ಇನ್ಮುಂದೆ ಬದಲಾಗ್ತೀನಿ ಎಂದು ಬಹಿರಂಗ ಕ್ಷಮೆ ಕೇಳಿದ ನಟಿ ಉರ್ಫಿ ಜಾವೇದ್

Published : Apr 01, 2023, 02:46 PM ISTUpdated : Apr 01, 2023, 02:47 PM IST

ಇನ್ಮುಂದೆ ಬದಲಾಗ್ತೀನಿ ಎಂದು ನಟಿ ಉರ್ಫಿ ಜಾವೇದ್ ಕ್ಷಮೆ ಕೇಳಿದ್ದಾರೆ. 

PREV
17
ಇನ್ಮುಂದೆ ಬದಲಾಗ್ತೀನಿ ಎಂದು ಬಹಿರಂಗ ಕ್ಷಮೆ ಕೇಳಿದ ನಟಿ ಉರ್ಫಿ ಜಾವೇದ್

ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಉರ್ಫಿ ಜಾವೇದ್ ತಮ್ಮ ಫ್ಯಾಷನ್ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆಕೆಯ ವಿಚಿತ್ರ ಡ್ರೆಸ್‌ನಿಂದ ಅನೇಕ ಬಾರಿ ಟೀಕೆಗೆ ಒಳಗಾಗಿದ್ದು ಇದೆ. ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಾರೆ ಆದರೂ ಯಾವುದಕ್ಕೂ ತಲೆ ಕೆಡೆಸಿಕೊಳ್ಳದ ಉರ್ಫಿ ಪ್ರತಿದಿನ ವಿಚಿತ್ರ ಡ್ರೆಸ್ ಮೂಲಕ ಕ್ಯಾಮರಾ ಮುಂದೆ ಬರ್ತಿದ್ದಾರೆ. 

27

ಅನೇಕರು ಉರ್ಫಿ ವಿರುದ್ಧ ಕಿಡಿ ಕಾರುತ್ತಾರೆ. ಆದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಉರ್ಫಿ ಬಗ್ಗೆ ಬಾಲಿವುಡ್‌ನ ಸ್ಟಾರ್ ಕಲಾವಿದರು ಸಹ ಮಾತನಾಡಿದ್ದಾರೆ. ಕರೀನಾ ಕಪೂರ್, ರಣಬೀರ್ ಸೇರಿದಂತೆ ಅನೇಕರು ಉರ್ಫಿ ವಿಚಿತ್ರ ಸ್ಟೈಲ್ ಬಗ್ಗೆ ಮಾತನಾಡಿದ್ದಾರೆ. ಕರೀನಾ ಕಪೂರ್, ಉರ್ಫಿಯ ಸ್ಟೈಲ್ ಮೆಚ್ಚಿಕೊಂಡಿದ್ದರು. 

37

ಉರ್ಫಿ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿತ್ತು. ಅಶ್ಲೀಲತೆ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯೆಯೊಬ್ಬರು ಉರ್ಫಿ ವಿರುದ್ಧ ದೂರು ದಾಖಲಿಸಿದ್ದರು. ಉರ್ಫಿ ಕೂಡ ಖಡಕ್ ಪ್ರತಿಕ್ರಿಯೆ ನೀಡಿದ್ದರು. ಆದರೀಗ ಉರ್ಫಿ ಬದಲಾಗುವುದಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. 

47

'ನಾನು ಧರಿಸುವ ಬಟ್ಟೆಯಿಂದ ಪ್ರತಿಯೊಬ್ಬರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಇನ್ನು ಮುಂದೆ ನೀವು ಬದಲಾದ ಉರ್ಫಿಯನ್ನು ನೋಡುತ್ತೀರಿ. ಬದಲಾದ ಬಟ್ಟೆ. ಮಾಫಿ' ಎಂದು ಹೇಳಿದ್ದಾರೆ. 

57

ಉರ್ಫಿ ಟ್ವೀಟ್ ಅಚ್ಚರಿ ಮೂಡಿಸಿದೆ. ಉರ್ಫಿ ನಿಜಕ್ಕೂ ಗಂಭೀರವಾಗಿ ಹೇಳಿದ್ರಾ ಅಥವಾ ಏಪ್ರಿಲ್ ಫೂಲ್ ಮಾಡಿದ್ರಾ ಎನ್ನುವುದು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ. ನೆಟ್ಟಿಗರು ಸಹ ಇದು ಫೂಲ್ ಹಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

67

ಉರ್ಫಿ ಬಟ್ಟೆ ಹಾಕಿದ್ರೆ ಅಲರ್ಜಿ ಎಂದು ಹೇಳಿದ್ದರು. ಮೈ ತುಂಬಾ ಬಟ್ಟೆ ಹಾಕುವುದರಿಂದ ತನಗೆ ಅಲರ್ಜಿಯಾಗುತ್ತೆ ಹಾಗಾಗಿ ಅರೆಬರೆ ಬಟ್ಟೆ ಹಾಕುವುದು ಎಂದು ಹೇಳಿದ್ದರು. ಇದೀಗ ಬದಲಾದ ಉರ್ಫಿ ಹೇಗಿರ್ತಾರೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.  

77

ಅನೇಕರು ಕಾಮೆಂಟ್ ಮಾಡಿ ಇವಾಗ ಹೇಗ್ ಇದ್ದೀರೋ ಹಾಗೆ ಇರಿ ಸುಂದರವಾಗಿ ಇದ್ದೀರಿ ಎಂದು ಹೇಳುತ್ತಿದ್ದಾರೆ. ಉರ್ಫಿ ದಿನ ಯಾವ ರೀತಿ ಬಟ್ಟೆ ಧರಿಸುತ್ತಾರೆ, ಉರ್ಫಿ ಫ್ಯಾಷನ್ ಹೇಗಿರಲಿದೆ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೀಗ ಬದಲಾಗುತ್ತೀನಿ ಎಂದ ಹೇಳಿದ್ದು ಅಚ್ಚರಿ ಮೂಡಿಸಿದೆ. ನಿಜಕ್ಕೂ ಬದಲಾಗುತ್ತಾರಾ ಕಾದುನೋಡಬೇಕಿದೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories