ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ OTT ಸ್ಟಾರ್‌ ಇವ್ರೇ, ಒಂದು ಎಪಿಸೋಡ್‌ಗೆ ಭರ್ತಿ 18 ಕೋಟಿ ಗಳಿಕೆ!

Published : Sep 22, 2023, 10:51 AM ISTUpdated : Sep 22, 2023, 10:57 AM IST

ಕೇವಲ ಸಿನಿಮಾ ನಟನೆಯಿಂದ ಮಾತ್ರವಲ್ಲ ಒಟಿಟಿಗಳಲ್ಲಿ ವೆಬ್‌ ಸಿರೀಸ್‌ನಲ್ಲಿ ಅಭಿನಯಿಸುವ ಮೂಲಕವೂ ನಟ-ನಟಿಯರು ಕೋಟಿಗಳಲ್ಲಿ ಗಳಿಸುತ್ತಾರೆ. ಸಿನಿಮಾದಲ್ಲಿ ಹೈಯೆಸ್ಟ್‌ ತೆಗೆದುಕೊಳ್ಳುವ ನಟ-ನಟಿಯರ ಲಿಸ್ಟ್ ದೊಡ್ಡದಿದೆ. ಆದರೆ, ಆನ್‌ಲೈನ್‌ ಫ್ಲಾಟ್‌ಫಾರ್ಮ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಅಥವಾ ನಟಿ ಯಾರು?

PREV
17
ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ OTT ಸ್ಟಾರ್‌ ಇವ್ರೇ, ಒಂದು ಎಪಿಸೋಡ್‌ಗೆ ಭರ್ತಿ  18 ಕೋಟಿ ಗಳಿಕೆ!

ಒಟಿಟಿ ಪ್ರಪಂಚವು ಕಳೆದ 2-3 ವರ್ಷಗಳಲ್ಲಿ ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಈಗ ಬಹಳಷ್ಟು ಬಾಲಿವುಡ್ ನಟರನ್ನು ಆಕರ್ಷಿಸುತ್ತಿವೆ. ಅಜಯ್ ದೇವಗನ್, ಶಾಹಿದ್ ಕಪೂರ್‌, ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ, ಸೋನಾಕ್ಷಿ ಸಿನ್ಹಾ, ಸಮಂತಾ ರುತು ಪ್ರಭು ಮತ್ತು ಇತರರು ಒಟಿಟಿ ಫ್ಲಾರ್ಟ್‌ಫಾರ್ಮ್‌ಗಳಲ್ಲಿ ಈಗಾಗಲೇ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

27

ಭಾರತದಲ್ಲಿನ ಕೆಲವು ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳೆಂದರೆ ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ZEE5, ಸೋನಿಲಿವ್, ಜಿಯೋ ಸಿನಿಮಾ ಇತ್ಯಾದಿ. ಹಲವು ಖ್ಯಾತ ವೆಬ್ ಸಿರೀಸ್‌ಗಳು ಇಲ್ಲಿ ರಿಲೀಸ್ ಆಗುತ್ತವೆ. ಇಂಥಾ ವೆಬ್‌ ಸಿರೀಸ್‌ಗಳು ಅವುಗಳ ಸೀಕ್ವೆಲ್‌ಗಳು ಕೋಟಿ ಗಟ್ಟಲೆ ಗಳಿಕೆ ಮಾಡಿವೆ..

37

ಒಟಿಟಿ ಪ್ಲಾಟ್‌ಫಾರ್ಮ್‌ಗಳ ಜನಪ್ರಿಯತೆಯು ಹಲವಾರು ನಟರು ಉತ್ತಮ ಹಣವನ್ನು ಗಳಿಸಲು ಸಹಾಯ ಮಾಡಿದೆ ಮತ್ತು ಕೆಲವರು ಕೋಟಿಗಳಲ್ಲಿ ಹಣವನ್ನು ಗಳಿಸುತ್ತಿದ್ದಾರೆ.

