ಬರೋಬ್ಬರಿ 500 ಕೋಟಿ ಗಳಿಕೆಯ ಬ್ಲಾಕ್‌ಬಸ್ಟರ್‌ ಸಿನಿಮಾ 'ಪೊನ್ನಿಯಿನ್ ಸೆಲ್ವನ್‌'ಗೆ ಫಸ್ಟ್ ಚಾಯ್ಸ್ ಐಶ್ವರ್ಯಾ ರೈ ಅಲ್ಲ!

First Published | Nov 26, 2023, 4:59 PM IST

2023ರ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲೊಂದು 'ಪೊನ್ನಿಯಿನ್ ಸೆಲ್ವನ್'. ಹಲವು ದಿಗ್ಗಜ ನಟರನ್ನು ಹೊಂದಿದ್ದ ಹೈ ಬಜೆಟ್‌ ಸಿನಿಮಾ. ಈ ಪಾತ್ರದಲ್ಲಿ ಐಶ್ವರ್ಯಾ ರೈ ಅತ್ಯದ್ಭುತವಾಗಿ ನಟಿಸಿದ್ದಾರೆ. ಆದರೆ, ಚಿತ್ರದಲ್ಲಿ ನಂದಿನಿ ಪಾತ್ರಕ್ಕೆ ನಿರ್ದೇಶಕರ ಮೊದಲ ಆಯ್ಕೆ ಐಶ್ವರ್ಯಾ ರೈ ಆಗಿರ್ಲಿಲ್ಲ ಎಂಬುದು ನಿಮಗೆ ಗೊತ್ತಿದ್ಯಾ?

2023ರ ಬ್ಲಾಕ್‌ಬಸ್ಟರ್‌ ಸಿನಿಮಾಗಳಲ್ಲೊಂದು 'ಪೊನ್ನಿಯಿನ್ ಸೆಲ್ವನ್'. ಹಲವು ದಿಗ್ಗಜ ನಟರನ್ನು ಹೊಂದಿದ್ದ ಹೈ ಬಜೆಟ್‌ ಸಿನಿಮಾವನ್ನು 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಥಿಯೇಟರ್‌ನಲ್ಲಿ ಸೂಪರ್ ಹಿಟ್ ಆದ ಸಿನಿಮಾ 450-500 ಕೋಟಿ ರೂ. ಗಳಿಸಿತ್ತು..

ಮಣಿರತ್ನಂ ನಿರ್ದೇಶನದ ಈ ಹಿಸ್ಟೋರಿಕಲ್ ಸಿನಿಮಾದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ, ತಮಿಳು ನಟ ವಿಕ್ರಮ್‌, ಕಾರ್ತಿ, ತ್ರಿಶಾ, ಜಯಂ ರವಿ, ಶೋಭೀತಾ ಧೂಳಿಪಾಲ ಮೊದಲಾದವರು ನಟಿಸಿದ್ದರು.

Tap to resize

ಅತ್ಯದ್ಭುತ ಕಥೆಯಿಂದಾಗಿ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಯನ್ನೂ ಗಳಿಸಿತು. ಆದರೆ, ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ನಟಿಸಿರುವ ಐಶ್ವರ್ಯಾ ರೈ ಬಚ್ಚನ್ ನಿರ್ದೇಶಕರ ಮೊದಲ ಆಯ್ಕೆಯಾಗಿರಲಿಲ್ಲ ಎಂಬುದು ನಿಮಗೆ ಗೊತ್ತೇ?

ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಎಲ್ಲರ ಮನಸೂರೆಗೊಳ್ಳುವ ಪಾತ್ರ ಅಪ್ರತಿಮ ಸೌಂದರ್ಯವತಿ ನಂದಿನಿಯದು. ಈ ಪಾತ್ರದಲ್ಲಿ ಐಶ್ವರ್ಯಾ ರೈ ಅತ್ಯದ್ಭುತವಾಗಿ ನಟಿಸಿದ್ದಾರೆ. ಆದರೆ ಈ ಪಾತ್ರಕ್ಕಾಗಿ ಐಶ್ವರ್ಯ ರೈ ಮೊದಲ ಆಯ್ಕೆಯಾಗಿರಲಿಲ್ಲ. ನಿರ್ದೇಶಕರು ನಂದಿನಿ ಪಾತ್ರವನ್ನು ರೇಖಾ ಮಾಡಬೇಕೆಂದು ಬಯಸಿದ್ದರು. ಇದಲ್ಲದೆ, ಅವರು ಚಿತ್ರದಲ್ಲಿ ಸೂಪರ್‌ಸ್ಟಾರ್ ಕಮಲ್ ಹಾಸನ್ ಕೂಡ ಇರಬೇಕೆಂದು ಬಯಸಿದ್ದರು.

