ನೈಸಾ ದೇವಗನ್ ಫೊಟೋ ವೈರಲ್‌; ಅಮ್ಮನಂತೆ ಮಗಳು ಎಂದ ನೆಟ್ಟಿಗರು

Published : Mar 10, 2023, 04:55 PM IST

ಅಜಯ್‌ ದೇವಗನ್‌ ಮತ್ತು ಕಾಜೋಲ್‌ ಮಗಳು ನೈಸಾ ದೇವಗನ್ ಬಾಲಿವುಡ್‌ನ ಫೇಮಸ್‌ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರು. ಸಿನಿಮಾಕ್ಕೆ ಎಂಟ್ರಿ ಕೊಂಡುವ ಮೊದಲೇ ನೈಸಾ ಸಾಕಷ್ಷು ಪ್ಯಾನ್ಸ್‌ ಹೊಂದಿದ್ದಾರೆ. ಇತ್ತೀಚಿನ ಫೋಟೋಶೂಟ್‌ಗಾಗಿ ನೈಸಾ ದೇವಗನ್ ಸುದ್ದಿಯಲ್ಲಿದ್ದಾರೆ. ನೈಸಾ ಫೋಟೋಗಳು ಸಖತ್‌ ಮೆಚ್ಚುಗೆ ಗಳಿಸಿದೆ. 

PREV
18
ನೈಸಾ ದೇವಗನ್ ಫೊಟೋ ವೈರಲ್‌; ಅಮ್ಮನಂತೆ ಮಗಳು ಎಂದ ನೆಟ್ಟಿಗರು

ಬಾಲಿವುಡ್‌ ಸ್ಟಾರ್ ಕಪಲ್‌  ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಪುತ್ರಿ ನೈಸಾ ದೇವಗನ್ ಇತ್ತೀಚೆಗೆ ಫೋಟೋಶೂಟ್‌ಗಾಗಿ ಕೆಂಪು ಲೆಹೆಂಗಾದಲ್ಲಿ ಪೋಸ್ ನೀಡಿದ್ದರು. 

28

ಕೆಂಪು ಬಣ್ಣದ ಅನಿತಾ ಡೋಂಗ್ರೆ ಡಿಸೈನ್‌ ಮಾಡಿದ  ಲೆಹೆಂಗಾ ಧರಿಸಿರುವ ನೈಸಾ ದೇವಗನ್ ಅವರ ಫೋಟೋಗಳನ್ನು ಸೆಲೆಬ್ರಿಟಿ ಸ್ಟೈಲಿಸ್ಟ್ ರಾಧಿಕಾ ಮೆಹ್ರಾ ಹಂಚಿಕೊಂಡಿದ್ದಾರೆ.

38

ತಮ್ಮ ಇನ್‌ಸ್ಟಾಗ್ರಾಮ್ ಶೀರ್ಷಿಕೆಯಲ್ಲಿ 'NYSA' ಎಂದು ಬರೆದು, ಬೆಂಕಿ, ಪಟಾಕಿ, ಅಗ್ನಿಶಾಮಕ ಮತ್ತು ರೆಡ್ ಚಿಲ್ಲಿ ಎಮೋಜಿ ಸೇರಿಸಿದ್ದಾರೆ. ಸ್ಟೈಲಿಸ್ಟ್ ರಾಧಿಕಾ ಮೆಹ್ರಾ  ಅವರು  ಕಾಜೋಲ್‌ ಅವರ ಜೊತೆ ಸಹ ಕೆಲಸ ಮಾಡುತ್ತಾರೆ. 

48
Nysa Devgan

ಕೆಂಪು ತೋಳುಗಳಿಲ್ಲದ ಬ್ಲೌಸ್‌ ಜೊತೆ  ಲೆಹೆಂಗಾ ಮತ್ತು ದುಪಟ್ಟಾ ಮ್ಯಾಚ್‌ ಮಾಡಿಕೊಂಡಿರುವ ನೈಸಾ ತಲೆಯಿಂದ ಪಾದದವರೆಗೆ ಕೆಂಪು ಬಣ್ಣ ಧರಿಸಿದ್ದರು. ಒಂದು ಜೋಡಿ ಕೆಂಪು ಕಿವಿಯೋಲೆಗಳನ್ನು ಧರಿಸಿದ್ದಾರೆ. 

58
Nysa Devgan

'ಅವಳು ಇಲ್ಲಿ ತನ್ನ ತಾಯಿ ಕಾಜೋಲ್‌ನಂತೆ ಕಾಣುತ್ತಿದ್ದಾಳೆ' ಎಂದು ನೈಸಾ ಅವರ ಫೋಟೋಗಳಿಗೆ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಕಾಜೋಲ್ ಅವರಂತೆಯೇ ಬೆರಗುಗೊಳಿಸುವ ಹುಡುಗಿ' ಎಂದು ಮತ್ತೊಬ್ಬರು ಬರೆದಿದ್ದಾರೆ. 

68

 'ನೈಸಾ ದೇವಗನ್, ಆಕೆಯ ತಾಯಿ ಕಾಜೋಲ್‌ನಂತೆ ಸುಂದರಿ' ಎಂದು ಕಾಮೆಂಟ್ ಇನ್ನೊಬ್ಬರು ಮಾಡಿದ್ದಾರೆ. ಇನ್ನು ಕೆಲವರು 'ಸ್ಟನ್ನರ್' ಮತ್ತು 'ಬ್ಯೂಟಿಫುಲ್' ಎಂದು ಕಾಮೆಂಟ್ ಮಾಡಿದ್ದಾರೆ.

78

ಫೆಬ್ರವರಿ 1999 ರಲ್ಲಿ ವಿವಾಹವಾದ ಕಾಜೋಲ್ ಮತ್ತು ಅಜಯ್ ದೇವಗನ್ ಅವರು ಏಪ್ರಿಲ್ 2003 ರಲ್ಲಿ ನೈಸಾ ಮತ್ತು ಸೆಪ್ಟೆಂಬರ್ 2010 ರಲ್ಲಿ ಮಗ ಯುಗ್ ದೇವಗನ್ ಅವರನ್ನು ಸ್ವಾಗತಿಸಿದರು. 

88

ಸಿಂಗಾಪುರ ಮತ್ತು ಯುರೋಪ್‌ನಲ್ಲಿ ಅಧ್ಯಯನ ಮಾಡಿದ ನೈಸಾ, ಆಗಾಗ ಬಾಲಿವುಡ್‌ನ ಇತರ ಸ್ಟಾರ್‌ ಕಿಡ್‌ಸ್ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ

Read more Photos on
click me!

Recommended Stories