ಟಾಯ್ಲೆಟ್ ಕ್ಲೀನ್ ಮಾಡಲು ರೆಡಿ ಎಂದ ಖ್ಯಾತ ನಟಿ ಲಕ್ಷೀ ಪುತ್ರಿಯ ಫೋಟೋಗಳು

First Published | Jun 18, 2022, 4:59 PM IST

ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಅನೇಕ ಕಲಾವಿದರು ಬೇರೆ ಉದ್ಯೋಗ ಮಾಡಿ ಜೀವನ ನಡೆಸುತ್ತಿರುವ ಉದಾಹರಣೆ ಸಾಕಷ್ಟಿದೆ. ಈಗ ಇದಕ್ಕೆ ಹೊಸ ಸೇರ್ಪಡೆ ಹಿರಿಯ ನಟಿ ಲಕ್ಷ್ಮೀ ಅವರ ಮಗಳು ಐಶ್ವರ್ಯಾ ಭಾಸ್ಕರ್. ಸಿನಿಮಾರಂಗದಲ್ಲಿ ಅವಕಾಶಗಳಿಲ್ಲದೆ ಜೀವನ ನಡೆಸುವುದು ಸಹ ತುಂಬಾ ಕಷ್ಟವಾಗಿದೆಯಂತೆ. ಈ ಬಗ್ಗೆ ಐಶ್ವರ್ಯಾ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಅನೇಕ ಕಲಾವಿದರು ಬೇರೆ ಉದ್ಯೋಗ ಮಾಡಿ ಜೀವನ ನಡೆಸುತ್ತಿರುವ ಉದಾಹರಣೆ ಸಾಕಷ್ಟಿದೆ. ಈಗ ಇದಕ್ಕೆ ಹೊಸ ಸೇರ್ಪಡೆ ಹಿರಿಯ ನಟಿ ಲಕ್ಷ್ಮೀ ಅವರ ಮಗಳು ಐಶ್ವರ್ಯಾ ಭಾಸ್ಕರ್. ಸಿನಿಮಾರಂಗದಲ್ಲಿ ಅವಕಾಶಗಳಿಲ್ಲದೆ ಜೀವನ ನಡೆಸುವುದು ಸಹ ತುಂಬಾ ಕಷ್ಟವಾಗಿದೆಯಂತೆ. ಈ ಬಗ್ಗೆ ಐಶ್ವರ್ಯಾ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

‘ಗಲಾಟ ತಮಿಳ್​’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಐಶ್ವರ್ಯಾ, ‘ನಮ್ಮ ಮನೆಗೆ ಬಂದರೆ ಫರ್ನಿಚರ್ ಕಾಣಲ್ಲ, ಟಿವಿ ಕಾಣಲ್ಲ. ನಾನು ಒಂದೇ ಹೊತ್ತು ಊಟ ಮಾಡುತ್ತಿದ್ದೇನೆ. ನನ್ನ ಲೈಫ್ ಬದಲಾಗಬೇಕು ಎಂದರೆ ಒಂದೊ ದೊಡ್ಡ ಸೀರಿಯಲ್ ಆಫರ್ ಸಿಗಬೇಕು. ನಾನು ಎಲ್ಲರ ಎದುರು ನಗುತ್ತಿರುತ್ತೇನೆ. ಮನೆಗೆ ಹೋಗಿ ಅಳುತ್ತೇನೆ’ ಎಂದಿದ್ದಾರೆ.

Tap to resize

ಬಹುಭಾಷ ನಟಿ ಲಕ್ಷ್ಮೀ ಅವರ ಮಗಳು ಐಶ್ವರ್ಯಾ. ಲಕ್ಷ್ಮೀ ಅವರು 1969ರಲ್ಲಿ ಭಾಸ್ಕರ್ ಅವರನ್ನು ಮದುವೆ ಆದರು. ಇವರ ಮಗಳೇ ಐಶ್ವರ್ಯಾ. ಭಾಸ್ಕರ್ ಹಾಗೂ ಲಕ್ಷ್ಮೀ ಇಬ್ಬರೂ 1974ರಲ್ಲಿ ಬೇರೆ ಆದರು.

ಐಶ್ವರ್ಯಾ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಈಗ ಅವರಿಗೆ ಅವಕಾಶಗಳು ಸಿಗದೆ ಜೀವನ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಕನ್ನಡದಲ್ಲಿ 'ಹೊಸ ಕಾವ್ಯ', 'ಪಾಂಡವರು' ಅನ್ನುವ ಸಿನಿಮಾ, ಪ್ರಕಾಶ್‌ ರಾಜ್ ಜೊತೆಗೆ 'ಒಗ್ಗರಣೆ' ಚಿತ್ರದಲ್ಲಿ ಕಾಣಿಸಿಕೊಂಡರು.

