ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ವದಂತಿಗಳ ನಡುವೆ, ಪಾಕಿಸ್ತಾನಿ ಮಫ್ತಿಯೊಬ್ಬರು ಒಂದು ವೇಳೆ ಡಿವೋರ್ಸ್ ಆದರೆ, ಐಶ್ವರ್ಯಾ ಅವರನ್ನು ಮತಾಂತರಿಸಿ ಮದುವೆಯಾಗುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಡಿವೋರ್ಸ್ ಪಡೆಯುತ್ತಿದ್ದಾರೆ ಎಂದು ಕಳೆದ ವರ್ಷ ಸಿಕ್ಕಾಪಟ್ಟೆ ಗಾಳಿಸುದ್ದಿ ಹರಡಿತ್ತು. ಅದಕ್ಕೆ ತಕ್ಕಂತೆ ಅಭಿಷೇಕ್ ಮತ್ತು ಅಮಿತಾಭ್ ಬಚ್ಚನ್ ಕೂಡ ನೇರಾನೇರ ಏನೂ ಹೇಳದೇ ಡಿವೋರ್ಸ್ ಆಗ್ತಿರೋದು ನಿಜ ಎನ್ನುವ ಅರ್ಥದಲ್ಲಿಯೇ ಅಡ್ಡಗೋಡೆ ಮೇಲೆ ದೀಪ ಇಟ್ಟಂಥ ಸ್ಟೇಟ್ಮೆಂಟ್ ಕೊಟ್ಟು ಸದ್ದು ಮಾಡುತ್ತಿದ್ದರು.
26
ಡಿವೋರ್ಸ್ಗೆ ಕಾತರ
ಐಶ್ವರ್ಯ ರೈ ಡಿವೋರ್ಸ್ ಆದರೆ ಮದುವೆಯಾಗಲು ತಾನು ರೆಡಿ ಎಂದು ಅವರ ವಿಚ್ಛೇದನವನ್ನೇ ಕಾಯುತ್ತಿರುವವರಿಗೇನೂ ಕಮ್ಮಿ ಇಲ್ಲ. ಆದರೆ ಇದೀಗ ಪಾಕಿಸ್ತಾನದ ಮಫ್ತಿಯೊಬ್ಬ ಐಶ್ವರ್ಯ ರೈ ಅವರನ್ನು ಮತಾಂತರ ಮಾಡಿ (Aishwaraya Rai conversion) ಅವರನ್ನು ಮದುವೆಯಾಗಲು ರೆಡಿಯಾಗಿದ್ದಾನೆ!
36
ರಾಖಿ ಆಯ್ತು ಈಗ ಐಶ್ವರ್ಯ ರೈ
ಈ ಹಿಂದೆ ರಾಖಿ ಸಾವಂತ್ರನ್ನು ಮದುವೆಯಾಗುವುದಾಗಿ ಇದೇ ಮಫ್ತಿ ಹೇಳಿದ್ದ. ಅದಕ್ಕೆ ತಕ್ಕಂತೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ತಾನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗುವುದಾಗಿ ಸ್ಟೇಟ್ಮೆಂಟ್ ಕೊಟ್ಟಿದ್ದರು. ಇದೀಗ ಐಶ್ವರ್ಯ ರೈ ಮತಾಂತರಕ್ಕೆ ಮುಂದಾಗಿದ್ದಾನೆ ಈ ಮಫ್ತಿ!
ಆತ ಹೇಳಿದ್ದು ಏನೆಂದರೆ, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಸಂಸಾರದಲ್ಲಿ ಸಮಸ್ಯೆಗಳಿವೆ. ಅವರಿಬ್ಬರು ಬೇರೆಯಾಗುತ್ತಿದ್ದಾರೆ ಎಂದು ಕೇಳಿದ್ದೇನೆ. ಅವರು ವಿಚ್ಛೇದನ ನೀಡಿ ಬೇರೆಯಾಗಬಾರದು ಎನ್ನುವುದೇ ನನ್ನ ಆಶಯ. ಒಂದೊಮ್ಮೆ ಅವರು ಡಿವೋರ್ಸ್ ಪಡೆದುಕೊಂಡರೆ, ಐಶ್ವರ್ಯಾ ರೈ ಮುಂದೆ ಮದುವೆ ಪ್ರಸ್ತಾಪ ಇಡುತ್ತೇನೆ. ಮತಾಂತರ ಮಾಡಿ ಮದುವೆಯಾಗುವೆ ಎಂದಿದ್ದಾರೆ.
56
ರಾಖಿ ಆಗಿದ್ದಾಳಲ್ಲ?
ಐಶ್ವರ್ಯ ರೈ ಅವರನ್ನು ಆಯೇಷಾ ರೈ ಮಾಡುವೆ. ಮತಾಂತರದ ಬಳಿಕ ಹೆಸರು ಬದಲಿಗೆ ಮದುವೆಯಾಗುವೆ ಎಂದಿದ್ದಾನೆ! ಅದಕ್ಕೆ ಸಂದರ್ಶಕ ಆತನಿಗೆ ನೀವು ಅನ್ಯ ಧರ್ಮದವರನ್ನು ಮದುವೆಯಾಗುವುದು ಸರಿಯೇ ಎಂದಾಗ ಈ ಮಫ್ತಿ, ರಾಖಿ ಸಾವಂತ್ ಇಸ್ಲಾಂಗೆ ಮತಾಂತರಗೊಂಡು ಫಾತಿಮಾ ಆಗಿದ್ದಾಳಲ್ಲ, ಅದೇ ರೀತಿ, ಐಶ್ವರ್ಯಾ ರೈ ಧರ್ಮ ಬದಲಿಸಿ ಆಯೇಷಾ ಮಾಡುವೆ. ಇದು ನನಗೆ ಖುಷಿ ಕೊಡುತ್ತದೆ ಎಂದಿದ್ದಾನೆ.
66
ಹಿಂದೂಗಳೇ ಎಚ್ಚೆತ್ತುಕೊಳ್ತೀರಾ?
ಆಯೇಷಾ ಮಿರ್ಜಾ ಟಾಕ್ಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ನೆಟ್ಟಿಗರು ಈತನ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಹಿಂದೂ ಧರ್ಮದ ಮಹಿಳೆಯರ ಮೇಲೆ ಕಣ್ಣು ಹಾಕುವುದೇ ಈತನ ಕೆಲಸ, ಮತಾಂತರ ಆಗುವುದೇ ಇಲ್ಲ ಎಂದು ಒಂದಷ್ಟು ನಮ್ಮವರೇ ಭಾಷಣ ಬಿಗಿಯುತ್ತಿರುತ್ತಾರೆ, ಅಂಥವರು ಈತನ ಇಂಥ ನೀಚ ಹೇಳಿಕೆಗಳನ್ನು ಕೇಳಿಸಿಕೊಂಡು ಕಿವುಡಾಗಿದ್ದಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ.