ಭಾರತೀಯ ಚಿತ್ರರಂಗದಲ್ಲಿ ಹೈಟ್, ವೈಟ್ ಬ್ಯೂಟಿ ಇಲ್ಲದೆಯೂ ನಟನೆಯಿಂದಲೇ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನವನ್ನು ಗಿಟ್ಟಿಸಿರುವ ಹಲವಾರು ನಟ-ನಟಿಯರಿದ್ದಾರೆ. ನಾಯಕನಾಗಿ ಹಾಗೂ ಖಳನಾಯಕನಾಗಿ ತನ್ನ ಅಭಿನಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿರುವ ಈ ನಟ ತನ್ನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿದ್ದಾರೆ.
ಆದರೆ ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ದುಡ್ಡಿಗಾಗಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ತಮ್ಮ ಹೈಟ್ ವೈಟ್‌ನಿಂದ ನಿರ್ದೇಶಕರಿಂದ ರಿಜೆಕ್ಟ್ ಆದರು. ಆದರೆ ಈಗ ಅವರು ರಜನಿಕಾಂತ್,ದಳಪತಿ ವಿಜಯ್ ಅವರಂತಹ ಅನೇಕ ಖ್ಯಾತ ನಟರೊಂದಿಗೆ ಕೆಲಸ ಮಾಡಿದ್ದಾರೆ. ಇವತ್ತು ಶಾರುಖ್ ಖಾನ್ ಜೊತೆಗೆ ನಟಿಸಿದ ಅವರ ಸಿನಿಮಾ ಬಿಡುಗಡೆಯಾಗಿದೆ. ಅವರು ಬೇರೆ ಯಾರೂ ಅಲ್ಲ ವಿಜಯ್ ಸೇತುಪತಿ
16 ಜನವರಿ 1978ರಂದು ಜನಿಸಿದ ವಿಜಯ್ ಸೇತುಪತಿ ಅವರು ಆರನೇ ತರಗತಿಯಲ್ಲಿ ಚೆನ್ನೈಗೆ ತೆರಳುವವರೆಗೂ ರಾಜಪಾಳ್ಯಂನಲ್ಲಿ ಬೆಳೆದರು. ಕೋಡಂಬಾಕ್ಕಂನ ಎಂಜಿಆರ್ ಹೈಯರ್ ಸೆಕೆಂಡರಿ ಸ್ಕೂಲ್ ಮತ್ತು ಲಿಟಲ್ ಏಂಜಲ್ಸ್ ಮ್ಯಾಟ್‌ನಲ್ಲಿ ವ್ಯಾಸಂಗ ಮಾಡಿದರು. ತೊರೈಪಾಕಂನಲ್ಲಿರುವ ಧನರಾಜ್ ಬೈದ್ ಜೈನ್ ಕಾಲೇಜಿನಲ್ಲಿ (ಮದ್ರಾಸ್ ವಿಶ್ವವಿದ್ಯಾಲಯದ ಅಂಗಸಂಸ್ಥೆ) ವಾಣಿಜ್ಯ ಪದವಿ ಪಡೆದರು. ಶಾಲಾ ದಿನಗಳಲ್ಲಿ ಅವರು ಎವರೇಜ್ ಸ್ಟೂಡೆಂಟ್ ಆಗಿದ್ದರು.
16ನೇ ವಯಸ್ಸಿನಲ್ಲಿ ನಮ್ಮವರ್ (1994) ಚಿತ್ರದಲ್ಲಿನ ಪಾತ್ರಕ್ಕಾಗಿ ಆಡಿಷನ್ ಮಾಡಿದನು. ಆದರೆ ಅವರ ಕಡಿಮೆ ಎತ್ತರದ ಕಾರಣದಿಂದ ತಿರಸ್ಕರಿಸಲ್ಪಟ್ಟರು. ಆ ನಂತರ ಚಿಲ್ಲರೆ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್‌ನಿಂದ ಹಿಡಿದು, ಫಾಸ್ಟ್ ಫುಡ್ ಜಾಯಿಂಟ್‌ನಲ್ಲಿ ಕ್ಯಾಷಿಯರ್, ಫೋನ್ ಬೂತ್ ಆಪರೇಟರ್‌ವರೆಗೆ ಹಣ ಸಂಪಾದಿಸಲು ಬೇರೆ ಬೇರೆ ಕೆಲಸಗಳನ್ನು ಮಾಡಿದರು.
ನಂತರ ಕಾಲೇಜು ಮುಗಿಸಿ ಸಗಟು ಸಿಮೆಂಟ್ ವ್ಯಾಪಾರದಲ್ಲಿ ಖಾತೆ ಸಹಾಯಕರಾಗಿ ಸೇರಿಕೊಂಡರು. ನಂತರ, ಅವರು ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಅಕೌಂಟೆಂಟ್ ಆಗಿ ತೆರಳಿದರು ಏಕೆಂದರೆ ಅವರು ತಮ್ಮ ಮೂವರು ಒಡಹುಟ್ಟಿದವರನ್ನೂ ಸಹ ನೋಡಿಕೊಳ್ಳಬೇಕಾಗಿತ್ತು. ದುಬೈನಲ್ಲಿ, ಅವರು ತಮ್ಮ ಭಾವಿ ಪತ್ನಿ ಜೆಸ್ಸಿಯನ್ನು ಆನ್‌ಲೈನ್‌ನಲ್ಲಿ ಭೇಟಿಯಾದರು ಮತ್ತು ಇಬ್ಬರೂ 2003ರಲ್ಲಿ ಮದುವೆಯಾದದರು.
