ಬಾಹುಬಲಿ, ಪಠಾಣ್, ಜವಾನ್, ಪುಷ್ಪ-ದಿ ರೈಸ್, ಆರ್‌ಆರ್‌ಆರ್ ಇಂಥಾ ಕೆಲವು ಸಿನಿಮಾಗಳು. ಇನ್ನು ಮುಂದಿನ ದಿನಗಳಲ್ಲಿ ಸಲಾರ್, ಡುಂಕಿ, ಅನಿಮಲ್, ಪುಷ್ಪಾ 2, ಕಲ್ಕಿ 2898 AD ಮೊದಲಾದ ಸಿನಿಮಾಗಳು ಸೇರಿವೆ. ಆದರೆ ಇವೆಲ್ಲಾ ಅಲ್ಲದೆಯೂ ಈ ಒಂದು ಪ್ಯಾನ್ ಇಂಡಿಯಾ ಸಿನಿಮಾ ಹೆಚ್ಚು ಹೈಪ್ ಕ್ರಿಯೇಟ್ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ದೊಡ್ಡ ಭಾರತೀಯ ಚಲನಚಿತ್ರಗಳು 4-6 ಭಾಷೆಗಳಲ್ಲಿ ಬಿಡುಗಡೆಯಾಗುವುದು ಸಾಮಾನ್ಯವಾಗಿದೆ. ಆದರೆ ಮುಂಬರುವ ಈ ಭಾರತೀಯ ಚಲನಚಿತ್ರವು ಕೇವಲ ಐದಾರು ಭಾಷೆಗಳಲ್ಲಷ್ಟೇ ಅಲ್ಲ ಬರೋಬ್ಬರಿ 38 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅದು ತಮಿಳು ಸ್ಟಾರ್ ಸೂರ್ಯ ಅವರ ಮುಂದಿನ ಚಿತ್ರ ಕಂಗುವ.
ಈ ವರ್ಷದ ಆರಂಭದಲ್ಲಿ ನಟನ ಹುಟ್ಟುಹಬ್ಬದ ಸಂದರ್ಭದಲ್ಲಿ ಕಂಗುವಾ ತಯಾರಕರು ಚಿತ್ರದ ಫಸ್ಟ್ ಲುಕ್‌ನ್ನು ರಿವೀಲ್ ಮಾಡಿದರು. ಅದರ ನಂತರ ಚಿತ್ರದ ಕಥೆಯನ್ನು ಪರಿಚಯಿಸುವ ಪೋಸ್ಟರ್‌ನ್ನು ಬಹಿರಂಗಪಡಿಸಲಾಯಿತು.
ಈಗ, ಚಿತ್ರವು ವಿಶ್ವದಾದ್ಯಂತ 38 ಭಾಷೆಗಳಲ್ಲಿ 3D ಮತ್ತು IMAX ವಿಧದಲ್ಲಿ ಬಿಡುಗಡೆಯಾಗಲಿದ್ದು, ಇತಿಹಾಸವನ್ನು ಸೃಷ್ಟಿಸಲು ಸಜ್ಜಾಗುತ್ತಿದೆ ಎಂದು ತಯಾರಕರು ಘೋಷಿಸಿದ್ದಾರೆ.
ಚಿತ್ರವು 'ಒಂದು ರೀತಿಯ ದೃಶ್ಯ ಆಕ್ಷನ್ ಚಮತ್ಕಾರ' ಎಂದು ತಯಾರಕರು ನಂಬುತ್ತಾರೆ. ಆದ್ದರಿಂದ ಇದು ಭಾರತೀಯ ಮನರಂಜನಾ ಉದ್ಯಮದಲ್ಲಿ ಹೊಸ ಪ್ರಯತ್ನವೆಂದು ಹೇಳಲಾಗ್ತಿದೆ.
ಕಂಗುವ ಚಿತ್ರಕ್ಕೆ ಮಾರುಕಟ್ಟೆ ಮತ್ತು ಬಿಡುಗಡೆಯ ವಿಷಯದಲ್ಲಿ ತಮಿಳು ಚಿತ್ರರಂಗ ಇನ್ನೂ ತಲುಪದ ಪ್ರದೇಶಗಳನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ ಎಂದು ನಿರ್ಮಾಪಕ ಜ್ಞಾನವೇಲರಾಜ ಕೆ ಮಾಹಿತಿ ನೀಡಿದ್ದಾರೆ.
ಚಿತ್ರದ ನಿರ್ಮಾಣ ಸಂಸ್ಥೆಯಾದ ಸ್ಟುಡಿಯೋ ಗ್ರೀನ್, 2024 ರ ಆರಂಭದಲ್ಲಿ ಚಿತ್ರವನ್ನು ಬೃಹತ್ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಪ್ರಪಂಚದಾದ್ಯಂತದ ಉನ್ನತ ವಿತರಣಾ ಸಂಸ್ಥೆಗಳೊಂದಿಗೆ ಸಹಿ ಹಾಕಿದೆ.
ಕಂಗುವ ಚಿತ್ರವನ್ನು ಶಿವ ನಿರ್ದೇಶಿಸಿದ್ದಾರೆ ಮತ್ತು ಸೂರ್ಯ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಫಸ್ಟ್‌ಲುಕ್ ಈಗಾಗ್ಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಈ ಚಿತ್ರಕ್ಕೆ ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣ ಮತ್ತು ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆ ಇದೆ. 2024ರಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಕಂಗುವವನ್ನು ಬಿಡುಗಡೆ ಮಾಡಲು ತಯಾರಕರು ಯೋಜಿಸುತ್ತಿದ್ದಾರೆ.