ಸೋದರತ್ತೆಯಾದ ಕಂಗನಾ ರಣಾವತ್: ಅಳಿಯನ ಫೋಟೋ ಹಂಚಿಕೊಂಡ ಬಾಲಿವುಡ್ ಕ್ವೀನ್

Published : Oct 21, 2023, 05:30 PM IST

ಕಂಗನಾ ರಣಾವತ್ (Kangana Ranaut) ಬಾಲಿವುಡ್‌ನ ಬಹುಮುಖ ಪ್ರತಿಭೆಯುಳ್ಳ ನಟಿಯರಲ್ಲಿ ಒಬ್ಬರು. ಹಿಮಾಚಲದ ಸುಂದರಿ ಕಂಗನಾ ತಮ್ಮ ನಟನಾ ಕೌಶಲ್ಯದಿಂದಲೇ  ಲಕ್ಷಾಂತರ ಜನರ ಹೃದಯ ಗೆದ್ದಿದ್ದಾರೆ. ಪ್ರಸ್ತುತ, ನಟಿ ತನ್ನ ಸಹೋದರ ಅಕ್ಷತ್ ರಣಾವತ್‌ ಅವರ ಮಗುವಿನ ಆಗಮನದಿಂದ ತಮ್ಮ ವೈಯಕ್ತಿಕ ಜೀವನದಲ್ಲಿ ಸಂತೋಷಪಡುತ್ತಿದ್ದಾರೆ. ಕಂಗನಾ  ಅವರು 'ಬುವಾ' ಆಗಿರುವ ಖುಷಿಯ ಜೊತೆ , ತನ್ನ ಸೋದರಳಿಯನ ಅರ್ಥಪೂರ್ಣ ಹೆಸರನ್ನು ಸಹ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

PREV
16
 ಸೋದರತ್ತೆಯಾದ ಕಂಗನಾ ರಣಾವತ್: ಅಳಿಯನ  ಫೋಟೋ ಹಂಚಿಕೊಂಡ ಬಾಲಿವುಡ್ ಕ್ವೀನ್

ಅಕ್ಟೋಬರ್ 20, 2023 ರಂದು, ಕಂಗನಾ ರಣಾವತ್‌ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಹ್ಯಾಂಡಲ್‌ನಲ್ಲಿ ಸಂತೋಷದ ಸುದ್ದಿಯನ್ನು ಹಂಚಿ ಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಯ ಫೋಟೋಗಳ ಸರಣಿಯನ್ನು ಶೇರ್ ಮಾಡಿಕೊಂಡಿದ್ದಾರೆ.

26

ಕಂಗನಾ ರಣಾವತ್ ಸಹೋದರ, ಅಕ್ಷತ್ ರಣಾವತ್ ಅವರಿಗೆ ಗಂಡು ಮಗುವಾಗಿದೆ. ಬುವಾ ಕಂಗನಾ ಕೆಲವು ಅಡರೇಬಲ್‌ ಫೋಟೋಗಳನ್ನು ಹಂಚಿಕೊಂಡು, ಅಳಿನ ಮುಖವನ್ನಾ ಫ್ಯಾನ್ಸ್‌ಗೆ ತೋರಿಸಿದ್ದಾರೆ.

36

ತನ್ನ ಸೋದರಳಿಯನನ್ನು  ಮೊದಲ ಬಾರಿಗೆ ಭೇಟಿಯಾದ ಕಂಗನಾ ರಣಾವತ್ ಮಗುವನ್ನು ತೋಳುಗಳಲ್ಲಿ ಎತ್ತಿ ಹಿಡಿದುಕೊಂಡು, ಮುಖದಲ್ಲಿ ಧನ್ಯತಾ ಭಾವವನ್ನು ಎಕ್ಸ್‌ಪ್ರೆಸ್ ಮಾಡಿದ್ದಾರೆ. ಮಗು ಬಿಳಿ ಬಣ್ಣದ ಹತ್ತಿಯ ಹೊದಿಕೆಯಲ್ಲಿ ಸುತ್ತಿ ಶಾಂತಿಯುತವಾಗಿ ನಿದ್ರಿಸುತ್ತಿದೆ. 

46

ಗುಲಾಬಿ ಬಣ್ಣದ ಸೀರೆಯನ್ನು ಮ್ಯಾಚಿಂಗ್ ಬ್ಲೌಸ್‌ನೊಂದಿಗೆ ಜೋಡಿಸಿದ್ದ ಕಂಗನಾ ತನ್ನ ಕೂದಲನ್ನು ಬನ್‌ನಲ್ಲಿ ಕಟ್ಟಿ ಕೊಂಡಿದ್ದರು. ಒಂದು ಜೊತೆ ಮುತ್ತು ಮತ್ತು ವಜ್ರದ ಕಿವಿಯೋಲೆಗಳೊಂದಿಗೆ ತಮ್ಮ ನೋಟವನ್ನು ಪೂರ್ಣಗೊಳಿಸಿದ್ದರು.  

56

ಮನೆಗೆ ಹೊಸ ಅತಿಥಿಯ ಆಗಮನ ಬಾಲಿವುಡ್ ಕುಟುಂಬದಲ್ಲಿ ಖುಷಿ ತಂದಿದೆ. ಫೋಟೋಗಳ ಜೊತೆಗೆ, ಕಂಗನಾ ರಣಾವತ್ ಹಿಂದಿಯಲ್ಲಿ ದೀರ್ಘ ಟಿಪ್ಪಣಿಯನ್ನು ಬರೆದು ತನ್ನ ಸೋದರಳಿಯ ಅರ್ಥಪೂರ್ಣ ಹೆಸರನ್ನೂ ಬಹಿರಂಗಪಡಿಸಿದರು.

66

ಭಾಯ್-ಬಾಬಿ  ಅಕ್ಷತ್ ಮತ್ತು ರಿತು ಮುದ್ದಾದ ಪುಟ್ಟ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಡೀ ರಣಾವತ್‌ ಕುಟುಂಬಕ್ಕಿದು ಅತ್ಯಂತ ಸಂತೋಷದ ವಿಷಯ. ಮಗುವಿಗೆ ಅಶ್ವತ್ಥಾಮ ರಣಾವತ್ ಎಂದು ಹೆಸರಿಟ್ಟಿದ್ದಾರೆ ಮತ್ತು ನವಜಾತ ಶಿಶುವಿನ ಮೇಲೆ ತಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ಧಾರೆಯೆರೆಯುವಂತೆ ತಮ್ಮ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

Read more Photos on
click me!

Recommended Stories