ಚಂದ್ರಶೇಖರ್ ಸುಲಿಗೆ ಪ್ರಕರಣ: ನೋರಾ ಫತೇಹಿ ವಿಚಾರಣೆ, ಸಂಕಷ್ಟ

Published : Sep 05, 2022, 05:16 PM IST

ಸುಖೇಶ್ ಚಂದ್ರಶೇಖರ್‌ಗೆ  (Sukesh Chandrasekhar) ಸಂಬಂಧಿಸಿದ 200 ಕೋಟಿ ಮನಿ ಲಾಂಡರಿಂಗ್ (Money Laundering) ಪ್ರಕರಣದಲ್ಲಿ ದೆಹಲಿ ಪೊಲೀಸರು ಇತ್ತೀಚೆಗೆ ನಟಿ ನೋರಾ ಫತೇಹಿ (Nora Fatehi) ಅವರನ್ನು ಮೊದಲ ಬಾರಿಗೆ ವಿಚಾರಣೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಈ ವಿಚಾರಣೆಯು ಸುಮಾರು 6 ಗಂಟೆ ಕಾಲ ನಡೆಯಿತು ಮತ್ತು ಇದರಲ್ಲಿ ಪೊಲೀಸರು ನೋರಾಗೆ ಸುಮಾರು 50 ಪ್ರಶ್ನೆಗಳನ್ನು ಕೇಳಿದ್ದಾರೆ. ವಿಚಾರಣೆಯ ಸಮಯದಲ್ಲಿ, ನೋರಾ ಸಂಪೂರ್ಣವಾಗಿ ಸಹಕರಿಸಿದರು. ಈ ವಿಚಾರಣೆಯ ವೇಳೆ ದೆಹಲಿ ಪೊಲೀಸರು ನೋರಾಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಲ್ಲಿ, ನೀವು ಯಾವಾಗ ಸುಕೇಶ್ ಅವರಿಂದ ಉಡುಗೊರೆಗಳನ್ನು ಸ್ವೀಕರಿಸಿದ್ದೀರಿ? ನೀವು ಅವನನ್ನು ಎಲ್ಲಿ ಭೇಟಿಯಾದಿರಿ? ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ನಿಮಗೆ ಏನಾದರೂ ಸಂಪರ್ಕವಿದೆಯೇ? ಇಂತಹ ಪ್ರಶ್ನೆಗಳು ಮುಖ್ಯವಾದವು. 

PREV
19
ಚಂದ್ರಶೇಖರ್ ಸುಲಿಗೆ ಪ್ರಕರಣ: ನೋರಾ ಫತೇಹಿ ವಿಚಾರಣೆ, ಸಂಕಷ್ಟ

ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ನಂತರ ಇದೀಗ ಸಿನಿಮಾ ನಟಿ ನೋರಾ ಫತೇಹಿ ಸಿಕ್ಕಿಬಿದ್ದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಶುಕ್ರವಾರ, ಆರ್ಥಿಕ ಅಪರಾಧಗಳ ವಿಭಾಗ  ನೋರಾ ಫತೇಹಿಯನ್ನು ಸುಮಾರು 6 ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

29

ಇದಲ್ಲದೆ, ದೆಹಲಿ ಪೊಲೀಸ್ ಅಧಿಕಾರಿ ರವೀಂದ್ರ ಯಾದವ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನೋರಾ ಕೆಲವು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದ್ದಾರೆ. ಭವಿಷ್ಯದಲ್ಲಿ ಪ್ರಶ್ನೆ ಮತ್ತು ಉತ್ತರಕ್ಕಾಗಿ ನಾವು ನೋರಾ ಅವರನ್ನು ಕರೆಯಬಹುದು ಎಂದಿದ್ದಾರೆ.

39

ಈ ವಿಚಾರಣೆಯಲ್ಲಿ  'ನಾನು ಸುಕೇಶ್ ಪತ್ನಿಯನ್ನು ನೇಲ್ ಆರ್ಟ್ ಫಂಕ್ಷನ್‌ನಲ್ಲಿ ಭೇಟಿಯಾಗಿದ್ದೆ. ಇಲ್ಲಿಯೇ ಅವರು ನನಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸುಕೇಶ್ ಅಥವಾ ಅವನ ಹೆಂಡತಿಯ ಅಪರಾಧ ಇತಿಹಾಸದ ಬಗ್ಗೆ ನನಗೆ ಏನೂ ತಿಳಿದಿರಲಿಲ್ಲ. ಇದರೊಂದಿಗೆ ಜಾಕ್ವೆಲಿನ್ ಗೂ ನನಗೂ ಯಾವುದೇ ಸಂಬಂಧವಿಲ್ಲ' ಎಂದು ನೋರಾ ಹೇಳಿದ್ದಾರೆ.

