12 ವರ್ಷ ಡೇಟಿಂಗ್: ಇದೀಗ ಸಂಗ್ರಾಮ್ ಸಿಂಗ್ ಜೊತೆ ಸಪ್ತಪದಿ ತುಳಿದ ಪಾಯಲ್ ರೋಹಟಗಿ
First Published | Jul 10, 2022, 4:22 PM ISTನಟಿ ಮತ್ತು ರೂಪದರ್ಶಿ ಪಾಯಲ್ ರೋಹಟಗಿ (Payal Rohatgi) ಅವರು ಕುಸ್ತಿಪಟು ಸಂಗ್ರಾಮ್ ಸಿಂಗ್ (Sangram Singh) ಅವರನ್ನು ವಿವಾಹವಾಗಿದ್ದಾರೆ. ಶನಿವಾರ, ಆಗ್ರಾದ ಜೇಪೀ ಪ್ಯಾಲೇಸ್‌ನಲ್ಲಿ ಅವರ ವಿವಾಹದ ವಿಧಿವಿಧಾನಗಳು ಪೂರ್ಣಗೊಂಡಿವೆ. ಅವರ ಮದುವೆಯ ಮೊದಲ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ, ಇದರಲ್ಲಿ ಪಾಯಲ್ ಕೆಂಪು ಲೆಹೆಂಗಾದಲ್ಲಿ ಮತ್ತು ಸಂಗ್ರಾಮ್ ಅನ್ನು ಆಫ್ ವೈಟ್ ಶೇರ್ವಾನಿಯಲ್ಲಿ ಕಾಣಬಹುದು. ಮದುವೆಯ ಖುಷಿ ಪಾಯಲ್ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಪಾಯಲ್ ಮತ್ತು ಸಂಗ್ರಾಮ್ ಮದುವೆಯ ಫೋಟೋಗಳು ಇಲ್ಲಿವೆ.