ಶಾರುಖ್ ಮನೆ ಪಕ್ಕದಲ್ಲೇ ನವಾಜುದ್ದೀನ್ ಸಿದ್ದಿಕಿ ಬಂಗಲೆ; ತಂದೆಯ ಹೆಸರಿಟ್ಟ ನಟ!

First Published | Jan 28, 2022, 9:10 PM IST

ನಟ ನವಾಜುದ್ದೀನ್ ಸಿದ್ದಿಕಿ  (Nawazuddin Siddiqui) ಭಾರತೀಯ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳಲ್ಲಿ ಒಬ್ಬರು. ಕಳೆದ ಕೆಲವು ವರ್ಷಗಳಿಂದ, ಅವರು ತಮ್ಮ ಪ್ರತಿಭೆ ಮತ್ತು  ಅದ್ಭುತ ಅಭಿನಯದಿಂದ ಸಾಕಷ್ಟು ಫ್ಯಾನ್‌ ಫಾಲೋವರ್ಸ್‌ ಗಳಿಸಿದ್ದಾರೆ.ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಪದವೀಧರಾದ  ನವಾಜುದ್ದೀನ್ ಸಿದ್ದಿಕಿ ಅನೇಕ ಪ್ರಶಸ್ತಿಗಳನ್ನು ಮತ್ತು ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ ರಾಗ್ಸ್ ಟು ರಿಚಸ್ ಕಥೆಯ ನಿಜವಾದ ಉದಾಹರಣೆ.  ಮುಂಬೈನಲ್ಲಿ ನಟ ತನ್ನ ಬಂಗಲೆಯನ್ನು ನಿರ್ಮಿಸಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಹೊರತುಪಡಿಸಿ ದುಬಾರಿ ಮನೆ ಹೊಂದಿರುವ ಏಕೈಕ ನಟ ಇವರು.

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಮುಂಬೈನಲ್ಲಿ ಹೊಸ ಮನೆಯನ್ನು ಖರೀದಿಸಿದ್ದಾರೆ. ನವಾಜ್ ಅವರ ಮನೆಯ ಫೋಟೋಗಳು Instagram ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ನವಾಜುದ್ದೀನ್ ಅವರ ಈ ಹೊಸ ಬಂಗಲೆಯನ್ನು ದುರಸ್ತಿ ಮಾಡಲು ಸುಮಾರು 3 ವರ್ಷಗಳನ್ನು ತೆಗೆದುಕೊಂಡಿದೆ. ಎಲ್ಲಾ ಕಡೆಯಿಂದ ಬಿಳಿ ಬಣ್ಣದಿಂದ ಮಾಡಲ್ಪಟ್ಟ ಈ ಐಷಾರಾಮಿ ಬಂಗಲೆಯು ದೊಡ್ಡ ವರಾಂಡಾ, ಭವ್ಯವಾದ ಟೆರೇಸ್ ಮತ್ತು ತೆರೆದ ಪ್ರದೇಶವನ್ನು ಹೊಂದಿದೆ. 

Latest Videos


ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಬುಧಾನ ಗ್ರಾಮದ ನಿವಾಸಿ ನವಾಜುದ್ದೀನ್ ಅವರ ಈ ಐಷಾರಾಮಿ ಮನೆ ಅವರ ಹಳ್ಳಿಯ ಮನೆಯಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗುತ್ತಿದೆ. ನವಾಜುದ್ದೀನ್ ಈ ಭವ್ಯವಾದ ಮನೆಗೆ ತನ್ನ ತಂದೆಯ ನೆನಪಿಗಾಗಿ  'ನವಾಬ್' ಎಂದು ಹೆಸರಿಸಿದ್ದಾರೆ. ಅವರ ತಂದೆಯ ಹೆಸರು ನವಾಬುದ್ದೀನ್ ಸಿದ್ದಿಕಿ. 

