ಬಾಲಿವುಡ್‌ ಚೊಚ್ಚಲ ಚಿತ್ರಕ್ಕೆ ಭರ್ತಿ 150 ಕೋಟಿ ರೂ. ಪಡೆದ ನಟ' ಜ್ಯೂ.ಎನ್‌ಟಿಆರ್‌, ವಿಜಯ್‌, ಅಲ್ಲು ಅರ್ಜುನ್ ಅಲ್ಲ!

First Published Oct 22, 2023, 9:31 AM IST

ದಕ್ಷಿಣ ಭಾರತದ ಸಿನಿಮಾಗಳ ಪ್ಯಾನ್ ಇಂಡಿಯಾ ಯಶಸ್ಸಿನ ನಂತರ ಹಿಂದಿ ನಿರ್ದೇಶಕರು, ತಮ್ಮ ಚಲನಚಿತ್ರಗಳಿಗೆ ಸೌತ್‌ ಸೂಪರ್‌ಸ್ಟಾರ್‌ಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ. ಈ ಸೌತ್ ಸೂಪರ್‌ಸ್ಟಾರ್‌ ಬಾಲಿವುಡ್ ಚೊಚ್ಚಲ ಚಿತ್ರಕ್ಕಾಗಿ ಬರೋಬ್ಬರಿ 150 ಕೋಟಿ ರೂ. ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಆ ನಟ ವಿಜಯ್‌, ಜ್ಯೂ.ಎನ್‌ಟಿಆರ್‌, ಅಲ್ಲು ಅರ್ಜುನ್ ಯಾರೂ ಅಲ್ಲ. ಮತ್ಯಾರು?

ಭಾರತೀಯ ಚಿತ್ರರಂಗ ಅಂದ್ರೆ ಬಾಲಿವುಡ್‌ ಅನ್ನೋ ಕಾಲವಿತ್ತು. ಆದ್ರೆ ಈಗ ಸೌತ್‌ ಸಿನಿಮಾಗಳು ಸಹ ಸೂಪರ್‌ ಸಕ್ಸಸ್ ಆಗುತ್ತಿವೆ. ಬಾಕ್ಸಾಫೀಸಿನಲ್ಲಿ ಕೋಟಿ ಕೋಟಿ ಗಳಿಸುತ್ತಿವೆ. ಹಿಂದಿ ಚಿತ್ರರಂಗದ ಹಲವು ನಟ-ನಟಿಯರು ಸೌತ್ ಮೂವಿಯಲ್ಲಿ, ದಕ್ಷಿಣಭಾರತದ ಹಲವು ನಟ-ನಟಿಯರು ಬಾಲಿವುಡ್‌ನಲ್ಲಿ ನಟಿಸುತ್ತಿದ್ದಾರೆ.

ಇತ್ತೀಚಿನ ದಕ್ಷಿಣ ಭಾರತದ ಚಲನಚಿತ್ರಗಳ ಪ್ಯಾನ್-ಇಂಡಿಯಾ ಯಶಸ್ಸಿನ ನಂತರ ಹಿಂದಿ ನಿರ್ದೇಶಕರು, ತಮ್ಮ ಚಲನಚಿತ್ರಗಳಿಗೆ ಮಾಸ್ ರೆಸ್ಪಾನ್ಸ್ ದೊರೆಯಲು ಸೌತ್‌ ಸೂಪರ್‌ಸ್ಟಾರ್‌ಗಳನ್ನು ಸಿನಿಮಾದಲ್ಲಿ ಸೇರಿಸಿಕೊಳ್ಳುತ್ತಾರೆ.

ಆರ್‌ಆರ್‌ಆರ್ ಖ್ಯಾತಿಯ ಜೂನಿಯರ್ ಎನ್‌ಟಿಆರ್ ವಾರ್ 2 ನಲ್ಲಿ ಹೃತಿಕ್ ರೋಷನ್ ಎದುರು ನಟಿಸಲು ಸಹಿ ಹಾಕಿದ್ದಾರೆ. ಹಾಗೆಯೇ ಕೆಜಿಎಫ್ ಖ್ಯಾತಿಯ ಯಶ್. ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಾವಣನಾಗಿ ನಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಕಿಂಗ್ ಸ್ಟಾರ್ ಯಶ್, 'ಕೆಜಿಎಫ್ 2' ಸಿನಿಮಾ ರಿಲೀಸ್​ ಆಗಿ ವರ್ಷಗಳೇ ಕಳೆದ್ರೂ ಮುಂದಿನ ಸಿನಿಮಾ ಯಾವುದು ಎಂದು ಅನೌನ್ಸ್ ಮಾಡಿಲ್ಲ. ಸದ್ಯ ಯಶ್​ 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರ್ತಿದೆ.

ಅಧಿಕೃತವಾಗಿ ಘೋಷಿಸದಿದ್ದರೂ, ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್ ಮತ್ತು ಯಶ್ ಪೌರಾಣಿಕ ರಾಮಾಯಣದಲ್ಲಿ ರಾಮ, ಸೀತೆ, ಹನುಮಾನ್ ಮತ್ತು ರಾವಣನ ಪಾತ್ರವನ್ನು ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ವರದಿಯ ಪ್ರಕಾರ ಕನ್ನಡದ ಸೂಪರ್‌ಸ್ಟಾರ್ ಚಿತ್ರಕ್ಕಾಗಿ 150 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಯಶ್‌, ಚಿತ್ರಕ್ಕಾಗಿ ಕನಿಷ್ಠ 100 ಕೋಟಿ ರೂ.ನಿಂದ 150 ಕೋಟಿಗಳವರೆಗೆ ಶುಲ್ಕ ವಿಧಿಸುತ್ತಿದ್ದಾರೆ. ಕೆಜಿಎಫ್‌ ಲುಕ್‌ಗೆ ಹೋಲಿಸಿದರೆ ರಾಮಾಯಣದಲ್ಲಿ ಡಿಫರೆಂಟ್ ಲುಕ್ ಇರಲಿದೆ. ಇದಕ್ಕಾಗಿ ಯಶ್‌ ವರ್ಕೌಟ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಯಶ್, ಮುಂದಿನ ವರ್ಷ ಕೆಜಿಎಫ್ 3ರ ಚಿತ್ರೀಕರಣವನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದಾರೆ. ಆದ್ದರಿಂದ ನಟನು ರಾಮಾಯಣದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಬಯಸುತ್ತಿರುವುದರಿಂದ ಬಹುನಿರೀಕ್ಷಿತ ಎರಡೂ ಚಿತ್ರಗಳ ನಡುವೆ ತನ್ನ ಸಮಯವನ್ನು ಹೊಂದಿಸಿಕೊಳ್ಳಲು ನೋಡುತ್ತಿದ್ದಾರೆ.

ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾ ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಹಲವು ಸ್ಟಾರ್ ನಟರು ಇದರಲ್ಲಿ ನಟಿಸಲಿದ್ದಾರೆ. ಈ ವರ್ಷ ದೀಪಾವಳಿಯಂದು ಇದರ ಅಧಿಕೃತ ಘೋಷಣೆ ಮಾಡಲಾಗುತ್ತದೆ. ವರ್ಷಾಂತ್ಯ ಅಥವಾ ಫೆಬ್ರವರಿ 2024ರ ವೇಳೆಗೆ ಚಿತ್ರೀಕರಣವನ್ನು ಪ್ರಾರಂಭಿಸಲಾಗುತ್ತದೆ 2025ರ ದಸರಾದಲ್ಲಿ.ಸಿನಿಮಾ ಬಿಡುಗಡೆಗೆ ಪ್ಲಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

click me!