ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ವಿವಾಹ‌: ಉದಯಪುರ ತಲುಪಿದ ಜೋಡಿ!

Published : Sep 22, 2023, 04:12 PM IST

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ (Parineeti Chopra-Raghav Chadha) ಅವರ ವಿವಾಹವು ಸೆಪ್ಟೆಂಬರ್ 24 ರಂದು ಉದಯಪುರದ ಹೋಟೆಲ್ ದಿ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿದೆ. ಭಾವಿ ವಧು-ವರರು ಉದಯಪುರ ತಲುಪಿದ್ದಾರೆ. ಇಬ್ಬರ ಫೋಟೋಗಳು ವೈರಲ್ ಆಗುತ್ತಿವೆ.  ಅವರ ನಿಶ್ಚಿತಾರ್ಥ ಮತ್ತು ವಿವಾಹದ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಗಮನವನ್ನು ಸೆಳೆಯುತ್ತಿದೆ.

PREV
17
ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ವಿವಾಹ‌: ಉದಯಪುರ ತಲುಪಿದ ಜೋಡಿ!

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ವಿವಾಹದ ಕಾರ್ಯಗಳು ದೆಹಲಿಯಲ್ಲಿ ಸೂಫಿ ರಾತ್ರಿಯೊಂದಿಗೆ ಪ್ರಾರಂಭವಾದವು. ಇದು ಗುರುವಾರ ರಾತ್ರಿ ಅವರ ಕುಟುಂಬದ ನಿಕಟವರ್ತಿಗಳು ಮತ್ತು ಸ್ನೇಹಿತರಿಗಾಗಿ ನಡೆಯಿತು.

  
 

27

ಮದುವೆಯ ಕಾರ್ಯಕ್ರಮಗಳು ಉದಯಪುರಕ್ಕೆ ಶಿಫ್ಟ್‌ ಆಗಿವೆ. ಉದಯಪುರದ ಲೀಲಾ ಪ್ಯಾಲೇಸ್ ಮತ್ತು ತಾಜ್ ಲೇಕ್ ಪ್ಯಾಲೇಸ್‌ನಂತಹ ಪ್ರತಿಷ್ಠಿತ ಸ್ಥಳಗಳಲ್ಲಿ ವಿವಾಹ ಮಹೋತ್ಸವಗಳು ನಡೆಯಲಿವೆ.


   
 

37

ಹೋಟೆಲ್‌ನಲ್ಲಿ ಜೋಡಿಗಾಗಿ ಕಾಯ್ದಿರಿಸಿದ ಸೂಟ್‌ನ ಬೆಲೆ ಪ್ರತಿ ರಾತ್ರಿ 10 ಲಕ್ಷಕ್ಕಿಂತ ಕಡಿಮೆಯಿಲ್ಲ ಎಂದು ವರದಿಯಾಗಿದೆ.


 

47

ಪರಿಣಿತಿ ಮತ್ತು ರಾಘವ್ ಶುಕ್ರವಾರ ಬೆಳಿಗ್ಗೆ ದೆಹಲಿಯಿಂದ ವಿಮಾನದ ಮೂಲಕ ಉದಯಪುರಕ್ಕೆ ಹೊರಟರು. ಅವರ ವಿವಾಹವು ಸೆಪ್ಟೆಂಬರ್ 23 ಮತ್ತು 24 ರಂದು ಎರಡು ದಿನಗಳ ಕಾಲ ನಡೆಯಲಿದೆ.

57

ರಾಘವ್ ನೀಲಿ ಬಣ್ಣದ ಡೆನಿಮ್ಸ್ ಶರ್ಟ್ ಮತ್ತು ಕಪ್ಪು ಸ್ವೆಟರ್ ಮತ್ತು ಸನ್ ಗ್ಲಾಸ್ ಧರಿಸಿದ್ದರು. ಪರಿಣಿತಿ ಅವರು ಕೆಂಪು ಜಂಪ್‌ಸೂಟ್  ಜೊತೆಗೆ ಸನ್‌ಗ್ಲಾಸ್‌ಗಳನ್ನು ಆಯ್ಕೆ ಮಾಡಿಕೊಂಡರು, 

67

ಪರಿಣಿತಿ ಮದುವೆಯ ದಿನದಂದು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಸುಂದರವಾದ ಪೇಸ್ಟಲ್‌ ಕಲರ್‌ ಲೆಹೆಂಗಾವನ್ನು ಧರಿಸುವ ನಿರೀಕ್ಷೆಯಿದೆ.


 

77

ಪರಿಣಿತಿ ತಮ್ಮ ಹೆತ್ತವರಾದ ರೀನಾ ಚೋಪ್ರಾ ಮತ್ತು ಪವನ್ ಚೋಪ್ರಾ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದರು. ರಾಘವ್ ಚಡ್ಡಾ ಅವರ ಕುಟುಂಬ ಸದಸ್ಯರು ಕೂಡ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories