ಬಿಕಿನಿ ಧರಿಸಿ ಹೊಸ ವರ್ಷ ಸ್ವಾಗತಿಸಲು ಸಜ್ಜಾದ 'ಕೆಜಿಎಫ್' ನಟಿ; ಮೌನಿ ರಾಯ್ ಫೋಟೋ ಸಖತ್ ವೈರಲ್

First Published | Dec 30, 2022, 4:48 PM IST

ಕೆಜಿಎಫ್ ನಟಿ ಮೌನಿ ರಾಯ್ ಸದ್ಯ ಅಬುಧಾಬಿಯಲ್ಲಿದ್ದಾರೆ. ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಮೌನಿ ರಾಯ್ ಈಗಾಗಲೇ ಸಜ್ಜಾಗಿದ್ದಾರೆ. 

ನಟಿ ಮೌನಿ ರಾಯ್ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಸದಾ ಸುದ್ದಿಯಲ್ಲಿರುತ್ತಾರೆ. ಮೌನಿ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬ್ರಹ್ಮಾಸ್ತ್ರ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಮೌನಿ ರಾಯ್ ಸಿಕ್ಕಾಪಟ್ಟೆ ಸುತ್ತಾಡುತ್ತಿದ್ದಾರೆ. ದೇಶ-ವಿದೇಶ ಸುತ್ತಾಡುತ್ತಿರುವ ಮೌನಿ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. 

ಇದೀಗ ಮೌನಿ ಮತ್ತೆ ಪ್ರವಾಸಕ್ಕೆ ಹೋಗಿದ್ದಾರೆ. ಹೊಸ ವರ್ಷ ಸ್ವಾಗತಿಸಲು ಮೌನಿ ರಾಯ್ ದಂಪತಿ ಅಬುಧಾಬಿಗೆ ಹಾರಿದ್ದಾರೆ. ಈಗಾಗಲೇ ಅಬುಧಾಬಿಗೆ ಸೇರಿರುವ ಮೌನಿ ರಾಯ್ ದಂಪತಿ ಮಸ್ತ್ ಮಜಾ ಮಾಡುತ್ತಿದ್ದಾರೆ. ವಾಟರ್ ಬೇಬಿ ಆಗಿರುವ ಮೌನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Tap to resize

ಬ್ಲ್ಯಾಕ್ ಬಿಕಿನಿ ಧರಿಸಿ ನೀರಿನಲ್ಲಿ ನಿಂತಿರುವ ಮೌನಿ ರಾಯ್ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮೌನಿ ಮತ್ತು ಸೂರಜ್ ದಂಪತಿ ತಮ್ಮ ಸ್ನೇಹಿತರ ಜೊತೆ ಈ ವರ್ಷವನ್ನು ಕಳೆಯುತ್ತಿದ್ದಾರೆ.   

ಇದಕ್ಕೂ ಮೊದಲು ಮೌನಿ ರಾಯ್ ದಂಪತಿ ನುರೈ ದ್ವೀಪಕ್ಕೆ ತೆರಳಿದ್ದರು. ನುರೈ ದ್ವೀಪದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದ್ದೂರಿಯಾಗಿ 2022 ಕಳೆಯತ್ತಿರುವ ಮೌನಿ ರಾಯ್ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. 

ಹೆಚ್ಚಾಗಿ ಮೌನಿ ರಾಯ್ ದಂಪತಿ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ತೆರಳುತ್ತಿರುತ್ತಾರೆ. ಆದರೆ ಈ ಬಾರಿ ಅಬುಧಾಬಿಗೆ ಹಾರಿದ್ದಾರೆ. ಈ ವರ್ಷವನ್ನು ಅಲ್ಲೇ ಕಳೆದು 2023ರನ್ನು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ಪ್ರವಾಸದ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

ಮೌನಿ ರಾಯ್ ತರಹೇವಾರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೆಜಿಎಫ್ ಸುಂದರಿಯ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಪ್ರಿಟಿ, ಬ್ಯೂಟಿ, ಹಾಟ್ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಲೈಕ್ಸ್ ಕೂಡ ಹರಿದುಬಂದಿದೆ. 
 

ಮೌನಿ ನಟಿಸಿದ್ದ ಸಿನಿಮಾಗಳ ಸಂಖ್ಯೆ ಕಡಿಮೆ. ಆದರೂ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದಾರೆ. ಕೆಜಿಎಫ್-1 ಸಿನಿಮಾದ ಗಲಿ ಗಲಿ..ಹಾಡಿಗೆ ರಾಕಿಂಗ್ ಸ್ಟಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಈ ಹಾಡು ಮೌನಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಬಳಿಕ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಬ್ರಹ್ಮಾಸ್ತ್ರ ಸಿನಿಮಾ ಅಭಿಮಾನಿಗಳು ಮುಂದೆ ಬಂದಿದ್ದಾರೆ. 

Latest Videos

click me!