ಪಠಾಣ್ (Pathaan) ಸಿನಮಾದ ಅದ್ಭುತ ಯಶಸ್ಸಿನ ನಂತರ, ಶಾರುಖ್ ಖಾನ್ (Shah Rukh Khan) ಅವರು ಜನವರಿ 30 ರಂದು ಮಾಧ್ಯಮಗಳೊಂದಿಗೆ ಮಾತನಾಡಲು ನಿರ್ಧರಿಸಿದ್ದರು. ಬಹಳ ಸಮಯದ ನಂತರ ಶಾರುಖ್ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಸಹ ನಟರಾದ ದೀಪಿಕಾ ಪಡುಕೋಣೆ (Deepika Padukone) ಮತ್ತು ಜಾನ್ ಅಬ್ರಹಾಂ (John Abraham) ಅವರು ಜೊತೆಗಿದ್ದು ಇವೆಂಟ್‌ನ ಮೆರಗನ್ನು ಇನ್ನಷ್ಟೂ ಹೆಚ್ಚಿಸಿದ್ದಾರೆ. ಈ ಸಮಯದಲ್ಲಿ ಮೂವರು ಮೀಡಿಯಾ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಕಾರ್ಯಕ್ರಮದ ಕೆಲವು ಸುಂದರ ಫೋಟೋಗಳು ಇಲ್ಲಿವೆ.
ಕೇಸರಿ ಬಿಕಿನಿ ವಿವಾದ, ಬಾಯ್‌ಕಾಟ್ ಹಾಗೂ ಬ್ಯಾನ್ ಬೆದರಿಕೆ ಎಲ್ಲವನ್ನೂ ಮೀರಿ ಪಠಾಣ್ ಸಿನಿಮಾ ತನ್ನ ಯಶಸ್ಸು ಕಂಡುಕೊಂಡಿದೆ. ಬಿಡುಗಡೆಯಾದ ವಾರದೊಳಗೆ ಹಲವು ಹೊಸ ದಾಖಲೆಗಳನ್ನು ಮಾಡಿ, ಬ್ಲಾಕ್ ಬಸ್ಟರ್ ಆಗಿ ಹೊರ ಹೊಮ್ಮಿದೆ.
210
ಶಾರುಖ್ ಮತ್ತು ದೀಪಿಕಾ ಅಭಿನಯದ 'ಪಠಾಣ್' ಸಿನಿಮಾದ ಗಳಿಕೆ ಯಾವುದೇ ಬ್ರೇಕ್ ಇಲ್ಲದೇ ಮುಂದುವರೆಯುತ್ತಲೇ ಇದೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ.
310
ಪಠಾಣ್ ಸಿನಿಮಾ ಅತ್ಯಂತ ವೇಗವಾಗಿ 500 ಕೋಟಿ ಕಲೆಕ್ಷನ್ ಮಾಡಿದ ಮೊದಲ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಮೂಲಕ ನಿಷೇಧ ಹಾಗೂ ದ್ವೇಷಕ್ಕೂ ಸಿನಿ ಪ್ರೇಕ್ಷಕರು ಮಣೆ ಹಾಕೋಲ್ಲ ಅನ್ನೋದನ್ನು ಸಾಬೀತು ಮಾಡಿದೆ.
410
ಶಾರುಖ್ ಅವರ ವೃತ್ತಿಜೀವನದಲ್ಲಿ ಪಠಾಣ್ ಶಾರುಖ್ ಖಾನ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ. ಇದಕ್ಕೂ ಮುನ್ನ 2013ರಲ್ಲಿ ಅವರ ‘ಚೆನ್ನೈ ಎಕ್ಸ್ ಪ್ರೆಸ್’ ಚಿತ್ರ ಅತಿ ಹೆಚ್ಚು ಗಳಿಕೆಯಾಗಿತ್ತು. ಚೆನ್ನೈ ಎಕ್ಸ್‌ಪ್ರೆಸ್‌ನ ಒಟ್ಟಾರೆ ಸಂಗ್ರಹ 227.13 ಕೋಟಿ ರೂ. ಆದರೆ, ಪಠಾಣ್ ಇದುವರೆಗೆ 280 ಕೋಟಿ ರೂ ಗಳಿಸಿದೆ.