 ನವಾಜುದ್ದೀನ್ ಸಿದ್ದಿಕಿ ಅವರು ಮುಂಬೈನಲ್ಲಿ ಕಿಂಗ್ ಖಾನ್ ಅವರ ಮನೆ ಮನ್ನತ್ ಪಕ್ಕದಲ್ಲಿ ತಮ್ಮ ಕನಸಿನ ಮನೆಯನ್ನು ಅಂತಿಮವಾಗಿ ನಿರ್ಮಿಸಿದ್ದಾರೆ. ಇವರು ಸ್ವತಃ ಬಂಗಲೆಯನ್ನು ಮರುರೂಪಿಸಿದ್ದಾರೆ ಮತ್ತು ತನಗೆ ಬೇಕಾದಂತೆ ಮನೆಯ   ನೋಟವನ್ನು ಪಡೆಯಲು ತನ್ನನ್ನು ತಾನು ಒಳಾಂಗಣ ವಿನ್ಯಾಸಕನಾಗಿ ಪರಿವರ್ತಿಸಿಕೊಂಡಿದ್ದಾರೆ.
 

ನವಾಜುದ್ದೀನ್ ಸಿದ್ದಿಕಿ ಅವರ ವೃತ್ತಿಜೀವನವು 1999 ರಲ್ಲಿ 'ಸರ್ಫರೋಶ್' ಚಿತ್ರದ ಮೂಲಕ ಪ್ರಾರಂಭವಾಯಿತು. 2012 ರ ವರೆಗೆ ನವಾಜುದ್ದೀನ್ ಅವರು ಅನೇಕ ಸಣ್ಣ ಮತ್ತು ದೊಡ್ಡ ಚಿತ್ರಗಳಲ್ಲಿ ನಟಿಸಿದರು.

ಇದರ ನಂತರ ಅನುರಾಗ್ ಕಶ್ಯಪ್  ನಟನಿಗೆ ಗ್ಯಾಂಗ್ಸ್ ಆಫ್ ವಾಸೇಪುರ್ ಚಿತ್ರದಲ್ಲಿ ಫೈಜಲ್ ಪಾತ್ರವನ್ನು ನೀಡಿದರು ಮತ್ತು ಇದು ಅವರನ್ನು ಸಾಕಷ್ಟು ಜನಪ್ರಿಯಗೊಳಿಸಿತು. ಅಂದಹಾಗೆ, ನವಾಜ್ ಈ ಹಿಂದೆ ಅನುರಾಗ್ ಕಶ್ಯಪ್ ಅವರ 'ಬ್ಲ್ಯಾಕ್ ಫ್ರೈಡೇ' ಚಿತ್ರದಲ್ಲಿ ಅಸ್ಗರ್ ಮುಕದಂ ಪಾತ್ರವನ್ನು ನಿರ್ವಹಿಸಿದ್ದರು.

ಪ್ರಸ್ತುತ ನವಾಜುದ್ದೀನ್ ಸಿದ್ದಿಕಿ ಕಂಗನಾ ರನೌತ್ ಅವರ 'ಟಿಕು ವೆಡ್ಸ್ ಶೇರು' ಚಿತ್ರದಲ್ಲಿ ನಿರತರಾಗಿದ್ದಾರೆ. ಸಾಯಿ ಕಬೀರ್ ನಿರ್ದೇಶನದ ಈ ಸಿನಿಮಾದಲ್ಲಿ ಅವನೀತ್ ಕೌರ್ ಅವರ ಎದುರು ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ 'ಹೀರೋಪಂತಿ 2' ಚಿತ್ರದಲ್ಲಿಯೂ ನವಾಜ್ ಕಾಣಿಸಿಕೊಳ್ಳಲಿದ್ದಾರೆ. ಟೈಗರ್ ಶ್ರಾಫ್ ಅವರ ಈ ಚಿತ್ರದಲ್ಲಿ ನವಾಜ್ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ನವಾಜುದ್ದೀನ್ ಅವರ ಕೆಲವು ಸ್ಮರಣೀಯ ಸಿನಿಮಾಗಳೆಂದರೆ 'ಗ್ಯಾಂಗ್ಸ್ ಆಫ್ ವಾಸೇಪುರ್' (2014), 'ದಿ ಲಂಚ್‌ಬಾಕ್ಸ್' (2013), ಬದ್ಲಾಪುರ್ (2014), 'ಬಜರಂಗಿ ಭಾಯಿಜಾನ್' (2015), ಫ್ರೀಕಿ ಅಲಿ (2016), ಮಾಮ್ (2017), ಮಂಟೋ (2018) ಮತ್ತು ಮೋತಿಚೂರ್-ಚಕ್ನಾಚೂರ್ (2019).
 

click me!