NMACC ಗ್ರ್ಯಾಂಡ್ ಓಪನಿಂಗ್: ಶಾರುಖ್ ಕುಟುಂಬದೊಂದಿಗೆ ಪೋಸ್ ನೀಡಿದ ಸಲ್ಮಾನ್ ಖಾನ್

First Published Apr 1, 2023, 3:18 PM IST

ಶುಕ್ರವಾರ ರಾತ್ರಿ (ಮಾರ್ಚ್ 31) ನಡೆದ NMACC ಲಾಂಚ್ ಸಮಾರಂಭದ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಶಾರುಖ್‌ ಖಾನ್‌ ಅನುಪಸ್ಥಿತಿ ಈ ಇವೆಂಟ್‌ನಲ್ಲಿ ಕಾಣುತ್ತಿತ್ತು. ಇನ್ನೊಂದೆಡೆ ಶಾರುಖ್‌ ಖಾನ್‌ (Shah Rukh Khan) ಫ್ಯಾಮಿಲಿ ಜೊತೆ  ಸಲ್ಮಾನ್‌ ಖಾನ್‌ (Salman Khan)ಪೋಸ್‌ ನೀಡಿರುವ ವಿಡಿಯೋ ಮತ್ತು ಫೋಟೋಗಳು ಸಖತ್‌ ವೈರಲ್‌ ಆಗಿವೆ.
 

ನೀತಾ ಮುಖೇಶ್ ಅಂಬಾನಿ ಕಲ್ಚರ್ ಸೆಂಟರ್‌ನ ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ಮತ್ತು ಹಾಲಿವುಡ್‌ಗೆ ದೊಡ್ಡ ದಿನ. ಹೆಚ್ಚು ಕಡಿಮೆ ಬಾಲಿವುಡ್‌ನ ಎಲ್ಲಾ ತಾರೆಗಳು ಭಾಗವಹಿಸಿದ್ದರು.

ಆದರೆ ಮತ್ತೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುವುದರ ಮೂಲಕ  ಬಾಲಿವುಡ್‌ನ ಕಿಂಗ್‌ ಶಾರುಖ್‌ ಖಾನ್‌ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ.  

Latest Videos


ಆರ್ಯನ್ ಖಾನ್ ಕಪ್ಪು ಪ್ಯಾಂಟ್, ಮೆರೂನ್ ಜಾಕೆಟ್ ಮತ್ತು ಕಪ್ಪು ಶರ್ಟ್‌ನೊಂದಿಗೆ ಎಲ್ಲರ ಗಮನ ಸೆಳೆದರು. ಶೀಘ್ರದಲ್ಲೇ ಬಾಲಿವುಡ್‌ಗೆ ಕಾಲಿಡುತ್ತಿರುವ ಶಾರುಖ್‌ ಮಗಳು ಸುಹಾನಾ ಥೈ ಹೈಯ್‌ ಸ್ಲಿಟ್‌ ಇರುವ ಸ್ಕಾರ್ಲೆಟ್ ಆಫ್ ಶೋಲ್ಡರ್ ಗೌನ್‌ನಲ್ಲಿ ಎದ್ದು ಕಾಣುತ್ತಿದ್ದರು

ಮತ್ತೊಂದೆಡೆ ಗೌರಿ ಖಾನ್ ಅವರು ನ್ಯೂಡ್‌ ಕಲರ್‌ನ ಸೀರೆಯಲ್ಲಿ ಸಖತ್‌ ಸ್ಟನ್ನಿಂಗ್‌ ಲುಕ್‌‌ನಲ್ಲಿ ಕಾಣಿಸಿಕೊಂಡಿದಿದ್ದಾರೆ. ಈ ಮೂವರೂ ಒಟ್ಟಿಗೆ ಸಲ್ಲೂ ಬಾಯ್‌ ಜೊತೆ ಫೋಟೋಗೆ ಪೋಸ್‌ ನೀಡಿದ್ದಾರೆ.

, ಇದಲ್ಲದೆ. ಸಲ್ಮಾನ್ ಖಾನ್ ಶಾರುಖ್ ಅವರ ಮಗ ಆರ್ಯನ್ ಅವರೊಂದಿಗೆ ಮಾಧ್ಯಮಕ್ಕಾಗಿ ಪ್ರತ್ಯೇಕವಾಗಿ ಫೋಟೋಗೆ ಪೋಸ್ ನೀಡಿದ್ದಾರೆ .

ಸಿಲ್ವರ್‌ ಕಲರ್‌ ಸೀರೆ ಧರಿಸಿದ್ದ ಬಾಲಿವುಡ್‌ನ ನ್ಯೂ ಮಮ್ಮಿ ಆಲಿಯಾ ಭಟ್‌ ತಂದೆ ಮಹೇಶ್‌ ಭಟ್‌, ತಾಯಿ ಸೋನಿ ರಜ್ದಾನ್‌ ಮತ್ತು ಸಹೋದರಿ ಶಾಹೀನ್‌ ಭಟ್‌ ಜೊತೆ ಕಾಣಿಸಿಕೊಂಡರು.

ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್‌ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಐಶ್ವರ್ಯಾ ಬ್ಲ್ಯಾಕ್‌ ಮತ್ತು ಸಿಲ್ವರ್‌ ಡ್ರೆಸ್‌ನಲ್ಲಿ ಕಾನಿಸಿಕೊಂಡರೆ ಆರಾಧ್ಯ ಬೇಬಿ ಪಿಂಕ್‌ ಸೆಲ್ವಾರ್‌ ಸೂಟ್‌ನಲ್ಲಿ ಕ್ಯೂಟ್‌ ಆಗಿ ಪೋಸ್‌ ನೀಡಿದ್ದು ಹೀಗೆ.

ಈ ಇವೆಂಟ್‌ನಲ್ಲಿ ಭಾಗವಹಿಸಿದ್ದ ಬಾಲಿವುಡ್‌ನ ಡ್ರೀಮ್‌ ಗರ್ಲ್‌ ಹೇಮಾ ಮಾಲಿನಿ ಅವರು ಸಿಂಪಲ್‌ ಪಿಂಕ್‌ ಪ್ರಿಂಟೆಡ್‌ ಸೀರೆಯಲ್ಲಿ ಗಾರ್ಜಿಯಸ್‌ ಆಗಿ ಕಾಣಿಸಿಕೊಂಡರು 

NMACC ಯ ಅದ್ಧೂರಿ ಉದ್ಘಾಟನೆಯ ಈವೆಂಟ್ ಅನ್ನು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ,  

ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಆಲಿಯಾ ಭಟ್, ವಿದ್ಯಾ ಬಾಲನ್, ರಜನಿಕಾಂತ್, ಏಕ್ತಾ ಕಪೂರ್ ಮತ್ತು ಅಮೀರ್ ಖಾನ್ ಮುಂತಾದ ಸೆಲೆಬ್ರೆಟಿಗಳು ಸಹ  ಭಾಗವಹಿಸಿದ್ದರು.

ಸಂಸ್ಥೆಯು ವಿವಿಧ ಪ್ರಕಟಣೆಗಳ ಪ್ರಕಾರ, 2000 ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಬಹುದಾದ ಬೃಹತ್ ರಂಗಮಂದಿರವಾಗಿದೆ. ಇದು ಅತ್ಯಾಧುನಿಕ 250-ಸೀಟ್ ಸ್ಟುಡಿಯೋ ಥಿಯೇಟರ್ ಮತ್ತು ಡೈನಾಮಿಕ್ 125-ಸೀಟ್ ಕ್ಯೂಬ್ ಅನ್ನು ಸಹ ಹೊಂದಿದೆ. ಮಕ್ಕಳು, ವಿದ್ಯಾರ್ಥಿಗಳು, ಹಿರಿಯರು ಮತ್ತು ವಿಕಲಚೇತನರು ಎಲ್ಲರೂ ಉಚಿತವಾಗಿ ಕೇಂದ್ರವನ್ನು ಬಳಸಿಕೊಳ್ಳಬಹುದು.

click me!