ಶೂಟಿಂಗ್ ನಲ್ಲಿ ಗರ್ಭಿಣಿ ಅಲಿಯಾ ಭಟ್; ಬೇಬಿ ಬಂಪ್ ಫೋಟೋ ವೈರಲ್

Published : Jul 10, 2022, 03:31 PM IST

ಅಲಿಯಾ ಭಟ್ ಗರ್ಭಿಣಿ ಎಂದು ಬಹಿರಂಗ ಪಡಿಸಿದ ಬಳಿಕ ತನ್ನ ಫೋಟೋವನ್ನು ಎಲ್ಲೂ ಶೇರ್ ಮಾಡಿರಲಿಲ್ಲ. ಆದರೀಗ ಅಲಿಯಾ ಬೇಬಿ ಬಂಪ್ ಫೋಟೋ ವೈರಲ್ ಆಗಿದೆ. ಚಿತ್ರೀಕರಣದಲ್ಲಿದ್ದ ಅಲಿಯಾ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

PREV
16
ಶೂಟಿಂಗ್ ನಲ್ಲಿ ಗರ್ಭಿಣಿ ಅಲಿಯಾ ಭಟ್; ಬೇಬಿ ಬಂಪ್ ಫೋಟೋ ವೈರಲ್

ಬಾಲಿವುಡ್ ನಟಿ ಅಲಿಯಾ ಭಟ್ ಇತ್ತೀಚಿಗಷ್ಟೆ ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಅಂದಹಾಗೆ ಅಲಿಯಾ ಭಟ್ ಹಾಲಿವುಡ್ ನ ಹಾರ್ಟ್ ಆಫ್ ಸ್ಟೋನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗರ್ಭಿಣಿ ಆಗಿದ್ದರೂ ಅಲಿಯಾ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿ ತನ್ನ ಭಾಗದ ಚಿತ್ರೀಕರಣ ಸಂಪೂರ್ಣ ಮಾಡಿದ್ದಾರೆ. 

26

 ನಟಿ ಅಲಿಯಾ ಇತ್ತೀಚಿಗಷ್ಟೆ ಪ್ರೆಗ್ನೆನ್ಸಿ ಅನೌನ್ಸ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಅಲಿಯಾ ಗರ್ಭಿಣಿ ಎಂದು ಗೊತ್ತಾಗುತ್ತಿದಂತೆ ಈಗಾಗಲೇ ಸಹಿ ಮಾಡಿದ ಸಿನಿಮಾಗಳ ಕಥೆ ಏನು ಎನ್ನುವ ಪ್ರಶ್ನೆ ಎದುರಾಗಿತ್ತು. ಆದರೆ ಅಲಿಯಾ ಗರ್ಭಿಣಿ ಎಂದು ಬಹಿರಂಗ ಪಡಿಸಿದ ಬೆನ್ನಲ್ಲೇ ಶೂಟಿಂಗ್‌ಗೆ ಹಾಜರಾಗಿ ವೃತ್ತಿ ಪರತೆಮೆರೆದಿದ್ದರು. 

36


ಅಲಿಯಾ ಸದ್ಯ ಬಾಲಿವುಡ್‌ನ ಒಂದು ಸಿನಿಮಾ ಮತ್ತು ಹಾಲಿವುಡ್ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗ ಸಹಿ ಮಾಡಿದ ಸಿನಿಮಾಗಳನ್ನು ಸಂಪೂರ್ಣ ಮಾಡುತ್ತಿದ್ದಾರೆ. ಸದ್ಯ ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸುವ ಮೂಲಕ ಅಲಿಯಾ ಮಗುವಾಗುವ ಮೊದಲೇ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. 
 

46
alia

ಅಲಿಯಾ ಭಟ್ ಗರ್ಭಿಣಿ ಎಂದು ಬಹಿರಂಗ ಪಡಿಸಿದ ಬಳಿಕ ತನ್ನ ಫೋಟೋವನ್ನು ಎಲ್ಲೂ ಶೇರ್ ಮಾಡಿರಲಿಲ್ಲ. ಆದರೀಗ ಅಲಿಯಾ ಬೇಬಿ ಬಂಪ್ ಫೋಟೋ ವೈರಲ್ ಆಗಿದೆ. ಚಿತ್ರೀಕರಣದಲ್ಲಿದ್ದ ಅಲಿಯಾ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

56

ಅಂದಹಾಗೆ ಅಲಿಯಾ ಭಟ್ ವಿದೇಶದಲ್ಲಿ ಚಿತ್ರೀಕರಣದಲ್ಲಿದ್ದರು. ಸದ್ಯ ತನ್ನ ಭಾಗದ ಚಿತ್ರೀಕರಣ ಮುಗಿಸಿ ಭಾರತಕ್ಕೆ ವಾಪಾಸ್ ಆಗಿದ್ದಾರೆ. ಭಾರತಕ್ಕೆ ಬರುತ್ತಿದ್ದಂತೆ ಅಲಿಯಾ ಪತಿ ರಣಬೀರ್ ಕಪೂರ್ ಅವರನ್ನು ಹಗ್ ಮಾಡಿ ಸಂತಸ ಪಟ್ಟಿದ್ದಾರೆ. 

66

ಅಲಿಯಾ ಬಾಲಿವುಡ್ ನಲ್ಲಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಚಿತ್ರೀಕರಣ ಮುಗಿಸಬೇಕಿದೆ. ಇನ್ನು ಈಗಾಗಲೇ ಬ್ರಾಹ್ಮಾಸ್ತ್ರ ಮತ್ತು ಡಾರ್ಲಿಂಗ್ ಚಿತ್ರೀಕರಣ ಮುಗಿಸಿದ್ದು ರಿಲೀಸ್ಗೆ ಎದುರು ನೋಡುತ್ತಿದ್ದಾರೆ. ಗರ್ಭಿಣಿಯಾಗಿದ್ದರು ಅಲಿಯಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವುದು ಅನೇಕರಿಗೆ ಸ್ಫೂರ್ತಿಯಾಗಿದೆ.  

Read more Photos on
click me!

Recommended Stories