ಮಿಸ್ ಇಂಡಿಯಾ ಆಗಿದ್ದ ಪೂನಂ ಧಿಲ್ಲೋನ್ ಹಿಂದಿನ ಯುಗದ ಸುಂದರ ನಟಿಯರಲ್ಲಿ ಎಣಿಸಲ್ಪಟ್ಟಿದ್ದಾರೆ. ಪೂನಂ ಧಿಲ್ಲೋನ್ ಆಗಿನ ಕಾಲದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು.
ಪೂನಂ ತುಂಬಾ ಸುಂದರವಾದ ಫೇಸ್ ಕಟ್ ಮತ್ತು ಅತ್ಯುತ್ತಮ ನಟನೆಯ ಮೂಲಕ ಚಿತ್ರರಂಗದಲ್ಲಿ ತನ್ನ ಸ್ಥಾನವನ್ನು ಗಳಿಸಿದ್ದರು. ಅವರು ಚಲನಚಿತ್ರಗಳಿಂದ ದೂರವಿದ್ದು ವರ್ಷಗಳೇ ಕಳೆದಿವೆ ಹಾಗೂ ಪೂನಂ ಈಗ ಟಿವಿ ಶೋನಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುತ್ತಿದ್ದಾರೆ,
ಪೂನಂ ಧಿಲ್ಲೋನ್ ಮತ್ತು ಅವರ ಮಗಳು ಪಲೋಮಾ ಧಿಲ್ಲೋನ್ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಈಗ ಪೂನಂ ಅವರ ಮಗಳು ಪಲೋಮಾ ಧಿಲ್ಲೋನ್ ಸೌಂದರ್ಯದ ವಿಷಯದಲ್ಲಿ ತಾಯಿಯನ್ನು ಹಿಂದಿಕ್ಕುತ್ತಿದ್ದಾರೆ.
ಪಲೋಮಾ ಅವರ ಇನ್‌ಸ್ಟಾ ಖಾತೆಯು ಅವರ ಮನಮೋಹಕ ಫೋಟೋಗಳಿಂದ ತುಂಬಿದೆ.ಪಲೋಮಾ ಧಿಲ್ಲೋನ್ ಅವರ Instagram ಖಾತೆಗೆ ಭೇಟಿ ನೀಡಿದಾಗ, ಅವರು ಬಾಲಿವುಡ್‌ಗೆ ಪ್ರವೇಶಿಸಲು ತಯಾರಿ ನಡೆಸುತ್ತಿರಬಹುದು ಎಂದು ಅನಿಸುತ್ತದೆ.
Paloma Dhillon
ಪೂಲ್‌ನಲ್ಲಿ ಫ್ರೆಂಡ್ಸ್ ಜೊತೆ ಎಂಜಾಯ್ ಮಾಡುತ್ತಿರುವ ಈ ಫೋಟೋನ ಪಲೋಮಾ ಧಿಲ್ಲೋನ್ ಅವರು Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮೇಕಪ್ ಇಲ್ಲದೆಯೇ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ .
ಪಲೋಮಾ ತುಂಬಾ ಗ್ಲಾಮರಸ್ ಆಗಿದ್ದಾರೆ. ಆದರೆ ತನ್ನ ತಾಯಿಯಂತೆ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತೇನೆ ಎಂಬ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಆಕೆ ಫೈಟಿಂಗ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. Insta ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಅವರು ನಿಜವಾದ ಕುಸ್ತಿಪಟುವಿನಂತೆ ಕಂಡುಬಂದಿದ್ದಾರೆ.
ಬಾಲಿವುಡ್ ಪ್ರವೇಶಿಸುವ ಮೊದಲು, ಪೂನಂ ಧಿಲ್ಲೋನ್ 1977 ರಲ್ಲಿ ಮಿಸ್ ಇಂಡಿಯಾ ಯಂಗ್ ಸ್ಪರ್ಧೆಯ ಪ್ರಶಸ್ತಿಯನ್ನು ಗೆದ್ದರು. ಅವರು ತ್ರಿಶೂಲ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
paloma
ಪೂನಂ ಧಿಲ್ಲೋನ್ 'ನೂರಿ' ಚಿತ್ರದಲ್ಲಿ ಮೊದಲ ಬಾರಿಗೆ ಪ್ರಮುಖ ಪಾತ್ರವನ್ನು ನಿರ್ವಹಿಸಿದರು, ನಂತರ ಅವರು 'ಸೋನಿ ಮಹಿವಾಲ್', ಏಕ್ ಚಾದರ್ ಮೈಲಿ ಸಿ, 'ಸವಾರೆ ವಾಲಿ ಗಾಡಿ' ಮುಂತಾದ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರು.