ಬಾಲಿವುಡ್‌ನಲ್ಲಿ ಡ್ಯಾನ್ಸರ್‌ ಆಗಿ ಕೆರಿಯರ್‌ ಆರಂಭಿಸಿದ್ದ ನಟ ಈಗ ಸೂಪರ್‌ಸ್ಟಾರ್‌, ಸಂಭಾವನೆ ಭರ್ತಿ 1000 ಕೋಟಿ ರೂ.!

ಬಾಲಿವುಡ್‌ನಲ್ಲಿ ಗುಂಪಿನಲ್ಲಿ ಡ್ಯಾನ್ಸರ್ ಆಗಿದ್ದ ಈ ವ್ಯಕ್ತಿ ಆರಂಭದ ದಿನಗಳಲ್ಲಿ ಮೊದಲ ಸಂಬಳ ಕೇವಲ 75 ರೂ. ಪಡೆದುಕೊಂಡಿದ್ದರು. ಆದರೆ ಈಗ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ಸ್ಟಾರ್. ಕಾರ್ಯಕ್ರಮದ ನಿರೂಪಣೆಗೆ ಪ್ರತಿ ಸಂಚಿಕೆಗೆ 12 ಕೋಟಿ ರೂ. ಪಡೆಯುವ ಸೂಪರ್‌ಸ್ಟಾರ್‌

ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್‌ ಆಗಿರೋ ಅದೆಷ್ಟೋ ನಟರು ಬೆಳೆದು ಬಂದ ದಾರಿ ಅಷ್ಟು ಸುಲಭದ್ದಾಗಿರಲ್ಲಿಲ್ಲ. ಅದೆಷ್ಟೋ ನಟ-ನಟಿಯರು ಸಣ್ಣಪುಟ್ಟ ಕೆಲಸಗಳನ್ನು ಮಾಡಿ ನಂತರ ಅವಕಾಶಗಳನ್ನು ಗಿಟ್ಟಿಸಿಕೊಂಡು ದೊಡ್ಡ ಸ್ಥಾನಕ್ಕೇರಿದರು. ಬಾಲಿವುಡ್‌ನ ಈ ನಟ ಕೂಡಾ ತಮ್ಮ ಕೆರಿಯರ್‌ನ್ನು ಡ್ಯಾನ್ಸರ್ ಆಗಿ ಆರಂಭಿಸಿದರು. 

ಬಾಲಿವುಡ್‌ನಲ್ಲಿ ಗುಂಪಿನಲ್ಲಿ ಡ್ಯಾನ್ಸರ್ ಆಗಿದ್ದ ಈ ವ್ಯಕ್ತಿ ಆರಂಭದ ದಿನಗಳಲ್ಲಿ ಮೊದಲ ಸಂಬಳ ಕೇವಲ 75 ರೂ. ಪಡೆದುಕೊಂಡಿದ್ದರು. ಆದರೆ ಈಗ 
ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ಸ್ಟಾರ್. ಕಾರ್ಯಕ್ರಮದ ನಿರೂಪಣೆಗೆ ಪ್ರತಿ ಸಂಚಿಕೆಗೆ 12 ಕೋಟಿ ರೂ. ಪಡೆಯುವ ಸೂಪರ್‌ಸ್ಟಾರ್‌. ಆ ನಟ ಮತ್ಯಾರು ಅಲ್ಲ ಸಲ್ಮಾನ್‌ ಖಾನ್‌.


ಸಲ್ಮಾನ್‌ ಖಾನ್‌ ಬಾಲಿವುಡ್‌ನಲ್ಲಿ ಅತ್ಯಂತ ಫೇಮಸ್‌. ತಮ್ಮ ಚಲನಚಿತ್ರಗಳೊಂದಿಗೆ ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅವರು ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್‌ ರಿಯಾಲಿಶಿ ಶೋವನ್ನು 2010ರಿಂದಲೂ ಹೋಸ್ಟ್‌ ಸಹ ಆಗಿದ್ದಾರೆ. 

ಬಿಗ್ ಬಾಸ್ ಸೀಸನ್‌ 16ಕ್ಕಾಗಿ ನಟ 1000 ಕೋಟಿ ರೂ. ಪಡೆದಿದ್ದಾರೆ ಎಂದು ವರದಿಯಾಗಿದೆ. ಹೊಸ ಸೀಸನ್‌ಗಾಗಿ ಅವರು ವಾರಕ್ಕೆ 12 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಈಗ ಸಿನಿಮಾಗಳಿಗಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಿವಿ ಸ್ಟಾರ್ ಆಗಿರುವ ಸಲ್ಮಾನ್ ಖಾನ್ ಅವರು ತಮ್ಮ ಮೊದಲ ಸಂಬಳವಾಗಿ 75 ರೂಗಳನ್ನು ಪಡೆದರು. ಅದು ಕೂಡ ಹಿನ್ನೆಲೆ ನೃತ್ಯಗಾರರಾಗಿದ್ದಕ್ಕಾಗಿ.
 

ಸಂದರ್ಶನವೊಂದರಲ್ಲಿ ಸಲ್ಮಾನ್‌ ಖಾನ್‌, 'ನನ್ನ ಮೊದಲ ಸಂಬಳ ಸುಮಾರು 75 ರೂ. ಆಗಿತ್ತು. ಹಿನ್ನೆಲೆ ಡ್ಯಾನ್ಸರ್‌ ಆಗಿದ್ದಕ್ಕಾಗಿ ನನಗಿದನ್ನು ನೀಡಲಾಗಿತ್ತು. ನಂತರ ತಂಪು ಪಾನೀಯ ಬ್ರಾಂಡ್ ಜಾಹೀರಾತಿನಲ್ಲಿ ನಟಿಸಿದಾಗ 750 ರೂ.ಗೆ ಏರಿತು. ಅದಾಗಿ ತಿಂಗಳುಗಳ ನಂತರ 1,500 ರೂ. ಗಳಿಸಿದೆ.

ನಂತರ 'ಮೈನೆ ಪ್ಯಾರ್ ಕಿಯಾ' ಸಿನಿಮಾಕ್ಕಾಗಿ 31,000 ರೂಪಾಯಿಗಳನ್ನು ಪಡೆದುಕೊಂಡರು. ನಂತರ ಅದನ್ನು 75,000 ರೂಪಾಯಿಗಳಿಗೆ ಹೆಚ್ಚಿಸಲಾಯಿತು.

ಪ್ರಸ್ತುತ ಸಲ್ಮಾನ್‌ ಖಾನ್ ಅಭಿನಯದ 'ಟೈಗರ್ 3' ಬಾಕ್ಸಾಫೀಸ್ ಹಿಟ್ ಆಗಿದೆ. ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಕೂಡ ನಟಿಸಿದ್ದಾರೆ. ಶಾರುಖ್ ಖಾನ್ ಮತ್ತು ಹೃತಿಕ್ ರೋಷನ್ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

Latest Videos

click me!