ಓವರ್ ಡಯಟ್‌ನಿಂದ ಅಜ್ಜಿ ರೀತಿ ಕಾಣಿಸುತ್ತಿರುವ ಐಶ್ವರ್ಯ ರೈ; ಮತ್ತೆ ಟ್ರೋಲ್?

Published : May 20, 2022, 11:38 AM IST

ಕೇನ್ಸ್‌ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡ ಐಶ್ವರ್ಯ ರೈ ತ್ವಚೆಯ ಕ್ಲೋಸಪ್‌ ನೋಡಿ ನೆಟ್ಟಿಗರು ಶಾಕ್. ಅಜ್ಜಿ ಎಂದು ಕಾಲೆಳೆಯುತ್ತಿರುವುದು ಯಾಕೆ?

PREV
18
ಓವರ್ ಡಯಟ್‌ನಿಂದ ಅಜ್ಜಿ ರೀತಿ ಕಾಣಿಸುತ್ತಿರುವ ಐಶ್ವರ್ಯ ರೈ; ಮತ್ತೆ ಟ್ರೋಲ್?

1994 ಮಿಸ್ ವರ್ಲ್ಡ್‌ (Miss World), ಬಾಲಿವುಡ್‌ ಬ್ಯೂಟಿ ಐಶ್ವರ್ಯ ರೈ (Aishwarya Rai) ತಪ್ಪದೆ ಕೇನ್ಸ್‌ ಚಲನಚಿತ್ರೋತ್ಸವದಲ್ಲಿ ಭಾಗಿಯಾಗುತ್ತಾರೆ. ವಿಭಿನ್ನ ಡಿಸೈನರ್‌ ವೇರ್‌ಗಳನ್ನು ಆಯ್ಕೆ ಮಾಡಿಕೊಂಡು ರೆಡ್‌ ಕಾರ್ಪೆಟ್‌ ಮೇಲೆ ಮಿಂಚುತ್ತಾರೆ.

28

ಕೆಲವು ದಿನಗಳ ಹಿಂದೆ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಆರಾಧ್ಯ ಪ್ರೈವೇಟ್ ಜೆಟ್‌ನಲ್ಲಿ ಕೇನ್ಸ್ ಕಾರ್ಯಕ್ರಮಕ್ಕೆ ಹೊರಟರು. ಏರ್‌ಪೋರ್ಟ್‌ ಲುಕ್‌ಗೆ ಐಶ್ವರ್ಯ ಮಾಡಿಕೊಂಡಿದ್ದ ಮೇಕಪ್‌ ಲುಕ್ ನೆಟ್ಟಿಗರಿಗೆ ಇಷ್ಟವಾಗಿರಲಿಲ್ಲ.

38

ಕೇನ್ಸ್‌ ರೆಡ್‌ ಕಾರ್ಪೆಟ್‌ಗೆ ಐಶ್ವರ್ಯ  D&G ಅವರ ಬ್ಲ್ಯಾಕ್ ಗೌನ್ ಧರಿಸಿದ್ದರು. ಗೌನ್‌ನ ಒಂದೊಂದು ಕಾರ್ನರ್‌ಗಳಿಗೆ ಹೂಗಳಿಂದ ಡಿಸೈನ್ ಮಾಡಲಾಗಿತ್ತು. ಕಣ್ಣಿಗೆ ಮಾತ್ರ ಹೆಚ್ಚಿನ ಮೇಕಪ್ ಮಾಡಲಾಗಿತ್ತು.

48

ಸ್ಟ್ರೇಟ್ ಹೇರ್‌ ಆಂಡ್ ಸಿಂಪಲ್ ಲುಕ್‌ನಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಅಲ್ಲದೆ ಪ್ರತಿಷ್ಠಿತ ಫೋಟೋಗ್ರಾಫರ್‌ಗಳು ತುಂಬಾನೇ ಕ್ಲೋಸಪ್‌ನಲ್ಲಿ ಫೋಟೋ ಕ್ಲಿಕ್ ಮಾಡಿದ್ದಾರೆ.

58

ವೈರಲ್ ಅಗುತ್ತಿರುವ ಫೋಟೋಗಳಲ್ಲಿ ಐಶ್ವರ್ಯ ಮುಖ ಸ್ಪಷ್ಟವಾಗಿ ಕಾಣಿಸುತ್ತಿದೆ. ಆಂಟಿ ರೀತಿ ಕಾಣಿಸುತ್ತಿದ್ದೀರಾ, ಸ್ಕಿನ್‌ ರಿಂಕಲ್ ಎದ್ದು ಕಾಣಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

68

ಗರ್ಭಿಣಿಯಾದ ಬಳಿಕ ಐಶ್ವರ್ಯ ತೂಕ ಹೆಚ್ಚಾಗಿತ್ತು. ವೇಟ್ ಲಾಸ್‌ ಡಯಟ್ ಮಾಡಿ ಸಣ್ಣಗಾಗಿ ಮೂರ್ನಾಲ್ಕು ಸಿನಿಮಾಗಳ ಕೂಡ ಮಾಡಿದ್ದರು. ಆದರೆ ಐಶು ಮತ್ತೆ ಶೇಪ್ ಕಳೆದುಕೊಂಡಿದ್ದಾರೆ.

78

ಕೇನ್ಸ್‌ ಈವೆಂಟ್‌ವೊಂದರಲ್ಲಿ ಐಶ್ವರ್ಯ ಪಿಂಕ್ ಬಣ್ಣದ ಸೂಟ್ ಧರಿಸಿದ್ದಾರೆ. ಇದೇನು ಮತ್ತೆ ದಪ್ಪ ಆಗಿದ್ದಾರಾ ಅಥವಾ ವಯಸ್ಸಾಗಿದ್ಯಾ? ನೋಡಲು ಕೆಟ್ಟದಾಗಿದೆ' ಎಂದು ಕಾಮೆಂಟ್ ಬಂದಿದೆ.

88

ಐಶ್ವರ್ಯ ಆಹಾರ ವಿಚಾರದಲ್ಲಿ ತುಂಬಾ ಕೇರ್‌ಫುಲ್‌ ಎಂಬುದು ಎಲ್ಲರಿಗೂ ಗೊತ್ತಿದೆ ಹೀಗಾಗಿ ಅತಿಯಾಗಿ ಡಯಟ್ ಮಾಡಿ ಅಜ್ಜಿ ರೀತಿ ಆಗಿದ್ದೀರಾ ಎಂದು ಕಾಲೆಳೆದಿದ್ದಾರೆ.

Read more Photos on
click me!

Recommended Stories