ಕಿರುತೆರೆಯಿಂದ ಬಾಲಿವುಡ್‌ಗೆ ಪಯಣ ಬೆಳೆಸಿರುವ ಮೌನಿ ರಾಯ್ (Mouni Roy) ಅವರ ಸ್ಟೈಲ್‌ಗೆ ಲಕ್ಷಾಂತರ ಜನರು ಫಿದಾ ಆಗಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಪ್ರತಿದಿನ ತಮ್ಮ ಮಾದಕ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಹಾಗೂ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.ಇತ್ತೀಚೆಗೆ ನಟಿ ಮೆಟಾಲಿಕ್ ಫ್ಯೂಷನ್ ಸೀರೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವಳ ಗ್ಲಾಮ್ ತುಂಬಿದ ದೇಸಿ ಲುಕ್‌ನ ಪೋಟೋಗಳು ಇಲ್ಲಿವೆ.
ನಾಗಿನ್ ಖ್ಯಾತಿಯ ಮೌನಿ ರಾಯ್ ಈ ದಿನಗಳಲ್ಲಿ ಸೀಸನ್ 5 ಶೋ 'ಡಿಐಡಿ ಲಿ'ಲ್ ಮಾಸ್ಟರ್ಸ್'ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಅವಳು ವಿಭಿನ್ನ ರೀತಿಯಲ್ಲಿ ಪ್ರದರ್ಶನಕ್ಕೆ ಬರುತ್ತಾರೆ. ಆಕೆಯ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.
27
ಇತ್ತೀಚೆಗೆ ಅವರು ತಮ್ಮ ಗ್ಲಾಮರ್ ಸ್ಟೈಲ್‌ನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮೌನಿ ರಾಯ್ ಅವರು ಕಾಪರ್ ಕಲರ್ ಮೆಟಾಲಿಕ್ ಫ್ಯೂಷನ್ ಸೀರೆಯಲ್ಲಿ ಪೋಸ್ ನೀಡಿದ್ದಾರೆ.
37
ಮೌನಿ ತಮ್ಮ ಔಟ್‌ಫಿಟ್ ಜೊತೆ ಮೆಸ್ಸಿ ಹೇರ್, ಲೈಟ್ ಮೇಕಪ್ ಮತ್ತು ನ್ಯೂಡ್ ಕಾಪರ್ ಲಿಪ್‌ಸ್ಟಿಕ್ ಅನ್ನು ಮ್ಯಾಚ್ ಮಾಡಿದ್ದಾರೆ. ಇದರೊಂದಿಗೆ, ಅವರು ಗೋಲ್ಡನ್ ಏರ್ರಿಂಗ್ ಧರಿಸಿ ತಮ್ಮ ಲುಕ್ ಅನ್ನು ಪೂರ್ಣಗೊಳಿಸಿದ್ದಾರೆ.
47
ಈ ಫೋಟೋಗಳ ಶೀರ್ಷಿಕೆಯಲ್ಲಿ ಮೌನಿ ತ್ರಿಶೂಲ್ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಇವರ ಸ್ಟೈಲ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಕೆಲವರು ಆಕೆಯನ್ನು ಸೌಂದರ್ಯದ ಮೂರ್ತಿ ಎಂದು ಕರೆಯುತ್ತಿದ್ದರೆ ಇನ್ನು ಕೆಲವರು ಆಕೆಗೆ ಗ್ಲಾಮರಸ್ ಎಂಬ ಬಿರುದು ನೀಡುತ್ತಿದ್ದಾರೆ.
57
ಮೌನಿ ರಾಯ್ ಅವರ ಫೋಟೋಗೆ ಹೃದಯ ಮತ್ತು ಬೆಂಕಿಯ ಎಮೋಜಿಯ ಸಾಲುಸಾಲಾಗಿ ಹರಿದು ಬಂದಿದೆ ಹಾಗೂ ನಟಿಯ ಪೋಸ್ಟ್ ಲಕ್ಷಾಂತರ ಲೈಕ್‌ಗಳನ್ನೂ ಗಳಿಸಿವೆ. ಜನರು ಅವರುನ್ನು ಚಿನ್ನದ ಹುಡುಗಿ ಎಂದು ಕರೆಯುತ್ತಿದ್ದಾರೆ.
67
Image: Mouni Roy/Instagram
ನಟಿ Instagram ನಲ್ಲಿ 23 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಬ್ರಹ್ಮಾಸ್ತ್ರ ಚಿತ್ರದಲ್ಲಿ ಮೌನಿ ರಾಯ್ ಆಲಿಯಾ ಭಟ್-ರಣಬೀರ್ ಕಪೂರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ನಾಗಾರ್ಜುನ ಕೂಡ ಕಾಣಿಸಿಕೊಳ್ಳಲಿದ್ದಾರೆ.
77
ಬಹಳ ದಿನಗಳ ಡೇಟಿಂಗ್ ನಂತರ, ಈ ವರ್ಷ ಫೆಬ್ರವರಿ 27 ರಂದು ಮೌನಿ ರಾಯ್ ದುಬೈನಲ್ಲಿ ಬ್ಯಾಂಕರ್ ಆಗಿರುವ ತನ್ನ ಬಾಯ್‌ಫ್ರೆಂಡ್ ಸೂರಜ್ ನಂಬಿಯಾರ್ ಅವರನ್ನು ವಿವಾಹವಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.