ಬಹುಭಾಷಾ ನಟಿ ನಿತ್ಯಾ ದಾಸ್(Nitya Das) ಹಾಗೂ ಮಗಳು ನೈನಾರ ಜೋಡಿ ಎಲ್ಲೆಡೆ ವೈರಲ್ (Viral)ಆಗುತ್ತಿದೆ. ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಅಮ್ಮ ಮಗಳು ಸೌಂಡ್ ಮಾಡುತ್ತಿದ್ದಾರೆ.
27
ಮಾಲಿವುಡ್‌ನಲ್ಲಿ(Mollywood) ಮಿಂಚಿದ ನಿತ್ಯಾದಾಸ್ ಮಗಳು ಥೇಟ್ ಅಮ್ಮನ ಪಡಿಯಚ್ಚು. ನೈನಾ ಅಮ್ಮನಂತೆಯೇ ಇದ್ದಾಳೆ. ಅವರ ಬಾಂಡಿಂಗ್ ಕೂಡಾ ಕ್ಯೂಟ್ ಆಗಿದೆ.
37
ಚಂದದ ಡ್ಯಾನ್ಸ್, ಡಯಲಾಗ್ ರೀಲ್ಸ್ ಮಾಡುತ್ತಾ ಇರುವ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಬಹಳಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಿರುತ್ತಾರೆ.
47
ಅಮ್ಮನ ಜೊತೆಗಿರುವ ಸೆಟ್ ಆಫ್ ಫೋಟೋಸ್ ಶೇರ್ ಮಾಡಿದ ನೈನಾ ಈಗ ಟ್ರೋಲ್ ಆಗಿದ್ದಾರೆ. ಅದೂ ತಮ್ಮ ಹಲ್ಲಿನ ಬಣ್ಣದಿಂದಾಗಿ. ಹೌದು. ನೈನಾ ಶೇರ್ ಮಾಡಿರುವ ಫೋಟೋದಲ್ಲಿ ನೈನಾರ ಹಲ್ಲುಗಳನ್ನು ಹಳದಿಬಣ್ಣದಲ್ಲಿ ಕಾಣಬಹುದು. ಇದನ್ನು ನೋಡಿ ಹಳದಿ ಹಲ್ಲು ಎಂದು ಬಹಳಷ್ಟು ಜನರು ಕಮೆಂಟ್ ಮಾಡಿದ್ದಾರೆ.
57
ತಬ್ಬಿಕೊಂಡು ಕುಳಿತರೆ ಸಾಲದು, ಮಗಳನ್ನು ಬ್ರಶ್ ಮಾಡೋಕೆ ಹೇಳಿ ಎಂದು ನಿತ್ಯಾದಾಸ್ ಅವರ ಕಾಲೆಳೆದಿದ್ದಾರೆ ನೆಟ್ಟಿಗರು. ಈ ಮೂಲಕ ಅಮ್ಮ ಮಗಳೂ ಇಬ್ಬರೂ ಟ್ರೋಲ್ ಆಗಿದ್ದಾರೆ.
67
ಫೋಟೋ ನೋಡಿ ಎಲ್ಲರ ಗಮನ ಹೋಗಿದ್ದು ನಿಮ್ಮ ಹಲ್ಲಿಗೆ, ಹಿಮಾಲಯ ಒಳ್ಳೇ ಬ್ರ್ಯಾಂಡ್ ದಿನವೂ ಬ್ರಶ್ ಮಾಡಿ ಹೀಗೆ ಹಲವಾರು ಕಮೆಂಟ್‌ಗಳು ಫೋಟೊಗೆ ಬಂದಿದೆ.
77
ಆದರೆ ನಿತ್ಯಾದಾಸ್ ಮಗಳು ನೈನಾ ಪೋಟೊ ಕ್ಯಾಪ್ಶನ್‌ನಲ್ಲಿಯೇ ಫಿಲ್ಟರ್ ಎಂದು ಬರೆದಿದ್ದಾರೆ. ಬಹುಶಃ ಈ ಹಲ್ಲಿನ ಬಣ್ಣ ಫಿಲ್ಟರ್ ಪ್ರಭಾವವೂ ಆಗಿರಬಹುದು.