49
Image: Varinder Chawla

 ನೋರಾಳ ವಿಚಾರಣೆ ಮುಗಿದ ನಂತರ ಇದೀಗ ದೆಹಲಿ ಪೊಲೀಸರು (Delhi Police) ಜಾಕ್ವೆಲಿನ್ ಅವರನ್ನು ಸೆಪ್ಟೆಂಬರ್ 12 ರಂದು ವಿಚಾರಣೆಗೆ ಕರೆದಿದ್ದಾರೆ. ದೆಹಲಿ ಪೊಲೀಸರು ಮತ್ತು ಇಡಿ ಜಂಟಿಯಾಗಿ ಈ ವಿಷಯವನ್ನು ತನಿಖೆ ನಡೆಸುತ್ತಿದ್ದಾರೆ   ಈ ವೇಳೆ ಎರಡೂ ತಂಡಗಳು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಲಿಂಕ್‌ಗಳನ್ನು ಪತ್ತೆ ಹಚ್ಚಲು ಯತ್ನಿಸುತ್ತಿವೆ. ಇದರೊಂದಿಗೆ ಪ್ರಕರಣದ ಇತರ ಆರೋಪಿಗಳು ಯಾರು ಎಂಬುದನ್ನೂ ತಿಳಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ.


 

59

ಇಡೀ ಪ್ರಕರಣವು  ಸುಖೇಶ್ ಚಂದ್ರಶೇಖರನಿಗೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ ಮೊದಲು ದೆಹಲಿ ಪೊಲೀಸರಲ್ಲಿ ಎಫ್‌ಐಆರ್ ದಾಖಲಾಗಿತ್ತು. ದೆಹಲಿ ಇಒಡಬ್ಲ್ಯು ಆಗಸ್ಟ್‌ನಲ್ಲಿ ತನಿಖೆಯನ್ನು ಪ್ರಾರಂಭಿಸಿತು. ಈ ಪ್ರಕರಣದಲ್ಲಿ ಇಡಿ ಕೂಡ ಅಕ್ರಮ ಹಣ ವರ್ಗಾವಣೆ ತನಿಖೆ ಆರಂಭಿಸಿತ್ತು. 
 

69

ಮಾಜಿ ರಾನ್‌ಬಾಕ್ಸಿ ಪ್ರವರ್ತಕರಾದ ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಪತ್ನಿಯರನ್ನು ಜೈಲಿನಿಂದ ಹೊರತರುವ ನೆಪದಲ್ಲಿ 200 ಕೋಟಿಗೂ ಹೆಚ್ಚು ಹಣವನ್ನು ಸುಕೇಶ್ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಿಹಾರ್ ಜೈಲಿನ ಹಲವು ಅಧಿಕಾರಿಗಳೂ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಇವರೆಲ್ಲರಿಗೂ ಸುಕೇಶ್ ಭಾರೀ ಮೊತ್ತ ನೀಡುತ್ತಿದ್ದ. 

79

ಇಡಿ ವಿಚಾರಣೆ ವೇಳೆ ಆರೋಪಿ ಸುಖೇಶ್ ಚಂದ್ರಶೇಖರ್ ಅವರು ನೋರಾ ಫತೇಹಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಐಷಾರಾಮಿ ಕಾರುಗಳು ಸೇರಿದಂತೆ ಹಲವು ದುಬಾರಿ ಉಡುಗೊರೆಗಳನ್ನು ನೀಡಿರುವ ಬಗ್ಗೆ ಬಹಿರಂಗಪಡಿಸಿದ್ದರು.

89

14 ಅಕ್ಟೋಬರ್ 2021 ರಂದು, ನೋರಾ ಮತ್ತು ಸುಕೇಶ್ ಅವರನ್ನು ಮುಖಾಮುಖಿಯಾಗಿ ಕುಳಿತು ವಿಚಾರಣೆ ಮಾಡಲಾಯಿತು. ಈ ವೇಳೆ ನೋರಾ ಅವರೇ 1 ಕೋಟಿಗೂ ಅಧಿಕ ಮೌಲ್ಯದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ತೆಗೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದರು.

99

ಈ ಸಂಪೂರ್ಣ ಪ್ರಕರಣದಲ್ಲಿ, ಇತರ ಎಲ್ಲ ಆರೋಪಿಗಳಂತೆ ನೋರಾ ಫತೇಹಿ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಮೇಲೆ MCOCA (ಮಹಾರಾಷ್ಟ್ರ ನಿಯಂತ್ರಣದ ಸಂಘಟಿತ ಅಪರಾಧ ಕಾಯ್ದೆ-1999) ಅನ್ನು ವಿಧಿಸಲು EOW ಬಯಸಿತ್ತು, ಆದರೆ ಕಾನೂನು ಇಲಾಖೆಯು ಒಪ್ಪಿಗೆ ನೀಡಲಿಲ್ಲ. ಬಾಲಿವುಡ್ ನಟಿಯರಿಬ್ಬರೂ ಗಿಫ್ಟ್ ತೆಗೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಉಡುಗೊರೆಯನ್ನು ನೀಡಲಾಗುತ್ತಿರುವ ಹಣದ ಬಗ್ಗೆ ವ್ಯಕ್ತಿಗೆ ತಿಳಿದಿರುವುದು ಅನಿವಾರ್ಯವಲ್ಲ. ಹಾಗಾಗಿಯೇ ಆಗ ಸಲ್ಲಿಸಿದ್ದ ಚಾರ್ಜ್ ಶೀಟ್ ನಲ್ಲಿ ಅವರನ್ನು ಆರೋಪಿಯನ್ನಾಗಿ ಮಾಡಿರಲಿಲ್ಲ.

Read more Photos on
click me!

Recommended Stories