯೇ ರೀತಿಯಲ್ಲಿದೆ. ನಾನು ಪ್ರವಾಹದಲ್ಲಿ ತೇಲಿ ಹೋಗಲಿಲ್ಲ. ನಾನು ನೀರಜ್ ಅವರನ್ನು ಪ್ರೀತಿಸುತ್ತೇನೆ ಎಂದು ಪದೇ ಪದೇ ಅಂದುಕೊಂಡಿದ್ದೇನೆ. ಈ ಪ್ರೀತಿ ಮತ್ತು ನಂಬಿಕೆಯಿಂದಲೇ ನಮ್ಮ ಸಂಬಂಧ ನಡೆಯುತ್ತಿದೆ.'

ಮಾಹಿತಿಯ ಪ್ರಕಾರ, ಅವರು ಐದು ವರ್ಷಗಳ ಕಾಲ ಬೇರೆಯಾಗಿದ್ದರು. ನಂತರ ಮಾತನಾಡಿಕೊಂಡು ಎಲ್ಲವನ್ನೂ ಸರಿಪಡಿಸಿಕೊಂಡರು. ಮುಂಬೈಗೆ ಬಂದಾಗ ಅವರ ಪತಿ ಆಲ್ಕಾ ಜೊತೆಯೇ ಇರುತ್ತಾರೆ ಎಂದು ತಿಳಿದುಬಂದಿದೆ.

Latest Videos

vuukle one pixel image
click me!