ರೇಖಾ ಅವರು ತಮ್ಮ ಕೆರಿಯರ್‌ನ ಉಚ್ಛ ಸ್ಥಿತಿಯಲ್ಲಿ ಇದ್ದಾಗ ಅವರು ಒಂದು ವರ್ಷದಲ್ಲಿ 5 ಚಲನಚಿತ್ರಗಳನ್ನು ಪೂರ್ಣಗೊಳಿಸುತ್ತಿದ್ದರು ಮತ್ತು ಹೆಚ್ಚು ಕಡಿಮೆ ಅಷ್ಟೂ ಸಿನಿಮಾಗಳು ಹಿಟ್ ಸಹ ಆಗಿದ್ದವು.
Rekha
ಕ್ರಮೇಣ ಅವರ ಸಿನಿಮಾಗಳು ಕಡಿಮೆಯಾದರೂ ವರ್ಷಕ್ಕೆ ಒಂದೆರಡು ಸಿನಿಮಾಗಳಿಗೆ ಮೋಸವಿರಲಿಲ್ಲ. ಅವರ ಕೊನೆಯ ದೊಡ್ಡ ಚಿತ್ರ ಅಮಿತಾಭ್ ಬಚ್ಚನ್ ಮತ್ತು ಧನುಷ್ ಅಭಿನಯದ 2015 ರ ಚಿತ್ರ ಶಮಿತಾಭ್.
ಆದರೆ ತೆರೆಯಿಂದ ಹಾಗೂ ಲೈಮ್‌ಲೈಟ್‌ನಿಂದ ರೇಖಾ ದೂರ ಉಳಿದರೂ ಅವರ ಅದ್ಧೂರಿ ಜೀವನಶೈಲಿಗೆ ಕುಂದು ಬರಲಿಲ್ಲ. ಅದೇ ಕಾಂಚೀಪುರಮ್ ಸೀರೆಗಳು, ಜುವೆಲ್ಲರೀಸ್. ಹಾಗಾದರೆ ಅವರ ಹಣ ಎಲ್ಲಿಂದ ಬರುತ್ತದೆ?
ಪತ್ರಿಕಾ ವರದಿಯ ಪ್ರಕಾರ ಆಕೆಯ ಆದಾಯದ ಹೆಚ್ಚಿನ ಭಾಗವು ಮುಂಬೈನ ಅತ್ಯಂತ ದುಬಾರಿ ಪ್ರಮುಖ ಸ್ಥಳಗಳಲ್ಲಿ ಹೊಂದಿರುವ ವಿವಿಧ ಆಸ್ತಿಗಳ ಲೀಸ್‌ನಿಂದ ಪಡೆಯುತ್ತಾರೆ.
ಅಷ್ಟೇ ಅಲ್ಲ, ರಾಜ್ಯಸಭಾ ಸದಸ್ಯರಾಗಿದ್ದ ರೇಖಾ ಅವರಿಗೆ ಸರ್ಕಾರದಿಂದ ಸಹ ಸದಸ್ಯತ್ವದ ಪರಿಹಾರ ಸಿಗುತ್ತದೆ. ಇದು ಅವರ ಆದಾಯದ ಒಂದು ಮೂಲವಾಗಿದೆ.
ನಟನೆ ಹಾಗೂ ಸಿನಿಮಾದಿಂದ ದೂರ ಉಳಿದರೂರೇಖಾ ಅವರ ಫೇಮ್ ಹಾಗೇ ಉಳಿದಿದೆ.ಇಂದಿಗೂ ರೇಖಾ ಅವರು ಹೈ ಪ್ರೊಫೈಲ್ ಈವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಈವೆಂಟ್‌ಗಳಲ್ಲಿ ಭಾಗವಹಿಸುವ ರೇಖಾರ ಪ್ರತಿ ನಿಮಿಷವೂ ಅವರಿಗೆ ದೊಡ್ಡ ಮೊತ್ತದ ಹಣ ತರುತ್ತದೆ ಹಾಗೂ ಈ ರೀತಿಯ ಕಾರ್ಯಕ್ರಮಗಳು ನಟಿಯ ಆದಾಯದ ದೊಡ್ಡ ಮೂಲವಾಗಿದೆ.