ವಾಸ್ತವವಾಗಿ ಪ್ರಚಾರದ ಸಂದರ್ಶನದಲ್ಲಿ, ಆಲಿಯಾ ಭಟ್ ಬಗ್ಗೆ ಅವರನ್ನು ಪ್ರಶ್ನಿಸಲಾಯಿತು. ನೀತು ಕಪೂರ್ ತಮ್ಮ ಸೊಸೆ ಆಲಿಯಾ ಭಟ್ ಅವರನ್ನು ಹೊಗಳಿದ್ದಾರೆ. ಅವರ ಪ್ರಕಾರ, ಆಲಿಯಾದಿಂದಾಗಿ ರಣಬೀರ್‌ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದಿದ್ದಾರೆ.
'ನನಗೆ ತುಂಬಾ ಸಂತೋಷವಾಗಿದೆ ಏಕೆಂದರೆ ಆಲಿಯಾ ರಣಬೀರ್ ಜೀವನದಲ್ಲಿ ಸಾಕಷ್ಟು ಪ್ರೀತಿ ತಂದಿದ್ದಾಳೆ. ನಾನು ರಣಬೀರ್‌ನಲ್ಲಿಯೂ ಬದಲಾವಣೆಯನ್ನು ಅನುಭವಿಸುತ್ತೇನೆ. ಅವರು ಒಬ್ಬರಿಗೊಬ್ಬರು ತುಂಬಾ ಚೆನ್ನಾಗಿದ್ದಾರೆ ಮತ್ತು ಅದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ'ಎಂದು ನೀತು ಹೇಳಿದ್ದಾರೆ.
ಈ ಸಂಭಾಷಣೆಯಲ್ಲಿ ನೀತು ಕೂಡ ಆಲಿಯಾಳನ್ನು ತನ್ನ ಕುಟುಂಬದ ಭಾಗವಾಗಿ ಹೊಂದಲು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಎಂದು ಹೇಳಿದರು. ನಿಜವಾಗಲೂ ಲೈಫ್ ಬದಲಾಗಿದೆ ಅಂತ ತುಂಬಾ ಸಂತೃಪ್ತಿಯಾಗ್ತಿದೆ, ಮೊನ್ನೆ ಮದುವೆ ಅಂತ ಟೆನ್ಷನ್ ಇತ್ತು ಈಗ ಆಯ್ತು ಹೀಗಾಗಿ ತುಂಬಾ ಖುಷಿ, ಸಂತೃಪ್ತಿ ಇದೆ ಅಂದರು.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸುಮಾರು 4 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ 14 ಏಪ್ರಿಲ್ 2022 ರಂದು ವಿವಾಹವಾದರು, ಇದು ಕುಟುಂಬ ಸದಸ್ಯರು ಮತ್ತು ಆಯ್ದ ಸ್ನೇಹಿತರ ಸಮ್ಮುಖದಲ್ಲಿ ನಡೆಯಿತು. ಅಂದಿನಿಂದ ನೀತು ಅನೇಕ ಸಂದರ್ಭಗಳಲ್ಲಿ ಆಲಿಯಾಳನ್ನು ಹೊಗಳಿದ್ದಾರೆ.
ಕೆಲವು ಸಮಯದ ಹಿಂದೆ ಅವರು ರಿಯಾಲಿಟಿ ಶೋ 'ಡ್ಯಾನ್ಸ್ ದೀವಾನೆ ಜೂನಿಯರ್ಸ್' ಸೆಟ್‌ಗಳಲ್ಲಿ, ಮನೆಯಲ್ಲಿ ಆಲಿಯಾ ಇರುವಿಕೆಯ ಬಗ್ಗೆ ಅವರು ಸಂತೋಷವನ್ನು ವ್ಯಕ್ತಪಡಿಸಿದರು.
ಸುಮಾರು 9 ವರ್ಷಗಳ ನಂತರ ರಾಜ್ ಮೆಹ್ತಾ ನಿರ್ದೇಶನದ 'ಜಗ್ ಜಗ್ ಜಿಯೋ' ಚಿತ್ರದ ಮೂಲಕ ನೀತು ಕಪೂರ್ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಅವರು ಮೊದಲು 2013 ರಲ್ಲಿ ಬಿಡುಗಡೆಯಾದ 'ಬೇಷರಂ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಅವರ ಪತಿ ರಿಷಿ ಕಪೂರ್ ಮತ್ತು ಮಗ ರಣಬೀರ್ ಕಪೂರ್ ಕೂಡ ನಟಿಸಿದ್ದಾರೆ.
ಜೂನ್ 24 ರಂದು ಬಿಡುಗಡೆಯಾಗಲಿರುವ 'ಜಗ್ ಜಗ್ ಜಿಯೋ' ಚಿತ್ರದಲ್ಲಿ ಅನಿಲ್ ಕಪೂರ್, ವರುಣ್ ಧವನ್, ಕಿಯಾರಾ ಅಡ್ವಾಣಿ, ಮನೀಶ್ ಪಾಲ್ ಮತ್ತು ಪ್ರಜಕ್ತಾ ಕೋಲಿ ಸಹ ಪ್ರಮುಖ ಪಾತ್ರಗಳನ್ನು ಹೊಂದಿದ್ದಾರೆ.