ಐಶ್ವರ್ಯಾ, ತನ್ವೀರ್ ಅಹಮ್ಮದ್ ಅನ್ನುವವರ ಜೊತೆಗೆ ಮದುವೆಯಾಗಿದ್ದರು. ಈ ದಾಂಪತ್ಯದಲ್ಲಿ ಇವರಿಗೊಬ್ಬ ಮಗಳೂ ಹುಟ್ಟಿದಳು. ಆದರೆ ವೈಮನಸ್ಸು ಬಂದು ಮದುವೆಯಾದ ಮೂರೇ ವರ್ಷಗಳಲ್ಲಿ ಈ ದಂಪತಿ ಬೇರ್ಪಟ್ಟರು. ಆಗ ಮಗುವಿಗೆ ಒಂದೂವರೆ ವರ್ಷ.

ಸಂದರ್ಶನದಲ್ಲಿ ಈ ಬಗ್ಗೆ ಹೇಳಿರುವ ಐಶ್ವರ್ಯಾ, 'ಈಗ ನನ್ನ ಮಾಜಿ ಪತಿ ಹಾಗೂ ಅವರ ಪತ್ನಿ ಜೊತೆಗೆ ಒಳ್ಳೆಯ ಸಂಬಂಧ ಇದೆ. ಆದರೆ ಆತನ ಜೊತೆಗಿನ ನನ್ನ ಸಂಬಂಧ ಮದುವೆಯಾದ ಆರು ತಿಂಗಳಲ್ಲೇ ಹಳಸಿತ್ತು. ಒಂದೂವರೆ ವರ್ಷದ ಮಗಳ ಜೊತೆಗೆ ನಾನು ಆತನಿಂದ ಬೇರ್ಪಟ್ಟೆ' ಅಂದಿದ್ದಾರೆ.
 

ಅಮ್ಮನಂಥಾ ರೂಪ, ನಟನೆ ಇಲ್ಲದ ಕಾರಣಕ್ಕೋ ಏನೋ ಅಮ್ಮ ಜೂಲಿ ಲಕ್ಷ್ಮಿ ಲೆವೆಲ್‌ನ ಪ್ರಸಿದ್ಧಿ ಈಕೆಗೆ ಬರಲಿಲ್ಲ. ಆದರೆ ಒಂದು ಮಟ್ಟಿನ ಜನಪ್ರಿಯತೆಯಂತೂ ಬಂದೇ ಬಂತು. ಮೋಹನ್ ಲಾಲ್ ಅವರ ಜೊತೆಗೆ ನಾಯಕಿಯಾಗಿ ನರಸಿಂಹಂ, ಬಟರ್‌ಫ್ಲೈಸ್‌, ಪ್ರಜಾ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಂಡಾಗ ಈಕೆಯೂ ಅಮ್ಮನಂತೇ ಯಶಸ್ವಿಯಾಗುತ್ತಾರೆ ಅಂತಲೇ ಹಲವರು ಲೆಕ್ಕಾಚಾರ ಹಾಕಿದರು. ಸತ್ಯಮೇವ ಜಯತೇ, ಶಾರ್ಜಾದಂಥಾ ಸಿನಿಮಾಗಳು ಇವರಿಗೆ ಪಾಪ್ಯುಲಾರಿಟಿಯನ್ನೂ ತಂದುಕೊಟ್ಟವು.

ಸದ್ಯಕ್ಕೆ ಐಶ್ವರ್ಯಾ ಮಗಳಿಗೆ ಮದುವೆಯಾಗಿ ಆಕೆ ಗಂಡನ ಜೊತೆಗೆ ವಾಸಿಸುತ್ತಿದ್ದಾಳೆ. ಈಕೆ ಒಂಟಿಯಾಗಿದ್ದಾರೆ. ಸದ್ಯಕ್ಕೆ ಕಿರುತೆರೆಯಲ್ಲಾಗಲೀ, ಸಿನಿಮಾದಲ್ಲಾಗಲಿ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಹಣವೂ ಇಲ್ಲ. ಸೋಪು ಮಾರಿ ಬಂದ ಹಣದಲ್ಲಿ ತಾನು ಜೀವನ ಸಾಗಿಸುತ್ತಿದ್ದೇನೆ ಅಂತ ಅವರು ಹೇಳಿದ್ದಾರೆ. 

Latest Videos

click me!