ಬಾಡಿಗೆ ಕಟ್ಟಲು ಪರದಾಡುತ್ತಿದ್ದ Vijay Devarakonda ಇಂದು ಕೋಟಿಗಟ್ಟಲೆ ಆಸ್ತಿಯ ಮಾಲೀಕ

First Published May 9, 2022, 6:08 PM IST

ದಕ್ಷಿಣ ಭಾರತದ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ (Vijay Devarakonda ) ಅವರಿಗೆ 33 ವರ್ಷಗಳ ಸಂಭ್ರಮ. ಮೇ 9, 1989 ರಂದು ಹೈದರಾಬಾದ್‌ನಲ್ಲಿ ಜನಿಸಿದ ವಿಜಯ್ ತಮ್ಮ 11 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಮನ್ನಣೆ ಸಿಕ್ಕಿದ್ದು ಅರ್ಜುನ್ ರೆಡ್ಡಿ ಚಿತ್ರದಿಂದ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿತ್ತು. ನಂತರ, ಅದೇ ಚಿತ್ರದ ಹಿಂದಿ ರಿಮೇಕ್ ಮಾಡಲಾಯಿತು.ವಿಜಯ್ ಅವರ ವೈಯಕ್ತಿಕ ಜೀವನ ತುಂಬಾ ಆಸಕ್ತಿದಾಯಕವಾಗಿದೆ. ಅವರು ಇಂದು ಕೋಟಿಗಟ್ಟಲೆ ಆಸ್ತಿಯ ಒಡೆಯ. ಆದರೆ ಹಿಂದೊಮ್ಮೆ ಅವರ ಜೀವನದಲ್ಲಿ ಅವರ ಮನೆಯ ಬಾಡಿಗೆ ಕಟ್ಟಲು ಸಹ ಹಣವಿರಲಿಲ್ಲ ವಿಜಯ್ ದೇವರಕೊಂಡ ಅವರ ಜೀವನಕ್ಕೆ ಸಂಬಂಧಿಸಿದ ವಿಷಯಗಳು ಇಲ್ಲಿವೆ.

ನಟ ವಿಜಯ್ ದೇವರಕೊಂಡ ಸೌತ್‌ ಸಿನಿಮಾದ ಹ್ಯಾಂಡ್ಸ್‌ಮ್‌ ಹಂಕ್‌ ಹಾಗೂ ಫ್ಯಾನ್ಸ್‌ನ ಹಾರ್ಟ್‌ಥ್ರೋಬ್‌. ತಮ್ಮ ಲುಕ್‌ ಮತ್ತು ನಟನೆಯಿಂದ  ಸಾಕಷ್ಟು ಪ್ರಸಿದ್ಧರಾಗಿದ್ದಾರೆ ಹಾಗೂ  ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. 

ವಿಜಯ್ ದೇವರಕೊಂಡ ಮುಂದಿನ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ನಟ ತಮ್ಮ ಮುಂಬರುವ ಚಿತ್ರ ಲಿಗರ್‌ ಕಾರಣದಿಂದ  ಸುದ್ದಿಯಲ್ಲಿದ್ದಾರೆ. ಜಗನ್ನಾಥ್ ಪುರಿ ಅವರ ಈ ಚಿತ್ರದಲ್ಲಿ, ಅನನ್ಯಾ ಪಾಂಡೆ ಅವರೊಂದಿಗೆ ವಿಜಯ್ ದೇವರಕೊಂಡ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.

Latest Videos


ವಿಶ್ವ ಪ್ರಸಿದ್ಧ ಬಾಕ್ಸರ್ ಮೈಕ್ ಟೈಸನ್ ವಿಜಯ್ ದೇವರಕೊಂಡ ಅವರ ಲಿಗರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರ ಇದೇ ವರ್ಷ ಬಿಡುಗಡೆಯಾಗಲಿದೆ.

ಇನ್ನೂ ವಿಜಯ್ ದೇವರಕೊಂಡ ಅವರ ಜೀವನಶೈಲಿಯ ಬಗ್ಗೆ ಹೇಳುವುದಾದರೆ ಅವರು ತಮ್ಮ ಆರಂಭಿಕ ಹಂತದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅಷ್ಟೇ ಅಲ್ಲ ಆರ್ಥಿಕ ಸಂಕಷ್ಟವನ್ನೂ ಎದುರಿಸಿದ್ದಾರೆ. ಆದರೆ ಇಂದು ಅವರು ಸುಮಾರು 30 ಕೋಟಿ ಮೌಲ್ಯದ ಆಸ್ತಿಯ ಮಾಲೀಕ.

ವಿಜಯ್ ದೇವರಕೊಂಡ ಅವರ ವಾರ್ಷಿಕ ಆದಾಯ ಸುಮಾರು 6 ಕೋಟಿ ರೂ. ಸಿನಿಮಾದಲ್ಲಿ ಕೆಲಸ ಮಾಡುವುದರ ಜೊತೆಗೆ ಅದರ ಲಾಭದಲ್ಲಿ ಕೂಡ  ಪಾಲು ಹಂಚಿಕೊಳ್ಳುತ್ತಾರೆ. ಚಲನಚಿತ್ರಗಳ ಹೊರತಾಗಿ, ಅವರು ಬ್ರಾಂಡ್ ಎಂಡಾರ್ಸ್‌ಮೆಂಟ್‌ನಿಂದಲೂ ಸಾಕಷ್ಟು ಗಳಿಸುತ್ತಾರೆ. ಇದಕ್ಕಾಗಿ ಭಾರೀ ಶುಲ್ಕವನ್ನೂ ವಿಧಿಸುತ್ತಾರೆ.

ವರದಿಗಳ ಪ್ರಕಾರ ವಿಜಯ್ ದೇವರಕೊಂಡ ಒಂದು ಚಿತ್ರಕ್ಕೆ ಸುಮಾರು 5 ರಿಂದ 7 ಕೋಟಿ ತೆಗೆದುಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಅವರು ಲಿಗರ್ ಚಿತ್ರಕ್ಕಾಗಿ 20 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. 

ಅವರು ಹೈದರಾಬಾದ್ ಜುಬಿಲಿ ಹಿಲ್‌ನಲ್ಲಿ ಸುಮಾರು 15 ಕೋಟಿ ರೂಪಾಯಿ ವೆಚ್ಚದ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ನಟ ಅನೇಕ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಮರ್ಸಿಡಿಸ್ ಬೆಂಜ್, ಆಡಿ, ಮರ್ಸಿಡಿಸ್ ನಂತಹ ಹಲವು ಲಕ್ಷುರಿಯಸ್‌ ಕಾರುಗಳನ್ನು ಹೊಂದಿದ್ದಾರೆ. ಈ ವಾಹನಗಳ ಬೆಲೆಯೂ ಕೋಟಿಯಲ್ಲಿದೆ.

ಅರ್ಜುನ್ ರೆಡ್ಡಿ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು. ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಶಸ್ತಿಯನ್ನು ಹರಾಜು ಹಾಕಿ ಬಂದ ಹಣವನ್ನು ವಿಪತ್ತು ಪರಿಹಾರ ನಿಧಿಗೆ ನೀಡಿದರು.

click me!