510
ಪಠಾಣ್ ಬಾಲಿವುಡ್‌ನ ಅತಿದೊಡ್ಡ ವಾರಾಂತ್ಯದ ಆರಂಭಿಕ ಚಲನಚಿತ್ರ. ಇಲ್ಲಿಯವರೆಗೆ, ಮೊದಲ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಕೆಜಿಎಫ್ 2, ಇದು ಮೊದಲ ವಾರದಲ್ಲಿ 194 ಕೋಟಿ ರೂ. ಪಠಾಣ್ ದಾಖಲೆಯನ್ನು ಮುರಿದು ಮೊದಲ ವಾರದಲ್ಲಿ 280 ಕೋಟಿ ಗಳಿಸಿದೆ.
610
ಪಠಾಣ್ ಕೇವಲ 5 ದಿನಗಳಲ್ಲಿ 280 ಕೋಟಿಗೂ ಹೆಚ್ಚು ಗಳಿಸಿದೆ. ಇದರೊಂದಿಗೆ ಇದು ಸಾರ್ವಕಾಲಿಕ 10ನೇ ಅತಿ ದೊಡ್ಡ ಬಾಲಿವುಡ್ ಚಿತ್ರ ಎನಿಸಿಕೊಂಡಿದೆ. ಇದಕ್ಕೂ ಮೊದಲು, ಅಜಯ್ ದೇವಗನ್ ಅವರ ತನ್ಹಾಜಿ 279.55 ಕೋಟಿ ಗಳಿಸಿದ್ದು, ಗಳಿಕೆಯಲ್ಲಿ ಟಾಪ್-10 ಚಿತ್ರಗಳಲ್ಲಿ 10 ನೇ ಸ್ಥಾನದಲ್ಲಿತ್ತು.
710
ವಿದೇಶಗಳಲ್ಲೂ ಪಠಾಣ್ ಗಳಿಕೆ ಉತ್ತಮವಾಗಿದೆ. ಇದು ವಿಶ್ವದಾದ್ಯಂತ ಗಳಿಕೆಯ ವಿಷಯದಲ್ಲಿ ಬಾಲಿವುಡ್‌ನ ಎರಡನೇ ಅತಿ ಹೆಚ್ಚು ಕಲೆಕ್ಷನ್ ಚಿತ್ರವಾಗಲು ಕಾರಣವಾಗಿದೆ.
810
ಈ ಹಿಂದೆ ಆಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ವಿದೇಶಿ ಮಾರುಕಟ್ಟೆಯಲ್ಲಿ 250 ಕೋಟಿ ಕಲೆಕ್ಷನ್ ಮಾಡಿತ್ತು. ಪಠಾಣ್ ಓವರ್ ಸೀಸ್ ಇಲ್ಲಿಯವರೆಗೆ 207 ಕೋಟಿ ಗಳಿಸಿದೆ.
910
ವಿಶ್ವಾದ್ಯಂತ ಗಳಿಕೆಯ ವಿಷಯದಲ್ಲಿಯೂ, ಪಠಾಣ್ ಬಾಲಿವುಡ್‌ನ ಒಂಬತ್ತನೇ ಚಿತ್ರವಾಗಿದೆ. 2000 ಕೋಟಿ ಗಳಿಸಿದ ವಿಶ್ವಾದ್ಯಂತ ಗಳಿಕೆಯಲ್ಲಿ ದಂಗಲ್ ಇನ್ನೂ ಅಗ್ರಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಪಠಾಣ್ ವಿಶ್ವದಾದ್ಯಂತ ಕಲೆಕ್ಷನ್ 542 ಕೋಟಿ ತಲುಪಿದೆ.
1010
ಪಠಾಣ್ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ವಿದೇಶಗಳ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.