ಮುಂಬೈ(ಜ. 27) ಪುಷ್ಪ ಯಶಸ್ಸಿನಲ್ಲಿರುವ ರಶ್ಮಿಕಾ ಮಂದಣ್ಣ (Rashmika Mandanna) ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ(Social Media) ದೊಡ್ಡ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದ್ದಾರೆ. ಟ್ರೋಲ್ ಗೆ (Troll) ತುತ್ತಾಗುವುದು ನಟಿಗೆ ಹೊಸದೇನೂ ಅಲ್ಲ.. ಆದರೆ ಹತ್ತಿರ ಬಂದ ಮಕ್ಕಳನ್ನು(Children) ದೂರ ತಳ್ಳಿದ್ದಾರೆ ಎನ್ನುವ ಕಾರಣಕ್ಕೆ ಕಮೆಂಟ್ ದಾಳಿಗೆ ಗುರಿಯಾಗಿದ್ದಾರೆ.
ಪುಷ್ಪ (Pushpa) ನಿಮಾದ ಯಶಸ್ಸಿನಲ್ಲಿರುವ ನಟಿ ಬಾಲಿವುಡ್ ನಲ್ಲಿಯೂ ಬ್ಯೂಸಿ ಆಗಿದ್ದಾರೆ. ದಕ್ಷಿಣ ಭಾರತದಲ್ಲಿ ಖ್ಯಾತಿ ಗಳಿಸಿಕೊಂಡ ನಂತರ ಹಿಂದಿ ಚಿತ್ರರಂಗಕ್ಕೆ ರಶ್ಮಿಕಾ ಹಾರಿದ್ದಾರೆ.
ಹೀರುವಾಗ ರಶ್ಮಿಕಾ ಕಾಣಲು ಬಂದ ಮಕ್ಕಳ ಜೊತೆ ಅವರು ತೋರಿರುವ ವರ್ತನೆ ತೀವ್ರ ಟೀಕಗೆ ಗುರಿಯಾಗಿದೆ. ನಿಮ್ಮ ಜಾಗದಲ್ಲಿ ಸುಶಾಂತ್ ಸಿಂಗ್ ರಜಪೂತ್ ಇದ್ದರೆ ಹೀಗೆ ಮಾಡುತ್ತಿರಲಿಲ್ಲ ಎಂದು ಉತ್ತರಿಸಿದ್ದವರಿದ್ದಾರೆ. ರಜಪೂತ್ ಮಕ್ಕಳೊಂದಿಗೆ ಸೌಹಾರ್ದಯುತವಾಗಿ ನಡೆದುಕೊಂಡ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
36
ಸಾಮಿ ಸಾಮಿ ಹಾಡಿನಿಂದ ಖ್ಯಾತಿ ಪಡೆದುಕೊಂಡ ರಶ್ಮಿಕಾ ಇತ್ತಿಚೇಗೆ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ರೀತಿಯಿಂದಲೂ ಟ್ರೋಲ್ ಗೆ ಗುರಿಯಾಗಿದ್ದರು. ತುಂಡುಡುಗೆ ತೊಟ್ಟು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಕ್ಕೆ ಕಮೆಂಟ್ ಗಳ ಸುರಿಮಳೆ ಆಗಿತ್ತು.
46
ಮುಂಬೈನಲ್ಲಿ (Mumbai) ಳಿಯುತ್ತಿದ್ದ ಹಾಗೆ ರಶ್ಮಿಕಾಗೆ 'ನಿನ್ನ ಪ್ಯಾಂಟ್ ಎಲ್ಲಿ ಎಂದು ಕೆಲವರು ಕಾಲೆಳೆದಿದ್ದರು. ಈಗ ಮತ್ತೊಮ್ಮೆ ಮಕ್ಕಳೊಂದಿಗೆ ನಡೆದುಕೊಂಡ ರೀತಿಗೆ ಟ್ರೋಲ್ ಆಗಿದ್ದಾರೆ.
56
ಮುಂಬೈ ನಲ್ಲಿ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರನ್ನು ಭೇಟಿ ಮಾಡಿದ ರಶ್ಮಿಕಾ ಹೊರಗೆ ಬಂದಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣ ನೋಡಲು ಮಕ್ಕಳು ಕಾದುನಿಂತಿದ್ದರು. ಆದರೆ ರಶ್ಮಿಕಾ ಅವರನ್ನು ತಳ್ಳಿ ಮುಂದಕ್ಕೆ ಹೋಗಿ ಕಾರು ಏರಿದ್ದಾರೆ.
66
ಕೆಲವರು ರಶ್ಮಿಕಾಗೆ ಅಭಿಮಾನಿಗಳೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಪಾಠ ಹೇಳಿದ್ದಾರೆ. ನೀವು ದೊಡ್ಡ ನಟಿಯೇ ಇರಬಹುದು ಆದರೆ ಎಲ್ಲಿಂದ ನೀವು ನಿಮ್ಮ ಆರಂಭ ಶುರು ಮಾಡಿದ್ರಿ ಎನ್ನುವುದನ್ನು ನೆನಪು ಮಾಡಿಕೊಳ್ಳಿ ಎಂದು ಕಾಲು ಎಳೆದಿದ್ದಾರೆ.