ಹೀರೋಯಿನ್ ಜೊತೆ ರಾಮ್ ಚರಣ್ ಲವ್ ಅಫೇರ್: ಮಗನ ಪ್ರೇಮ ಪ್ರಸಂಗ ಕೇಳಿ ಚಿರಂಜೀವಿ ರಿಯಾಕ್ಷನ್ ಹೀಗಿತ್ತು?
ರಾಮ್ ಚರಣ್ ಒಬ್ಬ ಹೀರೋಯಿನ್ ಜೊತೆ ಲವ್ ಅಫೇರ್ ಇಟ್ಟುಕೊಂಡಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಮನೆಗೆ ಗೊತ್ತಾದಾಗ ಅಪ್ಪ ಅಮ್ಮ ಹೇಗೆ ರಿಯಾಕ್ಟ್ ಆದ್ರು ಅಂತ ಚರಣ್ ಹೇಳಿದ್ದಾರೆ.
ರಾಮ್ ಚರಣ್ ಒಬ್ಬ ಹೀರೋಯಿನ್ ಜೊತೆ ಲವ್ ಅಫೇರ್ ಇಟ್ಟುಕೊಂಡಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಮನೆಗೆ ಗೊತ್ತಾದಾಗ ಅಪ್ಪ ಅಮ್ಮ ಹೇಗೆ ರಿಯಾಕ್ಟ್ ಆದ್ರು ಅಂತ ಚರಣ್ ಹೇಳಿದ್ದಾರೆ.
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಸದ್ಯಕ್ಕೆ ಬುಚ್ಚಿಬಾಬು ನಿರ್ದೇಶನದಲ್ಲಿ ಆರ್ಸಿ 16 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ. ಮಾರ್ಚ್ 27ಕ್ಕೆ ರಾಮ್ ಚರಣ್ ತಮ್ಮ 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಚರಣ್ ಬರ್ತ್ ಡೇ ಆಗಿರೋದ್ರಿಂದ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಗಣ್ಯರಿಂದ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ರಾಮ್ ಚರಣ್ ಕೆರಿಯರ್ ಬಗ್ಗೆ, ಸಿನಿಮಾಗಳ ಬಗ್ಗೆ ಫ್ಯಾನ್ಸ್ ಕುತೂಹಲದಿಂದ ಚರ್ಚೆ ಮಾಡ್ತಿದ್ದಾರೆ.
ಚಿರುತಾದಿಂದ ಎಂಟ್ರಿ: ಸುಮಾರು 17 ವರ್ಷಗಳ ಹಿಂದೆ 2007ರಲ್ಲಿ ರಾಮ್ ಚರಣ್ 'ಚಿರುತಾ' ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟರು. ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬಂದ 'ಚಿರುತಾ' ಸಿನಿಮಾ ಸೂಪರ್ ಹಿಟ್ ಆಯ್ತು. ಚರಣ್ಗೆ ಭರ್ಜರಿ ಎಂಟ್ರಿ ಸಿಕ್ಕಿತು. ಈ ಚಿತ್ರದಲ್ಲಿ ರಾಮ್ ಚರಣ್, ನೇಹಾ ಶರ್ಮಾ ಜೋಡಿಯಾಗಿ ನಟಿಸಿದ್ದಾರೆ. 'ಚಿರುತಾ' ಸಿನಿಮಾ ಶೂಟಿಂಗ್ ಟೈಮ್ನಲ್ಲಿ ಚರಣ್, ನೇಹಾ ಶರ್ಮಾ ಬಗ್ಗೆ ಸಾಕಷ್ಟು ರೂಮರ್ಸ್ ಬಂದವು. ಚರಣ್ ಆ ಟೈಮ್ನಲ್ಲಿ ಮೊದಲ ಬಾರಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಅಂತ ಸುದ್ದಿ ಹಬ್ಬಿತ್ತು.
