ಗೋವಾದಲ್ಲಿ ನೋರಾ ಮಸ್ತಿ: ಮುಂದಿನ ಜೋಡಿ ಇವ್ರೇನಾ ?

Published : Dec 12, 2021, 04:38 PM IST

ಬಾಲಿವುಡ್ ರೋಮ್ಯಾಂಟಿಕ್‌ ವರ್ಷವಾಗಿ ಕಾಣುತ್ತಿದೆ. ಕಳೆದ ತಿಂಗಳು, ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಮತ್ತು ಇತ್ತೀಚೆಗೆ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್  ಡಿಸೆಂಬರ್ 09 ರಂದು ರಾಜಸ್ಥಾನದಲ್ಲಿ ವಿವಾಹವಾದರು. ಈ ಮಧ್ಯೆ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್   ಅವರ ಅಭಿಮಾನಿಗಳು ಮುಂದಿನ ವರ್ಷ ನಡೆಯಲಿರುವ ಅವರ ಮದುವೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಎಲ್ಲದರ ನಡುವೆ,ಬಿ ಟೌನ್‌ನಲ್ಲಿ  ಹೊಸ ಜೋಡಿಯ ಬಗ್ಗೆ ವದಂತಿಗಳಿವೆ. ಅವರು ನಟಿ ನೋರಾ ಫತೇಹಿ (Nora Fatehi) ಮತ್ತು ಪಂಜಾಬಿ ಗಾಯಕ ಗುರು ರಾಂಧವಾ (Guru Randhawa).   

PREV
15
ಗೋವಾದಲ್ಲಿ ನೋರಾ ಮಸ್ತಿ: ಮುಂದಿನ ಜೋಡಿ ಇವ್ರೇನಾ ?

ನಟಿ ನೋರಾ ಫತೇಹಿ ಮತ್ತು ಪಂಜಾಬಿ ಗಾಯಕ ಗುರು ರಾಂಧವಾ ಇಬ್ಬರು  ಗೋವಾದ ಕಡಲತೀರದಲ್ಲಿ ಕಾಣಿಸಿಕೊಂಡರು, ನಂತರ ಅವರ ಅಭಿಮಾನಿಗಳು ಇಬ್ಬರ ನಡುವೆ ಏನಾದರೂ ನೆಡೆಯುತ್ತಿದೆಯಾ ಅಥವಾ ಇಲ್ಲವೇ ಎಂದು ಊಹಿಸಲು ಪ್ರಾರಂಭಿಸಿದ್ದಾರೆ. 

25

ನೋರಾ ಫತೇಹಿ ಮತ್ತು  ಗುರು ರಾಂಧವಾ ಅವರ ಫೋಟೋಗಳು ತಕ್ಷಣವೇ ವೈರಲ್ ಆಗಿರುವುದು ಆಶ್ಚರ್ಯವೇನಿಲ್ಲ. ನೋರಾ ಮತ್ತು ಗುರು ಬೀಚ್‌ ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ಇಬ್ಬರ ಮುಖದಲ್ಲೂ ಖುಷಿ ಎದ್ದು ಕಾಣುತ್ತಿದೆ ಮತ್ತು ಜೊತೆಯಾಗಿ ಇಬ್ಬರೂ ಸಂತೋಷವಾಗಿದ್ದಾರೆ.
 

35

ನೋರಾ ಫತೇಹಿ ಬೂದು ಬಣ್ಣದ ಕ್ಯಾಶುಯಲ್ ಟೀ ಶರ್ಟ್ ಧರಿಸಿ, ಸೊಂಟದ ಮೇಲೆ ಟೈ ಮಾಡಿದ್ದಾರೆ. ಕಪ್ಪು ಶಾರ್ಟ್ಸ್‌ನೊಂದಿಗೆ ತನ್ನ ಲುಕ್‌ ಅನ್ನು ಪೂರ್ಣಗೊಳಿಸಿದ್ದು ಅವರ ಕೂದಲನ್ನು ಕಟ್ಟದೆ ಬಿಟ್ಟಿದ್ದಾರೆ. ಮತ್ತೊಂದೆಡೆ, ಗುರು ರಾಂಧವ ಅವರು ಸಮುದ್ರತೀರದಲ್ಲಿ ಪ್ರಿಟೆಂಡ್‌ ಶರ್ಟ್ ಮತ್ತು ಶಾರ್ಟ್ಸ್ ಧರಿಸಿದ್ದರು.


 

45

ವೈರಲ್‌ ಆಗಿರುವ ನೋರಾ ಫತೇಹಿ ಮತ್ತು ಗುರು ರಾಂಧವ್‌ ಅವರ ಫೋಟೋವೊಂದರಲ್ಲಿ ಇಬ್ಬರು ಬಹಳ ಸಂತೋಷದಿಂದು ಪೋಟೋದಲ್ಲಿ ಇಬ್ಬರೂ ಸಮುದ್ರದ ದಡದ ನೀರಿನಲ್ಲಿ ಜೊತೆಯಾಗಿ ವಾಕ್‌ ಮಾಡುತ್ತಿದ್ದಾರೆ.  

55

ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಬಳಕೆದಾರರು  ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂದು ಊಹಿಸಲು ಪ್ರಾರಂಭಿಸಿದರು. ಆದರೆ, ಇಬ್ಬರು ಜನಪ್ರಿಯ ಸೆಲೆಬ್ರಿಟಿಗಳು ಗೋವಾದ ಕಡಲತೀರದಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Read more Photos on
click me!

Recommended Stories