ಮದ್ವೆಯಾದ ಒಂದೇ ವಾರಕ್ಕೆ ತಾಳಿ ಸಿಂಧೂರ ತೆಗೆದ ಆತಿಯಾ ಶೆಟ್ಟಿ; ತರಾಟೆಗೆ ತೆಗೆದುಕೊಂಡ ನೆಟ್ಟಿಗರು

First Published Jan 31, 2023, 4:31 PM IST

ಪ್ಯಾಪರಾಜಿಗಳ ಕಣ್ಣಿಗೆ ಬಿದ್ದ ಆತಿಯಾ ಶೆಟ್ಟಿ ಮತ್ತು ಕೆಎಲ್‌ ರಾಹುಲ್. ಮದುವೆಯಾದ ಒಂದೇ ವಾರಕ್ಕೆ ಲುಕ್‌ ಬದಲಾಯಿಸಿಕೊಂಡ ನಟಿ ಟ್ರೋಲ್.... 
 

ಬಾಲಿವುಡ್ ಸಿಂಪಲ್ ನಟಿ ಆತಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಕ್ರಿಕೆಟರ್‌ ಕೆಎಲ್‌ ರಾಹುಲ್‌ ಜನವರಿ  23ರಂದು ತಂದೆ ಸುನೀಲ್ ಶೆಟ್ಟಿ  ಖಂಡಾಲ ಫಾರ್ಮ್‌ಹೌಸ್‌ನಲ್ಲಿಅದ್ಧೂರಿಯಾಗಿ ವಿವಾಹವಾದರು.

ಮದುವೆ ಬಳಿಕ ಆತಿಯಾ ಶೆಟ್ಟಿ ಮತ್ತು ರಾಹುಲ್ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿ  ಶರ್ಟ್‌ಗೆ ನೀಲಿ ಬಣ್ಣದ ಜೀನ್ಸ್‌ ಲುಕ್‌ನಲ್ಲಿ ಆತಿಯಾ ಕಾಣಿಸಿಕೊಂಡಿದ್ದಾರೆ. 

ರಾಹುಲ್ ತುಂಬಾ ಸಿಂಪಲ್ ಲುಕ್ ಆಯ್ಕೆ ಮಾಡಿದ್ದಾರೆ. ವೈ-ಟೀಗೆ ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್‌ ಧರಿಸಿದ್ದಾರೆ. ಇಬ್ಬರು ತುಂಬಾನೇ ಸರಳವಾಗಿ ಮಿಂಚಿದ್ದಾರೆ.

ಆತಿಯಾ ಸಿಂಪಲ್‌ ಲುಕ್‌ನ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ ಆದರೆ ಕೆಲವು ಕಿಡಿಕಾರಿದ್ದಾರೆ. ಸಿಂಧೂರ ಮತ್ತು ತಾಳಿ ಧರಿಸಿಲ್ಲ ಎಂದ ಗರಂ ಆಗಿದ್ದಾರೆ ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ.

ಸೆಲೆಬ್ರಿಟಿಗಳು ಮದುವೆಯಾದ ಒಂದೇ ವಾರಕ್ಕೆ ಈ ರೀತಿ ಸಂಪ್ರದಾಯವನ್ನು ಮರೆಯುವುದು ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತದೆ ನಿಮ್ಮನ್ನು ಫಾಲೋ ಮಾಡುವವರು ಹೆಚ್ಚಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಸಿಂಧೂರ ಮತ್ತು ಮಾಂಗಲ್ಯ ಧರಿಸುವುದು ತುಂಬಾನೇ ಮುಖ್ಯವಾಗುತ್ತದೆ, ಪತಿ ಆಯಸ್ಸು ಮತ್ತು ಶ್ರೇಯಸ್ಸಿನ ಬಗ್ಗೆ ಚಿಂತಿಸಬೇಕು ಎಂದು ಬುದ್ದಿ ಮಾತು ಹೇಳಿದ್ದಾರೆ.  

ಮದುವೆಯಲ್ಲಿ ಕೆಎಲ್ ರಾಹುಲ್ ಧರಿಸಿದ್ದ ಬಟ್ಟೆ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮಿಂಟ್ ಗ್ರೀನ್ ಹೆವು ಎಂಬ್ರಾಯಿಡರಿ ಇರುವ  ಕುರ್ತಾ ಮತ್ತು ಪೈಜಾಮಾ  ಧರಿಸಿದ್ದರು. ಹೇರ್ ಸ್ಟೈಲ್ ಮತ್ತು ದಾಡಿ ಸ್ಟೈಲ್ ಕೂಡ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.  

click me!