ಕೈ ತುಂಬಾ ಸಂಬಳ ಸಿಕ್ಕರೂ ದುಬೈನ ಉದ್ಯೋಗದಿಂದ ಅತೃಪ್ತರಾಗಿ ಭಾರತಕ್ಕೆ ಮರಳಿದರು. ಮಾರ್ಕೆಟಿಂಗ್ ಕಂಪನಿಗೆ ಸೇರಿದರು. ನಂತರ ಅವರು ಚೆನ್ನೈ ಮೂಲದ ಥಿಯೇಟರ್ ಗ್ರೂಪ್ ಕೂತು-ಪಿ-ಪಟ್ಟಾರೈಗೆ ಲೆಕ್ಕಪರಿಶೋಧಕ ಮತ್ತು ನಟರಾಗಿ ಸೇರಿಕೊಂಡರು ಮತ್ತು ನಟರನ್ನು ಹತ್ತಿರದಿಂದ ಗಮನಿಸಿದರು.
2012 ವಿಜಯ್ ಸೇತುಪತಿ ಅವರ ವೃತ್ತಿಜೀವನದ ಮಹತ್ವದ ತಿರುವನ್ನು ಪಡೆದುಕೊಂಡಿತು. ಏಕೆಂದರೆ ಆ ವರ್ಷ ಬಿಡುಗಡೆಯಾದ ಮೂರು ಚಲನಚಿತ್ರಗಳು ವಾಣಿಜ್ಯಿಕವಾಗಿ ಯಶಸ್ವಿಯಾದವು ಮತ್ತು ಅವರ ಅಭಿನಯವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. 2012 ರಲ್ಲಿ ಬಿಡುಗಡೆಯಾದ ಮೂರು ಚಿತ್ರಗಳೆಂದರೆ ಸುಂದರಪಾಂಡಿಯನ್, ಕಾರ್ತಿಕ್ ಸುಬ್ಬರಾಜ್, ಮತ್ತು ಬಾಲಾಜಿ ಥರಣೀಧರನ್ ಅವರ ನಿರ್ದೇಶನದ ಚಿತ್ರ ಪಿಜ್ಜಾ, ನಂತರ 2015 ರಲ್ಲಿ, ಅವರು ವಿಘ್ನೇಶ್ ಶಿವನ್ ನಿರ್ದೇಶಿಸಿದ ರಾಮ್-ಕಾಮ್ ನಾನುಮ್ ರೌಡಿ ಧಾನ್‌ನಲ್ಲಿ ಕಾಣಿಸಿಕೊಂಡರು. ಇದು ಅವರ ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಗಿದೆ.
2012 ರಲ್ಲಿ ಬಿಡುಗಡೆಯಾದ ಮೂರು ಚಿತ್ರಗಳೆಂದರೆ ಸುಂದರಪಾಂಡಿಯನ್, ಕಾರ್ತಿಕ್ ಸುಬ್ಬರಾಜ್, ಮತ್ತು ಬಾಲಾಜಿ ಥರಣೀಧರನ್ ಅವರ ನಿರ್ದೇಶನದ ಚಿತ್ರ ಪಿಜ್ಜಾ, ಹಾಸ್ಯ ಮನರಂಜನೆಯ ನಡುವುಲ ಕೊಂಜಾಂ ಪಕ್ಕತ ಕಾಣೋಮ್. ನಂತರ 2015 ರಲ್ಲಿ, ಅವರು ವಿಘ್ನೇಶ್ ಶಿವನ್ ನಿರ್ದೇಶಿಸಿದ ರಾಮ್-ಕಾಮ್ ನಾನುಮ್ ರೌಡಿ ಧಾನ್‌ನಲ್ಲಿ ಕಾಣಿಸಿಕೊಂಡರು. ಇದು ಅವರ ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಗಿದೆ.
ಅಂದಿನಿಂದ, ನಟ ನಾಯಕನಾಗಿ ಮತ್ತು ಖಳನಾಯಕನಾಗಿ ಅದ್ಭುತ ಅಭಿನಯವನ್ನು ನೀಡಿದ್ದಾರೆ. ಅವರು ರಜನಿಕಾಂತ್ ಅಭಿನಯದ ಪೆಟ್ಟಾ, 2021ರಲ್ಲಿ ವಿಜಯ್ ಅಭಿನಯದ ಮಾಸ್ಟರ್, ಕಮಲ್ ಹಾಸನ್ ಅಭಿನಯದ ವಿಕ್ರಮ್ ಮತ್ತು ಹೆಚ್ಚಿನವುಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಈಗ, ನಟ ಅಟ್ಲಿ ನಿರ್ದೇಶನದ ಜವಾನ್‌ನಲ್ಲಿ ಖಳನಾಯಕನಾಗಿ ಪ್ರೇಕ್ಷಕರನ್ನು ಮೆಚ್ಚಿಸಲು ಸಿದ್ಧರಾಗಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಸೇರಿದಂತೆ ಇತರರು ನಟಿಸಿದ್ದಾರೆ.
ಸೂಪರ್ ಡಿಲಕ್ಸ್ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ನಟನು ಅತ್ಯುತ್ತಮ ಪೋಷಕ ನಟನಿಗಾಗಿರುವ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸದ್ಯ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ವಿಜಯ್ ಸೇತುಪತಿ ಒಬ್ಬರು. ನಟ ಶಾರುಖ್ ಖಾನ್ ಅಭಿನಯದ ಜವಾನ್‌ಗೆ ವಿಲನ್ ಪಾತ್ರಕ್ಕಾಗಿ 21 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.