ಹೀರೋಯಿನ್ ಲವ್ ಆಫೇರ್, ಚಿರಂಜೀವಿ ರಿಯಾಕ್ಷನ್: ನೇಹಾ ಶರ್ಮಾ, ಚರಣ್ ಮಧ್ಯೆ ಪ್ರೀತಿ ಚಿಗುರೊಡೆದಿದೆ, ಇಬ್ಬರೂ ಜೊತೆಯಾಗಿ ಸುತ್ತಾಡುತ್ತಿದ್ದಾರೆ ಅಂತ ಆ ಟೈಮ್ನಲ್ಲಿ ಬಹಳಷ್ಟು ರೂಮರ್ಸ್ ಬಂದವು. ಇಬ್ಬರೂ ಸೇರಿ ಫಾರಿನ್ಗೆ ಹೋಗಿದ್ದಾರೆ ಅಂತಾನೂ ಸುದ್ದಿ ಹಬ್ಬಿತ್ತು. ಈ ರೂಮರ್ಸ್ ಬಗ್ಗೆ ತನಗೂ, ತನ್ನ ಕುಟುಂಬಕ್ಕೂ ಗೊತ್ತಿದೆ ಅಂತ ರಾಮ್ ಚರಣ್ ಒಂದು ಇಂಟರ್ವ್ಯೂನಲ್ಲಿ ಹೇಳಿದ್ದಾರೆ. ನಾನು ಶಾಕ್ ಆದೆ. ನನ್ನಪ್ಪ ಚಿರಂಜೀವಿ ಅವರಿಗೂ ಈ ವಿಷಯ ಗೊತ್ತಾಯ್ತು. ಆ ಟೈಮ್ನಲ್ಲಿ ಅಪ್ಪ ಅಮ್ಮ ನನಗೆ ಒಂದೇ ಒಂದು ಮಾತು ಹೇಳಿದರು. ಇಂಡಸ್ಟ್ರಿಯಲ್ಲಿ ಇದ್ದಾಗ ಇಂಥ ರೂಮರ್ಸ್ ಕಾಮನ್, ತಲೆ ಕೆಡಿಸ್ಕೋಬೇಡ ಅಂತ ಹೇಳಿದರು.
ನಿಜವಾದ ಪ್ರೀತಿ ಯಾವಾಗ ಶುರುವಾಯ್ತು ಅಂದ್ರೆ..: ಅವೆಲ್ಲಾ ಬರೀ ರೂಮರ್ಸ್ ಅಷ್ಟೇ. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಅಂತ ರಾಮ್ ಚರಣ್ ಹೇಳಿದ್ದಾರೆ. ಆದ್ರೆ ನಿಜವಾದ ಪ್ರೀತಿ ಯಾವಾಗ ಶುರುವಾಯ್ತು ಅಂತ ರಾಮ್ ಚರಣ್ ರಿವೀಲ್ ಮಾಡಿದ್ದಾರೆ. ಮದುವೆಗೆ ಮೊದಲು ಏಳು ವರ್ಷದಿಂದ ನನಗೆ ಉಪಾಸನಾ ಪರಿಚಯ ಇದ್ದಾರೆ. ನಾರ್ಮಲ್ ಫ್ರೆಂಡ್ಸ್ ತರಾನೇ ಇಬ್ಬರೂ ಇದ್ದೆವು. ನಮ್ಮಿಬ್ಬರ ಮಧ್ಯೆ ಪ್ರೀತಿ ಬಗ್ಗೆ ಯಾವತ್ತೂ ಯೋಚನೆ ಮಾಡಿರಲಿಲ್ಲ. ಆದ್ರೆ ಮದುವೆಗೆ ಒಂದು ವರ್ಷ ಮೊದಲು ಅವಳ ಮೇಲೆ ಪ್ರೀತಿ ಶುರುವಾಯ್ತು. ಆವಾಗಲೇ ಅವಳಿಗೆ ಪ್ರಪೋಸ್ ಮಾಡಿದೆ. ನಾನು ಪ್ರಪೋಸ್ ಮಾಡಿದ ತಕ್ಷಣ ಉಪಾಸನಾ ಬಹಳ ಖುಷಿಪಟ್ಟಳು. ತಕ್ಷಣ ನನ್ನಪ್ಪನ ಹತ್ರ ಹೇಳಿದೆ. ಆಮೇಲೆ ಅವರ ಕುಟುಂಬದವರ ಜೊತೆ ಮಾತಾಡೋದು, ಸಂಬಂಧ ಕುದುರಿಸೋದು ಚಕಚಕಾ ನಡೆದುಹೋಯ್ತು ಅಂತ ರಾಮ್ ಚರಣ್ ಹೇಳಿದ್ದಾರೆ.
ಉಪಾಸನಾಗೆ ನೀವು ಹೀರೋಯಿನ್ಗಳ ಜೊತೆ ಕ್ಲೋಸ್ ಆಗಿ ಇರ್ತೀರಾ ಅಂತ ಡೌಟ್ ಇಲ್ವಾ ಅಂತ ಕೇಳಿದ್ರೆ.. ಉಪಾಸನಾ ಮದುವೆಗಿಂತ ಮುಂಚೆ ನನ್ನ ಫ್ರೆಂಡ್. ಸಿನಿಮಾ ಇಂಡಸ್ಟ್ರಿಯಲ್ಲಿ ಯಾವ ತರಹದ ರೂಮರ್ಸ್ ಇರುತ್ತೆ ಅಂತ ಉಪಾಸನಾಗೂ ಗೊತ್ತು. ಅದಕ್ಕೆ ರೂಮರ್ಸ್ನ ಉಪಾಸನಾ ತಲೆ ಕೆಡಿಸಿಕೊಳ್ಳಲ್ಲ ಅಂತ ರಾಮ್ ಚರಣ್ ಹೇಳಿದ್ದಾರೆ.