47

ಕೇವಲ ಸಿನಿಮಾ ನಟನೆಯಿಂದ ಮಾತ್ರವಲ್ಲ ಒಟಿಟಿಗಳಲ್ಲಿ ವೆಬ್‌ ಸಿರೀಸ್‌ನಲ್ಲಿ ಅಭಿನಯಿಸುವ ಮೂಲಕವೂ ನಟ-ನಟಿಯರು ಕೋಟಿಗಳಲ್ಲಿ ಗಳಿಸುತ್ತಾರೆ. ಸಿನಿಮಾದಲ್ಲಿ ಹೈಯೆಸ್ಟ್‌ ತೆಗೆದುಕೊಳ್ಳುವ ನಟ-ನಟಿಯರ ಲಿಸ್ಟ್ ದೊಡ್ಡದಿದೆ. ಆದರೆ, ಆನ್‌ಲೈನ್‌ ಫ್ಲಾಟ್‌ಫಾರ್ಮ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಅಥವಾ ನಟಿ ಯಾರು?

57

ಬಾಲಿವುಡ್ ಸೂಪರ್‌ಟಾರ್ ಅಜಯ್ ದೇವಗನ್ ಡಿಸ್ನಿ+ ಹಾಟ್‌ಸ್ಟಾರ್‌ನ ಕ್ರೈಮ್ ಥ್ರಿಲ್ಲರ್ ಮೂಲಕ 2022ರಲ್ಲಿ ಒಟಿಟಿಗೆ ಪಾದಾರ್ಪಣೆ ಮಾಡಿದರು. ರುದ್ರ: ದಿ ಎಡ್ಜ್ ಆಫ್ ಡಾರ್ಕ್‌ನೆಸ್ 2022ರಲ್ಲಿ ರಿಲೀಸ್ ಆಯಿತು. ರಾಶಿ ಖನ್ನಾ ಈ ವೆಬ್‌ ಸಿರೀಸ್‌ನ ನಾಯಕಿ. ಅಜಯ್ ದೇವಗನ್, ಒಟಿಸಿ ಪ್ಲಾಟ್‌ಫಾರ್ಮ್‌ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಜನಪ್ರಿಯ ಮುಖ್ಯವಾಹಿನಿಯ ನಟರಲ್ಲಿ ಒಬ್ಬರು. 

67

ವರದಿಗಳ ಪ್ರಕಾರ, ಅಜಯ್ ದೇವಗನ್ ರುದ್ರದ ಏಳು ಸಂಚಿಕೆಗಳಿಗೆ ಬರೋಬ್ಬರಿ 125 ಕೋಟಿ ರೂ.ಗಳನ್ನು ವಿಧಿಸಿದ್ದಾರೆ, ಇದು ಬ್ರಿಟಿಷ್ ಶೋ ಲೂಥರ್‌ನ ಅಧಿಕೃತ ರಿಮೇಕ್ ಆಗಿದೆ. ಅಜಯ್ ದೇವಗನ್ ಅವರು ವಿಧಿಸಿದ ಶುಲ್ಕದ ಪ್ರಕಾರ ಅವರು ಪ್ರತಿ ಸಂಚಿಕೆಗೆ 18 ರೂ. ಕೋಟಿಗಳನ್ನು ಪಡೆದುಕೊಂಡಿದ್ದಾರೆ. ಇದು ಅವರನ್ನು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಒಟಿಟಿ ನಟರು ಎಂದು ಕರೆಯುವಞಮತೆ ಮಾಡಿದೆ.

77

ಒಟಿಸಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಭಿನಯಕ್ಕಾಗಿ ಪ್ರಶಂಸೆ ಗಳಿಸುತ್ತಿರುವ ಇನ್ನೊಬ್ಬ ನಟ ಮನೋಜ್ ಬಾಜ್‌ಪೇಯಿ. ಕ್ರೈಮ್ ಥ್ರಿಲ್ಲರ್ ಸರಣಿ 'ದಿ ಫ್ಯಾಮಿಲಿ ಮ್ಯಾನ್‌'ನಲ್ಲಿ ಶ್ರೀಕಾಂತ್ ತಿವಾರಿ ಪಾತ್ರಕ್ಕಾಗಿ ಬಹುಮುಖ ನಟ ಪ್ರಶಂಸೆಯನ್ನು ಗಳಿಸಿದರು. ವರದಿಗಳ ಪ್ರಕಾರ, ಫ್ಯಾಮಿಲಿ ಮ್ಯಾನ್‌ನ ಎರಡನೇ ಸೀಸನ್‌ನಲ್ಲಿನ ಅಭಿನಯಕ್ಕಾಗಿ ಮನೋಜ್ ಬಾಜ್‌ಪೇಯಿ ಅವರು 10 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Read more Photos on
click me!

Recommended Stories