ಸಂದರ್ಶನದಲ್ಲಿ ಮಣಿರತ್ನಂ ಈ ಕುರಿತು ಮಾತನಾಡುತ್ತಾ, 'ವಿಕ್ರಮ್ ಬರುವ ಮೊದಲು ನಾನು ಕಮಲ್ ಹಾಸನ್ ಅವರೊಂದಿಗೆ ಇದನ್ನು ಮಾಡಲು ಮೊದಲ ಬಾರಿಗೆ ಯೋಚಿಸಿದೆ. ಅವರ ಬ್ಯಾನರ್‌ಗಾಗಿ ನಾನು ಅವರೊಂದಿಗೆ ಈ ಚಿತ್ರವನ್ನು ಮಾಡಲು ಯೋಚಿಸಿದ್ದೆವು. ನಂತರ ಕಾರಣಾಂತರಗಳಿಂದ ಇದು ಸಾಧ್ಯವಾಗಲ್ಲಿಲ್ಲ' ಎಂದಿದ್ದಾರೆ.

'ಚಿತ್ರದ ಬಗ್ಗೆ ಯೋಚಿಸಿದಾಗ ನನ್ನ ಮನಸ್ಸಿನಲ್ಲಿ ಮೂಡಿದೆ ಏಕೈಕ ವ್ಯಕ್ತಿ ಕಮಲ್ ಸರ್ ಮತ್ತು ಬಹುಶಃ ರೇಖಾ. ಆದರೆ ಇದು ಸಾಧ್ಯವಾಗಲ್ಲಿಲ್ಲ. ಐಶ್ವರ್ಯಾ ರೈ ಎಲ್ಲರೂ ಊಹಿಸಿದಕ್ಕಿಂತಲೂ ಅದ್ಭುತವಾಗಿ ನಂದಿನಿ ಪಾತ್ರಕ್ಕೆ ಜೀವ ತುಂಬಿದರು' ಎಂದು ಮಣಿರತ್ನಂ ತಿಳಿಸಿದ್ದಾರೆ

ಮಣಿರತ್ನಂ ಅವರ ನೇತೃತ್ವದಲ್ಲಿ ಪೊನ್ನಿಯಿನ್ ಸೆಲ್ವನ್ ಭಾರತೀಯ ಲೇಖಕ ಕಲ್ಕಿ ಕೃಷ್ಣಮೂರ್ತಿಯವರ ತಮಿಳು ಭಾಷೆಯ ಐತಿಹಾಸಿಕ ಕಾದಂಬರಿ ಆಧಾರಿತವಾಗಿದೆ. ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಸಿದ ಐದನೇ ತಮಿಳು ಚಲನಚಿತ್ರವೆಂದು ಗುರುತಿಸಿಕೊಂಡಿದೆ. ಮಾತ್ರವಲ್ಲ ಸಾರ್ವಕಾಲಿಕ ಹತ್ತೊಂಬತ್ತನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವಾಗಿದೆ.

ಮಣಿರತ್ನಂ ಇತ್ತೀಚೆಗೆ ಕಮಲ್ ಹಾಸನ್ ಅವರೊಂದಿಗೆ 36 ವರ್ಷಗಳ ನಂತರ ಥಗ್ ಲೈಫ್ ಎಂಬ ಮತ್ತೊಂದು ದರೋಡೆಕೋರ ನಾಟಕಕ್ಕಾಗಿ ಮತ್ತೆ ಸೇರಿಕೊಂಡರು. ನಿರ್ಮಾಪಕರು ಇತ್ತೀಚೆಗೆ ಚಿತ್ರದಿಂದ ಕಮಲ್ ಹಾಸನ್ ಅವರ ಉಗ್ರ ನೋಟವನ್ನು ಅನಾವರಣಗೊಳಿಸಿದರು. ಚಿತ್ರದಲ್ಲಿ ದುಲ್ಕರ್ ಸಲ್ಮಾನ್, ತ್ರಿಶಾ ಮತ್ತು ಜಯಂ ರವಿ ಸಹ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಬಹಿರಂಗಪಡಿಸಿದರು.

Latest Videos

click me!