Mother's Day 2022 ಅವಳಿ ಮಕ್ಕಳ ಫೋಟೋ ಹಂಚಿಕೊಂಡ Preity Zinta

Published : May 09, 2022, 05:52 PM IST

ಮೇ 8  2022ರ  ಅಂತಾರಾಷ್ಟ್ರೀಯ ತಾಯಂದಿರ ದಿನವನ್ನು (Mother's Day 2022) ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ (Preity Zinta) ತನ್ನ ಅವಳಿ ಮಕ್ಕಳಾದ ಜೈ ಮತ್ತು ಜಿಯಾ ಅವರ ಮೊದಲ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿ ಮಗಳು ಜಿಯಾಳನ್ನು ಮತ್ತು ನಟಿಯ ತಾಯಿ ನೀಲಪ್ರಭಾ ಜಿಂಟಾ ಮಗ ಜೈಯನ್ನು ತನ್ನ ತೋಳುಗಳಲ್ಲಿ ಹಿಡಿದಿರುವುದನ್ನು  ಫೋಟೋದಲ್ಲಿ ಕಾಣಬಹುದು.

PREV
16
Mother's Day 2022 ಅವಳಿ ಮಕ್ಕಳ ಫೋಟೋ ಹಂಚಿಕೊಂಡ Preity Zinta

 ಫೋಟೋದಲ್ಲಿ ಪ್ರೀತಿ ಜಿಂಟಾ ಮತ್ತು ನಟಿಯ ತಾಯಿ ನೀಲಪ್ರಭಾ ನಗುಮುಖದಿಂದ ಪೋಸ್ ನೀಡುತ್ತಿದ್ದು, ಮಕ್ಕಳ ಮುಖ ಕಾಣಿಸುತ್ತಿಲ್ಲ. ಫೋಟೋ ಜೊತೆ ನಟಿ  ಭಾವನಾತ್ಮಕ ಪೋಸ್ಟ್  ಶೇರ್‌ ಮಾಡಿದ್ದಾರೆ. ಫೋಟೋದೊಂದಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. 

26

'ನಾನೇ ತಾಯಿಯಾಗುವವರೆಗೂ, ನನ್ನ ತಾಯಿ ಏಕೆ ನನ್ನನ್ನು ಪದೇ ಪದೇ ಕರೆಯುತ್ತಿದ್ದರು,  ಏಕೆ ನನ್ನ ಬಗ್ಗೆ ತುಂಬಾ  ಚಿಂತಿಸಿದ್ದರು ಮತ್ತು ನಾನು ಎಲ್ಲಿದ್ದೇನೆ ಎಂದು ತಿಳಿದುಕೊಳ್ಳಲು ಬಯಸುತ್ತಿದ್ದರು ಎಂದು ಎಂದು ನನಗೆ ಅರ್ಥವಾಗಿರಲಿಲ್ಲ. ಈಗ ನಾನು ಅದನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದೇನೆ' ಎಂದು ನಟಿ ಎಮೋಷನಲ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ

36

'ನನ್ನ ಮಕ್ಕಳಿಗೆ ಮೊದಲ ಸ್ಥಾನ ನೀಡುವವರೆಗೆ, ನಾನು ತಾಯ್ತನದ ಬಗ್ಗೆ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ. ಇದು ತುಂಬಾ ಸುಂದರವಾಗಿದೆ, ಶಕ್ತಿಯುತವಾಗಿದೆ ಮತ್ತು ಸ್ವಲ್ಪ ಭಯವಾಗುತ್ತದೆ. ನನ್ನ ತಾಯಿಯ ಬಗ್ಗೆ  ನಾನು ಸಂವೇದನಾಶೀಲ ಮತ್ತು ಆಭಾರಿ ಆಗಿರುವುದಕ್ಕಿಂತ ಹೆಚ್ಚು ನನ್ನ ಮಕ್ಕಳು  ನನಗೆ   ಸಂವೇದನಾಶೀಲ ಮತ್ತು ಕೃತಜ್ಞರಾಗಿರಿಲಿ ಎಂದು ನಾನು ಭಾವಿಸುತ್ತೇನೆ' ಎಂದು ಇನ್ನಷ್ಟೂ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

46

'ಅದು ಏನೇ ಇರಲಿ, ನಾನು ನನ್ನ ಮಕ್ಕಳನ್ನು ಹೆಚ್ಚು ಪ್ರೀತಿ ಮಾಡಲು ಮತ್ತು ಕಡಿಮೆ ನೀರಿಕ್ಷೆ ಮಾಡಲು ಕಲಿಯುತ್ತೇನೆ. ನಾನು ಅವರಿಗಾಗಿ ನನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ. ಇದರಿಂದ ಅವರು ಅತ್ಯುತ್ತಮವಾಗಿ ಬೆಳೆಯುತ್ತಾರೆ. ಇವತ್ತು, ನಾಳೆ ಮತ್ತು ಪ್ರತಿದಿನ ಎಲ್ಲಾ ತಾಯಂದಿರಿಗೆ ತಾಯಿಯ ದಿನದ ಶುಭಾಶಯಗಳು' ಎಂದು ಪೋಸ್ಟ್‌ನ ಕೊನೆಯಲ್ಲಿ, ಪ್ರೀತಿ ಜಿಂಟಾ ಬರೆದಿದ್ದಾರೆ.

56

ಪ್ರೀತಿ ಅಮೆರಿಕದ ಹಣಕಾಸು ವಿಶ್ಲೇಷಕ ಜೀನ್ ಗುಡೆನಫ್ ಅವರನ್ನು 2016 ರಲ್ಲಿ ವಿವಾಹವಾದರು. ಸುಮಾರು 5 ವರ್ಷಗಳ ನಂತರ, ನವೆಂಬರ್ 2021 ರಲ್ಲಿ, ಅವರ ಅವಳಿಗಳಾದ ಜೈ ಮತ್ತು ಜಿಯಾ ಬಾಡಿಗೆ ತಾಯ್ತನದ ಮೂಲಕ ಜನಿಸಿದರು. 

66

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ ಪ್ರೀತಿ  ಅವಳಿಗಳಾದ ಜೈ ಮತ್ತು ಜಿಯಾ ಅವರನ್ನು ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಬರೆದಿದ್ದಾರೆ ಮತ್ತು ಈ ಮೂಲಕ ವೈದ್ಯರು, ದಾದಿಯರು ಹಾಗೂ ಬಾಡಿಗೆ ತಾಯಿಗೆ ಧನ್ಯವಾದ ಅರ್ಪಿಸಿದರು.

Read more Photos on
click me!

Recommended Stories